ದೊಡ್ಮನೆಯಲ್ಲಿ ಸದಾ ಒಂದಲ್ಲಾ ಒಂದು ವಿಚಾರವಾಗಿ ಹೈಲೈಟ್ ಆಗುತ್ತಿದ್ದ ಸ್ಪರ್ಧಿ ಅಂದರೆ ಪ್ರಶಾಂತ್ ಸಂಬರ್ಗಿ (Prashanth Sambargi) ಇದೀಗ ಬಿಗ್ ಬಾಸ್ (Bigg Boss) ಮನೆಯಿಂದ ಹೊರಬಂದಿದ್ದಾರೆ. 12ನೇ ವಾರಕ್ಕೆ ಸಂಬರ್ಗಿ ಆಟಕ್ಕೆ ಬ್ರೇಕ್ ಬಿದ್ದಿದೆ‌.

ಸಂಬರ್ಗಿ ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಈ ಬಾರಿ ಪ್ರವೀಣರ ಸಾಲಿನಲ್ಲಿ ಒಬ್ಬರಾಗಿ ಬಿಗ್ ಬಾಸ್ ಸೀಸನ್ 9ಕ್ಕೆ ಕಾಲಿಟ್ಟಿದ್ದರು. ಆಟದಲ್ಲಿ ಅದೆಷ್ಟರ ಮಟ್ಟಿಗೆ ಸೈ ಎನಿಸಿಕೊಂಡಿದ್ದರೋ ವಿವಾದದ ಮೂಲಕವೂ ಅಷ್ಟೇ ಹೈಲೈಟ್ ಆಗಿದ್ದರು. ಇದೀಗ ದೊಡ್ಮನೆಯಿಂದ ಸಂಬರ್ಗಿಗೆ ಗೇಟ್ ಪಾಸ್ ಸಿಕ್ಕಿದೆ‌.

ಬಿಗ್ ಬಾಸ್ ಮನೆಯ ಆಟ 12 ವಾರಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. 12ನೇ ವಾರಕ್ಕೆ ಪ್ರಶಾಂತ್ ಸಂಬರ್ಗಿ ಆಟಕ್ಕೆ ಬ್ರೇಕ್ ಬಿದ್ದಿದೆ. ತನಗೆ ಸಿಕ್ಕಿರುವ ಬಿಗ್ ಬಾಸ್ ಸೀಸನ್‌ನ 2 ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಸಂಬರ್ಗಿ ಸೋತಿದ್ದಾರೆ. ಕಾವ್ಯಶ್ರೀ ಗೌಡ ನಂತರ ಪ್ರಶಾಂತ್ ಸಂಬರ್ಗಿ ಮನೆಯಿಂದ ಹೊರನಡೆದಿದ್ದಾರೆ.

Gate pass for Prashanth Sambargi