ಜೊತೆ ಜೊತೆಯಲಿ (jothe jotheyali) ಧಾರಾವಾಹಿಯಲ್ಲಿ ಊಹಿಸದೇ ಇರುವಂತಹ ಮಹಾ ತಿರುವು ನೀಡುವ ಮೂಲಕ ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದ್ದಾರೆ ಸೀರಿಯಲ್ ತಂಡ. ಧಾರಾವಾಹಿಯಿಂದ ಅನಿರುದ್ಧಗೆ (Aniruddha) ಗೇಟ್ ಪಾಸ್ ಕೊಟ್ಟ ಬಳಿಕ ಆರ್ಯವರ್ಧನ್ (Aryavardhan) ಪಾತ್ರವನ್ನು ಏನು ಮಾಡುತ್ತಾರೆ ಎಂಬ ಕುತೂಹಲ ಸಹಜವಾಗಿ ನೋಡುಗರಿಗೆ ಇತ್ತು. ಕಲಾವಿದರು ಬದಲಾಗುತ್ತಾರಾ? ಅಥವಾ ಪಾತ್ರವನ್ನೇ ಇಲ್ಲವಾಗಿಸುತ್ತಾರೆ ಎಂಬ ಚರ್ಚೆ ಶುರುವಾಗಿತ್ತು. ಎಲ್ಲ ಚರ್ಚೆಯನ್ನೂ ಮೀರಿ ಹೊಸ ಕಲ್ಪನೆಯೊಂದಿಗೆ ಆರ್ಯವರ್ಧನ್ ಪಾತ್ರವನ್ನು ಉಳಿಸಿಕೊಂಡಿದ್ದಾರೆ ನಿರ್ದೇಶಕರು

ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ (Harish Raj) ಆಯ್ಕೆಯಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಆರ್ಯವರ್ಧನ್ ಅವರ ಸಹೋದರ ಸುಭಾಷ್ ದೇಸಾಯಿ ಪಾತ್ರವನ್ನು ಹರೀಶ್ ರಾಜ್ ನಿರ್ವಹಿಸುತ್ತಿದ್ದಾರೆ. ಹರೀಶ್ ರಾಜ್ ಪಾತ್ರ ಬಂದು ಇನ್ನೂ ಒಂದು ವಾರವಾಗಿಲ್ಲ. ಆಗಲೇ ಆ ಪಾತ್ರಕ್ಕೆ ಆಕ್ಸಿಡೆಂಟ್ ಮಾಡಿ, ಸಾಯಿಸೇ ಬಿಟ್ಟಿದ್ದಾರೆ. ಅರರೇ.. ಇಷ್ಟು ಬೇಗ ಪಾತ್ರ ಸತ್ತು ಹೋಯಿತಾ ಎನ್ನುವಷ್ಟರಲ್ಲೇ ಅಲ್ಲೊಂದು ಟ್ವಿಸ್ಟ್ ಕೊಟ್ಟಿದೆ ಧಾರಾವಾಹಿ ತಂಡ. ಆಕ್ಸಿಡೆಂಟ್ ಎನ್ನುವ ಘಟನೆಯೊಂದನ್ನು ಸೃಷ್ಟಿ ಮಾಡಿ, ಆರ್ಯವರ್ಧನ್ ಮತ್ತು ಸುಭಾಷ್ ದೇಸಾಯಿ (Subhash Desai) ಪಾತ್ರವನ್ನು ಜೀವಂತವಾಗಿಡುವ ತಂತ್ರವನ್ನು ಬಳಸಿಕೊಳ್ಳಲಾಗುತ್ತಿದೆ.  ಇದನ್ನೂ ಓದಿ:‘ಈ ಶನಿವಾರ ನಿನ್ನ ಮನೆಗೆ ಕಳಿಸ್ತಾರೆ’ ಎಂದು ಗುರೂಜಿಗೆ ಭವಿಷ್ಯ ನುಡಿದ ಸೋನು ಶ್ರೀನಿವಾಸ್ ಗೌಡ

ಒಂದು ಕಡೆ ಆರ್ಯವರ್ಧನ್ ಗೆ ಕಾರು ಅಪಘಾತವಾಗಿ ಆಸ್ಪತ್ರೆಗೆ ಸೇರಿದ್ದಾನೆ. ಮತ್ತೊಂದು ಕಡೆ ಆತ್ಮಹತ್ಯೆಗೆ ಯತ್ನಿಸಿದ್ದ ಸುಭಾಷ್ ದೇಸಾಯಿಯನ್ನೂ ಅದೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್ಯವರ್ಧನ್ ಮುಖ ನುಜ್ಜುಗುಜ್ಜಾಗಿರುವುದರಿಂದ ಪ್ಲಾಸ್ಟಿಕ್ ಸರ್ಜರಿಗೆ ವೈದ್ಯರು ಸಜೆಸ್ಟ್ ಮಾಡಿದ್ದಾರೆ. ಈ ಕಡೆ ಸುಭಾಷ್ ದೇಸಾಯಿ ಸತ್ತಿರುವ ಕುರಿತು ಮಾತುಕತೆ ಆಗಿದೆ. ಇಬ್ಬರ ಮಕ್ಕಳನ್ನು ಈ ಸ್ಥಿತಿಯಲ್ಲಿ ಕಂಡು ಅಳುತ್ತಿರುವ ತಾಯಿಗೆ ವೈದ್ಯರೊಂದು ಸಲಹೆ ನೀಡುತ್ತಾರೆ. ಅದುವೇ ಫೇಸ್ ಟ್ರಾನ್ಸ್‍ ಪ್ಲಾಂಟ್ (Face TransPlant).

ವೈದ್ಯಕೀಯ ಲೋಕದ ಹೊಸ ಆವಿಷ್ಕಾರ ಫೇಸ್ ಟ್ರಾನ್ಸ್‍ಪ್ಲಾಂಟ್. ಒಬ್ಬರ ಮುಖಕ್ಕೆ ಇನ್ನೊಬ್ಬರ ಮುಖ ಜೋಡಿಸುವುದು. ಹಾಗಾಗಿ ಹರೀಶ್ ರಾಜ್ ಮುಖವನ್ನು ಅನಿರುದ್ಧ ಮುಖಕ್ಕೆ ಅಂಟಿಸಿ, ಹೊಸ ಆರ್ಯವರ್ಧನ್ ಪಾತ್ರವನ್ನು ಸೃಷ್ಟಿ ಮಾಡಲಾಗುತ್ತಿದೆ. ಹಾಗಾಗಿ ಅನಿರುದ್ಧಗೆ ಗೇಟ್ ಪಾಸ್ ಕೊಟ್ಟು ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಅವರನ್ನು ಫಿಕ್ಸ್ ಮಾಡುವ ತಂತ್ರವನ್ನು ಹೆಣೆಯಲಾಗಿದೆ. ಇದು ಯಾರೂ ಊಹಿಸದೇ ಇರುವಂತಹ ತಂತ್ರ. ಮೊದಲ ಬಾರಿಗೆ ಕಿರುತೆರೆಯಲ್ಲಿ ಅದನ್ನು ಬಳಸಲಾಗಿದೆ.

Gate pass for Aniruddha