ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಒಂದೂವರೆ ದಶಕಗಳ ಕಾಲ ಸಂಘಟನೆಯಲ್ಲಿ ದುಡಿದಿರುವ ಹಿರೇಮಗಳೂರು ಜಗದೀಶ್‌ಗೆ ಈ ಬಾರಿ ಸಿಡಿಎ ಅಧ್ಯಕ್ಷ ಸ್ಥಾನ ಕಲ್ಪಿಸಿಕೊಡಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಅವರಿಗೆ ಮುಖಂಡರುಗಳು ಮನವಿ ಸಲ್ಲಿಸಿದರು.

ಈ ಸಂಬಂಧ ಶಾಸಕರ ಕಚೇರಿಗೆ ನೂರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ದಲಿತಪರ ಮುಖಂಡರುಗಳು ಹಾಗೂ ಹಿರೇಮಗಳೂರು ಗ್ರಾಮಸ್ಥರು ಶನಿವಾರ ಸಂಜೆ ಆಗಮಿಸಿ ಹೆಚ್.ಡಿ.ತಮ್ಮಯ್ಯ ಅವರಿಗೆ ಮನವಿ ಸಲ್ಲಿಸಿ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಬೂತ್‌ಮಟ್ಟದಿಂದ ಶ್ರಮಿಸಿದ ಜಗದೀಶ್ ಅವರಿಗೆ ಅವಕಾಶ ಒದಗಿಸಿಕೊಡಬೇಕು ಎಂದರು.

ಬಳಿಕ ಮಾತನಾಡಿದ ಹಿರೇಮಗಳೂರು ಜಗದೀಶ್ ಪಕ್ಷದಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸಿ, ಪ್ರತಿಭಟನೆ, ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ. ಕಳೆದ ಮೂರು ಅವಧಿಯ ವಿಧಾನಸಭಾ ಚುನಾವಣೆ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಶ್ರಮಿಸಿರುವುದಲ್ಲದೇ ನಗರಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯ ರ್ಥಿಗಳ ಗೆಲುವಿನ ರೂವಾರಿಯಾಗಿದ್ದೇನೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ರಚನೆಗೊಂಡು ಪ್ರಸ್ತುತದವರೆಗೂ ಪರಿಶಿಷ್ಟ ಜಾತಿಗೆ ಅಧ್ಯಕ್ಷ ಸ್ಥಾನ ದೊರಕಿರುವುದಿಲ್ಲ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿರುವ ಕಾರಣ ೧೬ ವರ್ಷಗಳ ನಿರಂ ತರ ಸೇವೆಯನ್ನು ಪರಿಗಣಿಸುವ ಜೊತೆಗೆ ಪಕ್ಷಗಾಗಿ ದುಡಿದಿರುವ ತಮಗೆ ಸಿಡಿಎ ಅಧ್ಯಕ್ಷ ಕಲ್ಪಿಸಿಕೊಡುವ ಮೂಲಕ ಜನಾಂಗದ ಬೆಳವಣಿಗೆಗೆ ಒತ್ತು ನೀಡಬೇಕು ಎಂದರು.

ಮನವಿ ಮೇರೆಗೆ ಪ್ರತಿಕ್ರಿಯಿಸಿದ ಶಾಸಕ ಹೆಚ್.ಡಿ.ತಮ್ಮಯ್ಯ ಸಿಡಿಎ ಅಧ್ಯಕ್ಷ ಶಾಸಕರಿಂದ ಮಾತ್ರ ಅಂತಿಮಗೊಳ್ಳುವುದಿಲ್ಲ. ರಾಜ್ಯಮಟ್ಟದಲ್ಲಿ ತೀರ್ಮಾನವಾಗಬೇಕಿದೆ. ಅಧ್ಯಕ್ಷ ಸ್ಥಾನ ಸಂಬಂಧ ಹಲವಾರು ಅರ್ಜಿಗಳು ಬಂದಿರುವ ಹಿನ್ನೆಲೆಯಲ್ಲಿ ಸಮರ್ಪಕವಾಗಿ ಜನಾಂಗಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಲಾ ಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಲಕ್ಷ್ಮಣ್, ಮುಂಡಾಳ ಸಮಾಜದ ತಾಲ್ಲೂಕು ಅಧ್ಯಕ್ಷ ವಾಸು, ದಾಸರಹಳ್ಳಿ ಗ್ರಾ.ಪಂ. ಸದಸ್ಯ ಮಂಜುನಾಥ್, ಮುಖಂಡರುಗಳಾದ ಸುರೇಶ್, ರಾಜೇಶ್, ರಾಜು, ಡಿ. ಸುರೇಶ್, ಹೆಚ್.ಪಿ.ಸುರೇಶ್, ಯೋಗೇಶ್, ಸಂತೋಷ್, ಕೇಶವಮೂರ್ತಿ, ವಿನೋದ್, ಸಿಂದಿಗೆರೆ ಅಶೋ ಕ್, ಗ್ರಾಮಸ್ಥರುಗಳಾದ ಉಮೇ ಶ್, ಕಂಠಣ್ಣ, ಲೋಕೇಶ್, ಸತೀಶ್ ಮತ್ತಿತರರು ಹಾಜರಿದ್ದರು.

Jagadish urges the MLAs to provide the post of CDA president