ಚಿಕ್ಕಮಗಳೂರು: ನಗರದಲ್ಲಿ ಹೊಸದಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಪರಿಶಿಷ್ಟ ಜಾತಿ, ಪಂಗಡದ ನಿರುದ್ಯೋಗಿಗಳಿಗೆ ಮೀಸಲಿಡಬೇಕು ಎಂದು ಬಿಜೆಪಿ ಎಸ್.ಸಿ. ಘಟಕದ ಮುಖಂಡರುಗಳು ಶಿರಸ್ತೇದಾರ್ ಹೇಮಂತ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ಕೆ.ಎಂ.ರಸ್ತೆಯ ಕತ್ರಿಮಾರಮ್ಮ ದೇವಸ್ಥಾನದ ಸಮೀಪದಲ್ಲಿ ನೂತನವಾಗಿ ವಾಣಿಜ್ಯ ಮಳಿಗೆಗಳನ್ನು ಎಸ್ಸಿ, ಎಸ್ಟಿ ಜನಾಂಗದ ನಿರುದ್ಯೋಗ ಯುವಕ-ಯುವತಿಯರಿಗೆ ಒದಗಿಸಿಕೊಡಬೇಕು ಎಂದು ತಿಳಿಸಿದರು.

ದಲಿತ ಸಮುದಾಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ಷೇತ್ರದ ಮಾಜಿ ಶಾಸಕರು ೨೦೨೦ರಲ್ಲಿ ಸರ್ಕಾ ರಕ್ಕೆ ಪತ್ರವನ್ನು ಬರೆದು ಪ.ಜಾತಿ, ಪಂಗಡದ ಜನಾಂಗದವರ ವ್ಯಾಪಾರ ಉದ್ದೇಶಕ್ಕಾಗಿ ೩ ಕೋಟಿ ಅನು ದಾನ ಸ್ವಬಲದಿಂದ ಬಿಡುಗಡೆಗೊಳಿಸಿದ್ದಾರೆ ಎಂದು ಹೇಳಿದರು.

ವಾಣಿಜ್ಯ ಮಳಿಗೆಗಳು ಲೋಕೋಪಯೋಗಿ ಇಲಾಖೆಯವರು ೩ ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿ ಎಸ್ಸಿ, ಎಸ್ಟಿ ನಿರುದ್ಯೋಗಳಿಗೆ ನೀಡಬೇಕೆಂದಿದೆ. ಆದರೆ ನಗರಸಭೆಯವರು ಸರ್ಕಾರದ ಆದೇಶವನ್ನು ಉಲ್ಲಂ ಘಿಸಿ ಸಾಮಾನ್ಯ ವರ್ಗಗಳಿಗೆ ಮಳಿಗೆಗಳನ್ನು ನೀಡುತ್ತಿರುವುದು ಸಮುದಾಯಕ್ಕೆ ಎಸಗಿರುವ ದೊಡ್ಡ ವಂಚನೆ ಯಾಗಿದೆ ಎಂದು ಆರೋಪಿಸಿದರು.

ಹೀಗಾಗಿ ನಗರಸಭೆಯಲ್ಲಿ ನಡೆದ ಹರಾಜು ಪ್ರಕ್ರಿಯೆಯನ್ನು ಮೊಟಕುಗೊಳಿಸಿ ಪರಿಶಿಷ್ಟ ಜಾತಿ, ಪಂಗಡದ ಯುವಕ-ಯುವತಿಯರಿಗೆ ನೀಡಬೇಕು. ಒಂದು ವೇಳೆ ನಿರ್ಲಕ್ಷ್ಯವಹಿಸಿದರೆ ನಗರಸಭೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ಘಟಕದ ನಗರ ಮಂಡಲ ಉಪಾಧ್ಯಕ್ಷ ಹಿರೇಮಗಳೂರು ಬಿ.ರೇವ ನಾಥ್, ಗ್ರಾಮಾಂತರ ಸಹ ವಕ್ತಾರ ಹಂಪಯ್ಯ, ಮುಖಂಡರುಗಳಾದ ಜಗದೀಶ್, ಧನಂಜಯ್, ಶಿವ ಕುಮಾರ್, ಧರ್ಮರಾಜ್, ಶಿವಪ್ರಸಾದ್, ನಾಗಣ್ಣ ಮತ್ತಿತರರು ಹಾಜರಿದ್ದರು.

BJP S.C. Appeal to the district president of the unit Kuruvangi Venkatesh Shirastedar Hemanthkumar