ಬೆಂಗಳೂರು:  ರಾಜ್ಯ ಸರ್ಕಾರ ನೀಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ ಪ್ರಕಟವಾಗಿದೆ. 66 ವಿವಿಧ ವಲಯದ ಸಾಧಕರಿಗೆ ಹಾಗೂ 10 ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ 2021ಅನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್ ತಿಳಿಸಿದ್ದಾರೆ.

ಕನ್ನಡದ ಮೇರು ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನದಿಂದ ಪ್ರಶಸ್ತಿ ಘೋಷಣೆಯಲ್ಲಿ ವಿಳಂಬವಾಯಿತು. ಅವರ ಅಂತ್ಯಕ್ರಿಯೆಯ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿದ ನಂತರ ಈ ಬಾರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 66 ಮಂದಿಗೆ 2020-21ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿರುವುದಾಗಿ ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿ

ಸಂಘ ಸಂಸ್ಥೆಗಳು: ಶ್ರೀ ವೀರೇಶ್ವರ ಪುಣ್ಯಾಶ್ರಮ, ಅಂಧ ಮಕ್ಕಳ ಶಾಲೆ , ಗದಗ,  ಕರ್ನಾಟಕ ಹಿಮೋಫೀಲಿಯಾ ಸೊಸೈಟಿ , ದಾವಣಗೆರೆ,  ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಕಲಬುರಗಿ,  ಶ್ರೀ ರಾಮಕೃಷ್ಣಾಶ್ರಮ ಮಂಗಳೂರು,  ಆಲ್ ಇಂಡಿಯಾ ಜೈನ ಯೂಥ್ ಫೆಡರೇಶನ್ ಹುಬ್ಬಳ್ಳಿ,  ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ,  ಉತ್ಸವ್ ರಾಕ್ ಗಾರ್ಡೆನ್ ಹಾವೇರಿ,  ಅದಮ್ಯ ಚೇತನ ಬೆಂಗಳೂರು,  ಸ್ಟೆಪ್ ಒನ್ ಬೆಂಗಳೂರು,  ಬನಶಂಕರಿ ಮಹಿಳಾ ಸಮಾಜ ಬೆಂಗಳೂರು

ಸಾಹಿತ್ಯ ಕ್ಷೇತ್ರ:  ಮಹಾದೇವ ಶಂಕನಪುರ – ಚಾಮರಾಜನಗರ,  ಪ್ರೊ.ಡಿ.ಟಿ.ರಂಗಸ್ವಾಮಿ – ಚಿತ್ರದುರ್ಗ,  ಜಯಲಕ್ಷ್ಮೀ ಮಂಗಳಮೂರ್ತಿ – ರಾಯಚೂರು,  ಅಜ್ಜಂಪುರ ಮಂಜುನಾಥ್ – ಚಿಕ್ಕಮಗಳೂರು,  ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ – ವಿಜಯಪುರ, ಸಿದ್ಧಪ್ಪ ಬಿದರಿ – ಬಾಗಲಕೋಟೆ

ರಂಗಭೂಮಿ ಕ್ಷೇತ್ರ:  ಫಕೀರಪ್ಪ ರಾಮಪ್ಪ ಕೊಡಾಯಿ – ಹಾವೇರಿ,  ಪ್ರಕಾಶ್ ಬೆಳವಾಡಿ – ಚಿಕ್ಕಮಗಳೂರು,  ರಮೇಶ್ ಗೌಡ ಪಾಟೀಲ್ – ಬಳ್ಳಾರಿ,  ಮಲ್ಲೇಶಯ್ಯ ಎನ್ – ರಾಮನಗರ,  ಸಾವಿತ್ರಿ ಗೌಡರ್ – ಗದಗ.

ಜಾನಪದ ಕ್ಷೇತ್ರ:  ಆರ್.ಬಿ ನಾಯಕ – ವಿಜಯಪುರ,  ಗೌರಮ್ಮ ಹುಚ್ಚಪ್ಪ ಮಾಸ್ತರ್ – ಶಿವಮೊಗ್ಗ,  ದುರ್ಗಪ್ಪ ಚೆನ್ನದಾಸರ – ಬಳ್ಳಾರಿ,  ಬನ್ನಂಜೆ ಬಾಬು ಅಮೀನ್ – ಉಡುಪಿ,  ಮಲ್ಲಿಕಾರ್ಜುನ ರಾಚಪ್ಪ ಮುದಕವಿ – ಬಾಗಲಕೋಟೆ,  ವೆಂಕಪ್ಪ ಗೋವಿಂದಪ್ಪ ಭಜಂತ್ರಿ – ಧಾರವಾಡ, ಮಹಾರುದ್ರಪ್ಪ ವೀರಪ್ಪ ಇಟಗಿ – ಹಾವೇರಿ

ಸಂಗೀತ: ತ್ಯಾಗರಾಜು ಸಿ ( ನಾದಸ್ವರ)- ಕೋಲಾರ.  ಹೆರಾಲ್ಡ್ ಸಿರಿಲ್ ಡಿಸೋಜಾ- ದಕ್ಷಿಣ ಕನ್ನಡ

ಶಿಲ್ಪಕಲೆ:  ಡಾ. ಜಿ. ಜ್ಞಾನಾನಂದ -ಚಿಕ್ಕಬಳ್ಳಾಪುರ,  ವೆಂಕಣ್ಣ ಚಿತ್ರಗಾರ- ಕೊಪ್ಪಳ