ಚಿಕ್ಕಮಗಳೂರು: ಶೃಂಗೇರಿಯ ಶಾಸಕ ರಾಜೇಗೌಡ (RajeGowda) ಆದಾಯಕ್ಕೂ ಮೀರಿ ಅಕ್ರಮವಾಗಿ 200 ಕೋಟಿ ರೂ.ಗೂ ಅಧಿಕ ಆಸ್ತಿ ಸಂಪಾದಿಸಿದ್ದಾರೆ, ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ಮೋಸ ಮಾಡಿದ್ದಾರೆ ಎಂದು ಇಂದು ಲೋಕಾಯುಕ್ತದಲ್ಲಿ (Lokayukta)  ದೂರು ದಾಖಲಾಗಿದೆ.

ರಾಜೇಗೌಡ ಮತ್ತು ಕುಟುಂಬಸ್ಥರ ವಿರುದ್ಧ ವಿಜಯಾನಂದ ಸಿಪಿ ದೂರು ನೀಡಿದ್ದು ಶಬಾನ್ ರಂಜಾನ್ ಫಾರ್ಮ್‍ನ 266 ಎಕರೆಯಲ್ಲಿ ವಿವಿಧ ಪ್ಲಾಂಟ್‌ ಇರುವ ಭೂಮಿಯನ್ನು ರಾಜೇಗೌಡ ಕುಟುಂಬ ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಇದು ಈ ಮೊದಲ ಮೃತ ಸಿದ್ದಾರ್ಥ ಅವರ ಹೆಸರಿನಲ್ಲಿ ಇತ್ತು. ಅವರ ಮರಣದ ಬಳಿಕ ಅವರ ಪತ್ನಿ ಮತ್ತು ಮಗನ ಹೆಸರಿನಲ್ಲಿ ಇತ್ತು ಅದನ್ನ ರಾಜೇಗೌಡರು ತಮ್ಮ ಪ್ರಭಾವ ಬೀರಿ ಅವರ ಪತ್ನಿ ಹಾಗೂ ಮಗನ ಹೆಸರನ್ನು ಫಾರ್ಮ್‍ಗೆ ಸೇರಿಸಿದ್ದಾರೆ ಎಂದು ವಕೀಲ ದಿನೇಶ್ ಆರೋಪ ಮಾಡಿದ್ದಾರೆ.

ಸಿದ್ದಾರ್ಥ ಕುಟುಂಬ 1992ರಲ್ಲಿ ಶಾಬನ್ ರಂಜನ್ ಟ್ರಸ್ಟ್‌ನಿಂದ ಸುಮಾರು 266 ಎಕರೆ 38 ಗುಂಟೆ, ಬಂಗ್ಲೆ, ಸಿಬ್ಬಂದಿ ಕ್ವಾಟರ್ಸ್ ಸೇರಿದಂತೆ ಖರೀದಿ ಮಾಡಿದ್ರು, ಇದನ್ನು ಖರೀದಿ ಮಾಡಲು ಶಾಬನ್ ರಂಜನ್ ಪಾಲುದಾರಿಕೆಗೆ ಸೇರಿಕೊಂಡಿದ್ರು, ಆದ್ರೆ ಇದೀಗ ಸಿದ್ದಾರ್ಥ ಅವರ ಪತ್ನಿ ಮಗನ ಹೆಸರಿನಲ್ಲಿದ್ದ ಪ್ರಾಪರ್ಟಿ ರಾಜೇಗೌಡರ ಕುಟುಂಬಕ್ಕೆ ಹಸ್ತಾಂತರ ಅಗಿದೆ. ಹಸ್ತಾಂತರ ಮಾಡಿಕೊಂಡಿದ್ದಕ್ಕೆ ಯಾವುದೇ ಹಣಕಾಸು ವ್ಯವಹಾರದ ಲೆಕ್ಕಪತ್ರ ಇಲ್ಲ.

ಜೊತೆಗೆ ಈ ಹಿಂದೆ 2018 ಚುನಾವಣೆಗೆ ಸ್ಪರ್ಧೆ ಮಾಡುವಾಗ ಒಟ್ಟು 30 ಕೋಟಿ ಪ್ರಾಪರ್ಟಿ ಕ್ಲೈಮ್ ಮಾಡಿದ್ರು, ಅದರಲ್ಲಿ 25 ಕೋಟಿ ಬೇರೆ ಬೇರೆ ಹೊಣೆಗಾರಿಕೆ ಇರುವುದಾಗಿ ದಾಖಲೆ ನೀಡಿದ್ರು, ಈ ಹಿನ್ನೆಲೆ ಸರ್ಕಾರದ ಬೊಕ್ಕಸಕ್ಕೆ ಮತ್ತು ಅಕ್ರಮ ಹಣ ಗಳಿಕೆ, ಅಧಿಕಾರ ದುರುಪಯೋಗ ಪಡಿಸಿಕೊಂಡು ಭ್ರಷ್ಟಾಚಾರ ಮಾಡಿ ಹಣ ಆಸ್ತಿ ಪಾಸ್ತಿ ಮಾಡುವ ಮೂಲಕ ನಷ್ಟ ಮಾಡಿರುವುದಾಗಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಆದಾಯ ತೆರಿಗೆ ಮತ್ತು ಇಡಿ ಕಚೇರಿಗೆ ದಾಖಲೆಗಳ ಸಮೇತ ದೂರು ನೀಡಲು ವಕೀಲರು ನಿರ್ಧಾರ ಮಾಡಿದ್ದಾರೆ.

Lokayukta files complaint against MLA RajeGowda