ಚಿಕ್ಕಮಗಳೂರು:  ಮೆಸ್ಕಾಂ ಸಹಯೋಗದಲ್ಲಿ ಬಸವನಹಳ್ಳಿ ಬಾಲಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸುಮಾರು ೪೦ ಲಕ್ಷ ವೆಚ್ಚದಲ್ಲಿ ೧೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸೋಲಾರ್ ಅಳವಡಿಸಲಾಗಿದೆ ಎಂದು ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾಹಿತಿ ನೀಡಿದರು.

ಬಸವನಹಳ್ಳಿ ಬಾಲಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನವೀಕರಣಗೊಂಡ ನೂತನ ಶಾಲಾ ಸಂಕಿರ್ಣ ಕೊಠಡಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದರು.

೨೦೦೦ ರ ಸಾಲಿನಲ್ಲಿ ಈ ಕಾಲೇಜಿನಲ್ಲಿ ಕೊಠಡಿಗಳ ಕೊರತೆ ಇತ್ತು ಅದನ್ನು ನೀಗಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳಲ್ಲಿ ಅನುದಾನ ಪಡೆದು ಪ್ರಸ್ತುತ ೧೨ ಭೋದನಾ ಕೊಠಡಿಗಳು ನಿರ್ಮಾಣಗೊಂಡಿವೆ. ಪ್ರಯೋಗಾಲಯ ಮತ್ತು ಗ್ರಂಥಾಲಯವನ್ನು ಒಳಗೊಂಡ ಸುಸಜ್ಜಿತ ಮಾದರಿ ಶಾಲೆಯಾಗಿ ನಿರ್ಮಾಣವಾಗಿದೆ ಎಂದರು.

ಸಿ.ಸಿ ಕ್ಯಾಮೆರಾಗಳ ಅಳವಡಿಕೆ, ಸಮರ್ಪಕ ಶುದ್ಧ ಕುಡಿಯುವ ನೀರಿನ ಘಟಕ, ಪ್ರೌಢಾಶಾಲಾ ವಿಭಾಗಕ್ಕೆ ಬಿಸಿಯೂಟದ ವ್ಯವಸ್ಥೆಗೆ ರಾಜ್ಯದಲ್ಲೇ ಪ್ರಥಮ ಬಾರಿಗೆ ಸೋಲಾರ್ ಪವರ್ ಸ್ಟೀಮ್ ಕುಕ್ಕಿಂಗ್ ಬಳಸಿ ಮಕ್ಕಳಿಗೆ ಉತ್ತಮವಾದ ಆಹಾರ ನೀಡಲಾಗುತ್ತಿದೆ. ಸುಸ್ಸಜ್ಜಿತವಾದ ಶೌಚಾಲಯಗಳ ನಿರ್ಮಾಣ ಮೂಲಕ ಮಕ್ಕಳಿಗೆ ಯಾವುದೇ ಕುಂದು ಕೊರೆತೆ ಬಾರದಂತೆ ಅಗತ್ಯ ಸೌಕರ್ಯವನ್ನು ಕಲ್ಪಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.

ಕೋವಿಡ್ ಕಾರಣದಿಂದಾಗಿ ಶಾಲೆಗೆ ಬರುವಂತಹ ಮಕ್ಕಳು ಪ್ರಮಾಣ ಕಡಿಮೆಯಾಗಿತ್ತು. ಆದರ ಈ ಬಾರಿ ದಾಖಲಾತಿ ಪ್ರಮಾಣ ಹೆಚ್ಚಾಗಿದೆ. ಶಿಕ್ಷಣ ಪದ್ದತಿಯಲ್ಲೂ ಸಾಕಷ್ಟು ಸುಧಾರಣೆ ಕಂಡು ಬಂದಿದೆ ಎಂದರು.

ಕಾಲೇಜಿನಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ೩ ವಿಭಾಗಗಳನ್ನು ಒಳಗೊಂಡಿದೆ. ಒಟ್ಟು ೫೦೦ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ೩೦೦ ವಿದ್ಯಾರ್ಥಿಗಳು ಪ್ರಥಮ ಪಿ.ಯು.ಸಿ ಪ್ರವೇಶಾತಿಯನ್ನು ಪಡೆದುಕೊಂಡಿದ್ದಾರೆ, ಅಂದಾಜು ೬ ಲಕ್ಷ ವೆಚ್ಚದಲ್ಲಿ ನವೀಕರಣಗೊಂಡ ಕಟ್ಟಡವನ್ನು ನವೆಂಬರ್ ೨ ರಂದು ಶಾಸಕರು ಉದ್ಘಾಟನೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರಾದ ಸಾವಿತ್ರಿ ಉಪಸ್ಥಿತರಿದ್ದರು.

ಇದನ್ನೂ ಓದಿ: Song Singing: ಕನ್ನಡ ಹಾಡುಗಳ ಝೇಂಕಾರ, ಗೀತ ಗಾಯನದಲ್ಲಿ ನಲಿದ ಮಕ್ಕಳು

ಇದನ್ನೂ ಓದಿ: Resolve: ಸಮಾಜದಲ್ಲಿ ಜಾತೀಯತೆ ತೊಡೆಯುವ ಸಂಕಲ್ಪ ಮಾಡಬೇಕಿದೆ