ಚಿಕ್ಕಮಗಳೂರು: ಸ್ನೇಹಿತರ ಮಧ್ಯೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತರೀಕೆರೆ ಪಟ್ಟಣದ ಎಪಿಎಂಸಿ ಯಾರ್ಡ್ನಲ್ಲಿ ನಡೆದಿದೆ.

ಓಂಕಾರ (30) ಕೊಲೆಯಾದ ವ್ಯಕ್ತಿ. ಇನ್ನು ಸುನೀಲ್, ಸಂತೋಷ್, ಧನರಾಜ್ ಮತ್ತು ಇನ್ನಿಬ್ಬರು ಸೇರಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ರಾತ್ರಿ ಮನೆಯಲ್ಲಿದ್ದ ಓಂಕಾರನನ್ನು ಎಪಿಎಂಸಿ ಯಾರ್ಡ್​ ಬಳಿ ಕರೆತಂದ ಈ ಐವರು ಹತ್ಯೆ ಮಾಡಿದ್ದಾರೆ. ಸದ್ಯ ಪೊಲೀಸರು ಮೂವರನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಶೋಧ ನಡೆಸಿದ್ದಾರೆ. ಈ ಬಗ್ಗೆ ತರೀಕೆರೆ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.