ಚಿಕ್ಕಮಗಳೂರು:  ಪ್ರೌಢಶಾಲಾ ಆವರಣದಲ್ಲಿ ವೃದ್ದೆಯೊಬ್ಬರನ್ನು ಅತ್ಯಾಚಾರವೆಸಗಿ ಕೊ ಲೆಗೈದಿರುವ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭೀಮಾ ಕೊರೆ ಗಾಂವ್ ಆಚರಣಾ ಸಮಿತಿ ಮುಖಂಡರುಗಳು ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.

ಈ ಸಂಬಂಧ ಮೂಡಿಗೆರೆ ವೃತ್ತ ನಿರೀಕ್ಷಕ ಸೋಮೇಗೌಡ ಅವರಿಗೆ ಮನವಿ ಸಲ್ಲಿಸಿದ ಸಮಿತಿ ಮುಖ ಂಡರುಗಳು ವೃದ್ದೆ ಕಲ್ಯಾಣಮ್ಮನವರ ಸಾವಿಗೆ ಕಾರಣರಾದ ಆರೋಪಿಗಳಿಗೆ ಕೂಡಲೇ ಬಂಧಿಸಬೇಕು ಎಂ ದು ಮಂಗಳವಾರ ಒತ್ತಾಯಿಸಿದರು.

ಬಳಿಕ ಮಾತನಾಡಿದ ಸಮಿತಿ ಅಧ್ಯಕ್ಷ ಸುಂದ್ರೇಶ್ ಕನ್ನಾಪುರ ಮೂಡಿಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವೃದ್ದೆ ಕಲ್ಯಾಣಮ್ಮ ಎಂಬ ಮಹಿಳೆಯ ಶವ ಸಾರ್ವಜನಿಕರಿಗೆ ಕಂಡುಬಂದ ಹಿನ್ನೆಲೆ ಪೊಲೀಸ್ ಇಲಾಖೆ ಮಾಹಿತಿ ನೀಡಲಾಯಿತು. ತದನಂತರ ಮಹಿಳೆಯ ಶವ ಗಮನಿಸಿದಾಗ ಅತ್ಯಾಚಾರವೆ ಸಗಿ ಕೊಲೆಗೈದಿದೆ ಎಂಬ ಬಗ್ಗೆ ಚರ್ಚೆಯಾಗುತ್ತಿದೆ ಎಂದರು.

ಈ ಮಹಿಳೆಯು ಅನಾಥೆ ಎಂದು ಸ್ಥಳೀಯವಾಗಿ ತಿಳಿದಿದೆ. ಹೀಗಾಗಿ ಅತ್ಯಾಚಾರವೆಸಗಿ ಕೊಲೆ ಮಾ ಡಿರುವುದು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ನಿಜವಾದ ಆರೋಪಿಗಳನ್ನು ಬಂಧಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಮಿತಿ ಕಾರ್ಯದರ್ಶಿ ಸುಂದ್ರೇಶ್ ಹೊಯ್ಸಳಲು ಮಾತನಾಡಿ ಇಂಥ ಹೀನಾ ಪ್ರಕರಣದಿಂದ ಮಲೆ ನಾಡು ಹಾಗೂ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿರುವ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವತಿ ಯರ ವಿದ್ಯಾಭ್ಯಾಸಕ್ಕೆ ಹಾಗೂ ಉದ್ಯೋಗಕ್ಕೆ ತೆರಳುವ ಮಹಿಳೆಯರಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದರು.

ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹಾಗೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಬೇಕು. ಅಲ್ಲದೇ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಮಿತಿ ಸದಸ್ಯರುಗಳಾದ ಹರೀಶ್ ಕೆಲ್ಲೂರು, ಭಾನುಪ್ರಕಾಶ್ ಹೆಸ್ಕಲ್, ಪೂರ್ಣೇ ಶ್ ಬೆಟ್ಟದಮನೆ, ಮಂಜುನಾಥ್ ಚಕ್ಕುಡಿಗೆ, ವಿಶ್ವನಾಥ್.ಕೃ?ಪ್ಪನಗರ, ಅಶೋಕ.ಮಕೋನಹಳ್ಳಿ, ಸತೀಶ್ ಮಕೋನಹಳ್ಳಿ, ಇಂದ್ರೇಶ್ ಜೈನುಬೈಲ್, ಮಲ್ಲೇಶ್ ಹೊಸಳ್ಳಿ ಮತ್ತಿತರರಿದ್ದರು.

Appeal to the Circle Inspector to arrest the murdered accused