ಇಸ್ಲಾಮಾಬಾದ್: ಪಾಕಿಸ್ತಾನದ ಯೂಟ್ಯೂಬರ್ (Pakistani Youtuber) ಒಬ್ಬರು ತಮ್ಮ ಮದುವೆಯ ದಿನದಂದು ತನ್ನ ಪತ್ನಿಗೆ (Wife) ಕತ್ತೆಯನ್ನು (Donkey) ಉಡುಗೊರೆಯಾಗಿ (Gift) ನೀಡಿದ್ದಾರೆ. ಕರಾಚಿಯ ಯೂಟ್ಯೂಬರ್ ಅಜ್ಲಾನ್ ಶಾ ಅವರು ಆರತಕ್ಷತೆಯಲ್ಲಿ ಕತ್ತೆ ಮರಿಯೊಂದನ್ನು ತಂದು, ತನ್ನ ಪತ್ನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ನೋಡಿದ ಪತ್ನಿ ವಾರಿಷಾ ಮೊದಲು ಆಶ್ಚರ್ಯ ಹಾಗೂ ಸಂತೋಷಗೊಂಡಿದ್ದಾರೆ.

ವಾರಿಷಾ ಕತ್ತೆ ಮರಿಗಳನ್ನು ಪ್ರೀತಿಸುತ್ತಾಳೆ ಎಂದು ನನಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಆಕೆಗೆ ಮದುವೆಯ ಉಡುಗೊರೆಯಾಗಿ ಕತ್ತೆ ಮರಿಯನ್ನು ತಂದಿದ್ದೇನೆ. ಜೊತೆಗೆ ಕತ್ತೆಯೂ ವಿಶ್ವದ ಅತ್ಯಂತ ಶ್ರಮಶೀಲ ಹಾಗೂ ಪ್ರೀತಿಯ ಪ್ರಾಣಿಯಾಗಿದೆ ಎಂದು ಅಜ್ಲಾನ್ ಶಾ ತಿಳಿಸಿದರು. ವಾರಿಷಾಗೆ ಕತ್ತೆ ಮರಿಯನ್ನು ಉಡುಗೊರೆಯಾಗಿ ನೀಡಿದ್ದ ವಿಡಿಯೋವನ್ನು ಶಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

https://www.instagram.com/p/Cl54RyLDx2u/?utm_source=ig_embed&ig_rid=6a93508f-28e6-4fee-ad92-8140b73f11fa

ಈ ವೀಡಿಯೋದಲ್ಲಿ ಕತ್ತೆಯನ್ನು ಅಜ್ಲಾನ್ ಶಾ ವರಿಷಾಗೆ ನೀಡುತ್ತಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿರುವ ಫೋಟೋಕ್ಕೆ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಒಬ್ಬಾತ ಒಂದು ಕತ್ತೆಯ ಜೊತೆ ಇನ್ನೊಂದು ಕತ್ತೆ ಫ್ರೀ ಎಂದು ತಿಳಿಸಿದ್ದಾರೆ. ಕತ್ತೆ ಮುಗ್ಧ ಪ್ರಾಣಿ ಎಂದು ಇನ್ನೊಬ್ಬಾತ ಕಾಮೆಂಟ್ ಮಾಡಿದ್ದಾರೆ.

https://www.instagram.com/p/Cl6tOLxj33Y/?utm_source=ig_embed&ig_rid=fc990e98-3f79-45d8-8bb3-74ca2d5b49e9

Husband gifts donkey to his wife because she likes it