ಚಿಕ್ಕಮಗಳೂರು: ವೃತ್ತಿ ಬದುಕಿನಲ್ಲಿ ನಿವೃತ್ತಿ ಎಂಬುದು ಸಾಮಾನ್ಯ. ವಯಸ್ಸು ದೇಹ ಕ್ಕಾಗಾಲಿದೆ ಹೊರತು ಮಾನಸಿಕ ಹಾಗೂ ಶಾರೀರಿಕವಾಗಿ ದೃಢವಾಗಿ ನಿಂತು ಮುಂದಿನ ಜೀವನವನ್ನು ಸಂ ತೋಷದಿಂದ ಕಳೆಯಬೇಕು ಎಂದು ಪಿಸಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೋಟೆ ರಂಗನಾಥ್ ಹೇಳಿದರು.

ನಗರದ ಪಿಸಿಎಲ್‌ಡಿ ಬ್ಯಾಂಕ್‌ನ ವ್ಯವಸ್ಥಾಪಕ ಎ.ಎಂ.ಚಂದ್ರೇಗೌಡ ಅವರು ನಿವೃತ್ತಿಗೊಂಡ ಹಿನ್ನೆಲೆ ಯಲ್ಲಿ ಆಡಳಿತ ಮಂಡಳಿಯಿಂದ ಅವರಿಗೆ ಸೋಮವಾರ ಬೀಳ್ಕೊಡಿಗೆ ನೀಡಿ ಆತ್ಮೀಯವಾಗಿ ಗೌರವಿಸ ಲಾಯಿತು.

ರೈತರ ಶ್ರೇಯೋಭಿವೃದ್ದಿಗೆ ನಿರ್ಮಾಣಗೊಂಡಿರುವ ಬ್ಯಾಂಕ್‌ನಲ್ಲಿ ಸತತ ಮೂವತ್ತೇರಡು ವರ್ಷಗಳ ಕಾಲ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿದ್ಧ ಚಂದ್ರೇಗೌಡರು ರೈತಾಪಿ ವರ್ಗದವರಿಗೆ ಸ್ಪಂದಿ ಸುವ ಗುಣ ಬೆಳೆಸಿಕೊಂಡಿದ್ದರು. ಅಲ್ಲದೇ ಸಾಲ ವಸೂಲಾತಿ ವಿಚಾರವಾಗಿ ಶೇ.೭೩ ರಷ್ಟು ಪೂರ್ಣಗೊಳಿಸಿ ಬ್ಯಾಂಕ್ ಏಳಿ ಗೆಗೆ ದುಡಿದಿದ್ದಾರೆ ಎಂದರು.

ದೇಶದ ಬೆನ್ನುಲುಬು ರೈತ. ಮನುಷ್ಯ ಜೀವನದಲ್ಲಿ ಎಷ್ಟೇ ಆಸ್ತಿ, ಅಂತಸ್ತು ಗಳಿಸಿದರೂ ರೈತರ ಶ್ರಮಕ್ಕೆ ಸರಿಸಾಟಿಯಿಲ್ಲ. ಅಕ್ಕಿ ಬೆಳೆದರೆ ಮಾನವ ಸಂಕುಲ ಬದುಕಲು ಸಾಧ್ಯ ಎಂದ ಅವರು ರೈತಾಪಿ ವರ್ಗ ಕೃಷಿ ಚಟುವಟಿಕೆ ವಿರಳಗೊಳಿಸಿದರೆ ಮನುಷ್ಯ ಸಾಯುವ ಸ್ಥಿತಿಗೆ ತಲುಪಲಿದ್ದು ರೈತರನ್ನು ಎಂದಿಗೂ ಕಡೆಗಣಿಸ ಬಾರದು ಎಂದು ತಿಳಿಸಿದರು.

ಮಳೆ ಕೊರತೆ, ಆರ್ಥಿಕ ಸಂಕಷ್ಟದ ನಡುವೆ ರೈತರು ತಕ್ಕಮಟ್ಟಿನ ಇಳುವರಿ ಪಡೆದು ಬೆಳೆ ಬೆಳೆಯು ತ್ತಿದ್ದಾನೆ. ಇಂಥಹ ಕೃಷಿಕ ವರ್ಗವನ್ನು ಮುನ್ನೆಡೆಗೆ ತರುವ ನಿಟ್ಟಿನಲ್ಲಿ ಬ್ಯಾಂಕ್‌ನಿಂದ ಸಾಲಸೌಲಭ್ಯ ಒದಗಿಸಿ ಮೇಲೆತ್ತು ಕಾರ್ಯಕ್ಕೆ ಮುಂದಾಗಿದ್ದೇವೆ. ಅದೇ ರೀತಿ ಪಡೆದಂತಹ ಸಾಲವನ್ನು ಮರುಪಾವತಿಸಿದರೆ ಇನ್ನ ಷ್ಟು ರೈತರಿಗೆ ಸವಲತ್ತು ಒದಗಿಸಬಹುದು ಎಂದರು.

ಆ ನಿಟ್ಟಿನಲ್ಲಿ ಮೂರುವರೆ ದಶಕಗಳ ಹೆಚ್ಚು ಕಾಲ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿದ ಚಂದ್ರೇಗೌ ಡರು ಕಚೇರಿಗೆ ಬರುವ ರೈತರನ್ನು ಸ್ಪಂದಿಸಿದ್ದಾರೆ. ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಸಂಕಷ್ಟದಲ್ಲಿರುವ ಮಣ್ಣಿನ ಮಕ್ಕಳಿಗೆ ಉತ್ತೇಜನ ನೀಡುವಲ್ಲಿ ಸೌಕರ್ಯ ಕಲ್ಪಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಎ.ಎಂ.ಚಂದ್ರೇಗೌಡ ಅನೇಕ ವರ್ಷಗಳ ಕಾಲ ನಿರಂತರ ಬ್ಯಾಂಕ್‌ನಲ್ಲಿ ಸಲ್ಲಿಸಿರುವ ಸೇವೆ ಆತ್ಮತೃಪ್ತಿ ತಂದಿದೆ. ಬ್ಯಾಂಕ್‌ನಲ್ಲಿ ಇರುವಷ್ಟು ದಿನಗಳಲ್ಲಿ ಎಲ್ಲಾ ಆಡಳಿತ ಮಂಡಳಿಯು ಸಹಕಾರ ಬಹಳಷ್ಟಿದೆ. ಹೀಗಾಗಿ ಇನ್ನಷ್ಟು ದಿನ ಕೆಲಸ ಮಾಡುವ ಹಂಬಲವಿರುವ ಹಿನ್ನೆಲೆಯಲ್ಲಿ ಹಂಗಾಮಿಯಾಗಿ ವೃತ್ತಿ ನಡೆಸಲು ಅವಕಾಶ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ಬ್ಯಾಂಕ್ ನಿರ್ದೇಶಕ ಈಶ್ವರಹಳ್ಳಿ ಮಹೇಶ್ ಮಾತನಾಡಿ ಬ್ಯಾಂಕ್ ಅಭಿವೃದ್ದಿಗಾಗಿ ದುಡಿದಿರುವ ಚಂ ದ್ರೇಗೌಡ ಶುದ್ಧಹಸ್ತದವರು. ಹಣಕಾಸು ವಿಚಾರದಲ್ಲಿ ಯಾವುದೇ ಲೋಪವಾಗದಂತೆ ಶಿಸ್ತಿನಿಂದ ಕಾರ್ಯ ನಿರ್ವಹಿಸಿ ಬ್ಯಾಂಕ್ ಬೆಳವಣಿಗೆಗೆ ಶ್ರಮಿಸಿ ನಿವೃತ್ತಿಗೊಂಡ ಅವರಿಗೆ ಆಡಳಿತ ಮಂಡಳಿಯಿಂದ ಬೀಳ್ಕೊಡಿಗೆ ನೀಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಕೆ.ಪಿ.ಸತೀಶ್‌ಗೌಡ, ಎ.ಎನ್.ರವೀಶ್, ದಾನಿಹಳ್ಳಿ ಮಂಜು ನಾಥ್, ರುದ್ರೇಗೌಡ, ಎಸ್.ರಮೇಶ್, ಹೆಚ್.ಬಿ.ಬಸವೇಶ್, ಶ್ರೀಮತಿ ಕರಾಳಮ್ಮ, ಎಂ.ಹಂಪಯ್ಯ, ಎಂ.ಎಸ್. ಪ್ರಕಾಶ್ ಕೆ.ಎಲ್.ಶಿವಾನಂದ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Retired life should be spent happily