ಚಿಕ್ಕಮಗಳೂರು: ವಕೀಲರ ಮೇಲೆ ಹಲ್ಲೆ ನಡೆಸಿರುವ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚಿಕ್ಕಮಗಳೂರು ವಕೀಲರ ಸಂಘದ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ ಅಮಟೆ ಅವರಿಗೆ ಶನಿವಾರ ಒತ್ತಾಯಿಸಿದರು.

ಈ ಕುರಿತು ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಮಂಗಳೂರಿನ ವಕೀಲ ದಂಪತಿಗಳು ಹಾಗೂ ಚಿಕ್ಕಮಗಳೂರು ವಕೀಲರ ಸಂಘದ ಸದಸ್ಯ ಉಮೇಶ್ ಹಲ್ಲೆ ಪ್ರಕರಣದ ಆರೋಪಿ ಗಳನ್ನು ಬಂಧಿಸಿ ಕ್ರಮ ಕೈಗೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದರು.

ಮಂಗಳೂರಿನ ವಕೀಲರ ಸಂಘದ ಸದಸ್ಯ ಜಯಪ್ರಕಾಶ್ ಮತ್ತು ಅವರ ಪತ್ನಿ ಮೇಲೆ ರಾಬರ್ಟ್ ವಲೇರಿಯನ್ ಮೆಂಡೋನ್ಸ ಎಂಬುವವರು ಹಲ್ಲೆ ಮಾಡಿದ್ದು ಈಗಾಗಲೇ ಆತನ ಮೇಲೆ ಮಂಗಳೂರು ಕಂಕನಾಡಿ ನಗರಠಾಣೆಯಲ್ಲಿ ಜಾಮೀನು ರಹಿತ ದೂರು ದಾಖಲಾಗಿದೆ ಎಂದರು.

ಆರೋಪಿಯ ಮುಲಾಜಿಗೆ ಪೊಲೀಸರು ಈವರೆಗೂ ಆತನನ್ನು ಬಂಧಿಸದೇ ಇರುವುದನ್ನು ಖಂಡಿಸಿ ಮಂಗಳೂರು ವಕೀಲರ ಸಂಘವನ್ನು ಚಿಕ್ಕಮಗಳೂರು ಸಂಘ ಬೆಂಬಲಿಸಿದೆ. ಕೃತ್ಯವನ್ನು ಖಂಡಿಸಿ ಕಂಕನಾಡಿ ಪೊಲೀಸ್ ಠಾಣಾಧಿಕಾರಿಗಳು ಈ ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಮನವಿ ಸಲ್ಲಿಸಿದರು.

ಚಿಕ್ಕಮಗಳೂರು ವಕೀಲರ ಸಂಘದ ಸದಸ್ಯ ಉಮೇಶ್ ಅವರಿಗೆ ಹಲ್ಲೆ ಪ್ರಕರಣ ದಾಖಲಾಗಿ ತನಿಖೆ ಮುಕ್ತಾಯಗೊಂಡಿದೆ. ಹಲ್ಲೆ ಮಾಡಿದ ಆರೋಪಿತರ ವಿರುದ್ಧ ಅಂತಿಮ ದೋಷಾರೋಪನಾ ಪಟ್ಟಿ ಸಲ್ಲಿಸಲಾ ಗಿದೆ. ಅದರಂತೆ ಭಾರತೀಯ ಸಂಹಿತೆ ಕಲಂ ಪ್ರಕಾರ ಪರಿಶಿಷ್ಟ ಜಾತಿಯವರ ಮೇಲೆ ದೌರ್ಜನ್ಯ ನಿಷೇಧ ಕಾಯ್ದೆಯಡಿ ದೋಷಾರೋಪಣೆ ಸಲ್ಲಿಸಲಾಗಿದೆ ಎಂದರು.

ಈ ಪ್ರಕರಣದಲ್ಲಿ ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಸಲ್ಲಿಸಿದ ಅರ್ಜಿಯು ವಜಾಗೊಂಡಿರುತ್ತದೆ. ಹೀಗಾಗಿ ತನಿಖಾಧಿ ಖಾರಿ ಆರೋಪಿತರನ್ನು ಬಂಧಿಸಿ ಕಾನೂನು ಕೈಗೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಕೆ.ಎಸ್.ಶರತ್‌ಚಂದ್ರ, ಕಾರ್ಯದರ್ಶಿ ಆರ್. ಅನಿಲ್‌ಕುಮಾರ್, ಖಜಾಂಚಿ ಡಿ.ಬಿ.ದೀಪಕ್, ಸಹ ಕಾರ್ಯದರ್ಶಿ ಎನ್.ವಿ.ಪ್ರಿಯದರ್ಶಿನಿ, ವಕೀಲರು ಗಳಾದ ಸಿ.ಬಿ.ರುದ್ರೇಶ್, ಸಿ.ಬಿ.ಸತೀಶ್, ವಿ.ಪಿ.ಕೆಂಚೇಗೌಡ, ಕೆ.ಬಿ.ನಂದೀಶ್, ಹೆಚ್.ಸಿ.ನಟರಾಜ್, ಡಿ.ದೊರೆ, ಅನಂತೇಶ್, ಶಿವಣ್ಣ, ದಿಲೀಪ್, ಅರುಣ್, ವೇದಮೂರ್ತಿ, ಶರತ್ ಮತ್ತಿತರರು ಹಾಜರಿದ್ದರು.

Request to SP to arrest the accused in the lawyer’s case