ಮೂಡಿಗೆರೆ:  ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸ್ವಾಮಿ ದೇವಾಲಯಕ್ಕೆ ಶಿವರಾತ್ರಿ ಪ್ರಯುಕ್ತ ಪಾದಯಾತ್ರೆ ಮೂಲಕ ಆಗಮಿಸುತ್ತಿರುವ ಯಾತ್ರಿಕರಿಗೆ ಮೂಡಿಗೆರೆ ಚೆಕ್‌ಪೋಸ್ಟ್ ಬಳಿ ಒಂದು ದಿನದ ಮಟ್ಟಿಗೆ ವಿವೇಕ ಜಾಗೃತ ಬಳಗದ ವತಿಯಿಂದ ಅನ್ನದಾನ ಹಾಗೂ ಸದ್ವಿಚಾರ ಕಾರ್ಯಕ್ರಮವನ್ನು ಮಂಗಳವಾರ ನಡೆಸಲಾಯಿತು.

ಈ ಕುರಿತು ಮಾತನಾಡಿದ ಬಳಗದ ಅಧ್ಯಕ್ಷ ರಾಜೀವ್ ಕಳೆದ ನಾಲ್ಕು ದಶಕಗಳಿಂದ ಪಾದಯಾತ್ರಿಕರಿಗೆ ಶಿವರಾತ್ರಿ ಸಮಯದಲ್ಲಿ ಅನ್ನಸಂತರ್ಪಣೆ, ಧಾರ್ಮಿಕ ಕಾರ್ಯಕ್ರಮವನ್ನು ಮುಂಜಾನೆ ೭ ರಿಂದಲೇ ಆಯೋಜಿಸ ಲಾಗಿತ್ತು. ಜೊತೆಗೆ ವಿಶ್ರಾಂತಿಗೃಹ ನಿರ್ಮಿಸಿ ಆಯಾಸವನ್ನು ಕಡಿಮೆಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಮಹಾಶಿವರಾತ್ರಿ ಹಿನ್ನೆಲೆ ಮೈಸೂರು, ಹಾಸನ, ಬೆಂಗಳೂರು, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತಾಧಿಗಳು ಧರ್ಮಸ್ಥಳಕ್ಕೆ ತೆರಳುತ್ತಿದ್ದು ಯಾತ್ರಿಕರಿಗೆ ಒಂದು ದಿನದ ಮಟ್ಟಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾಸ್ತವ್ಯ, ಕುಡಿಯುವ ನೀರು ಸೇರಿದಂತೆ ಊಟೋಪಚಾರ ವ್ಯವಸ್ಥೆಯನ್ನು ಕಲ್ಪಿಸಿದ್ದು ಸರಿಸುಮಾರು ಎರ ಡು ಸಾವಿರ ಮಂದಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು ಎಂದರು.

ಈ ಸಂದರ್ಭದಲ್ಲಿ ತ್ರಿಮೂರ್ತಿ ದೇಗುಲದ ವ್ಯವಸ್ಥಾಪಕ ನಂಜುಂಡಪ್ಪ, ಬಳಗದ ಸೇವಾಶ್ರಿ ಘಟಕದ ಮುಖ್ಯಸ್ಥ ಮಹೇಂದರ್ ಸಿಂಗ್, ಕಾರ್ಯಕರ್ತರುಗಳಾದ ರಾಜು, ಸ್ವರೂಪ್ ಶೆಟ್ಟಿ, ಉಮೇಶ್, ವಿವೇಕಶ್ರೀ ತಂಡದ ಪ್ರಕಾಶ್ ಆರ್, ಪವಿತ್ರ ಪೂರ್ಣೇಶ್, ಶಾಂತ ನಂಜುಂಡಪ್ಪ ಹಾಗೂ ಖಜಾಂಚಿ ವೀಣ್ ಉಪಸ್ಥಿತರಿದ್ದರು.

Food donation to the hikers by Viveka Vigil team