ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಿದ್ದರಾಮಯ್ಯ ಸ್ವಾಮೀಜಿಗಳನ್ನು ಎಳೆದು ತಂದಿರುವುದೇಕೆಂದು ತಿಳಿಯುತ್ತಿಲ್ಲ. ಅವರ ಹೇಳಿಕೆಯಿಂದ ಸ್ವಾಮೀಜಿಗಳು ಬಹಳ ಬೇಸರಗೊಂಡಿದ್ದಾರೆ. ಅವರು ಹೇಳಿಕೆ ವಾಪಸ್ ಪಡೆದು ಬೇಷರತ್ ಕ್ಷಮೆ ( unconditional-apology)  ಯಾಚಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆಗ್ರಹಿಸಿದರು.

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇದು ಸ್ವಾಮೀಜಿಗಳ ಬಗ್ಗೆ ಕಾಂಗ್ರೆಸ್‌ನವರು ಹೊಂದಿರುವ ನಕಾರಾತ್ಮಕ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಸ್ವಾಮೀಜಿಗಳೇನು ಸ್ಕೂಲ್‌ಗೆ ಹೋಗುತ್ತಾರೆಯೇ? ಹಿಜಾಬ್ ಪ್ರಕರಣದ ಜತೆ ಸ್ವಾಮೀಜಿಗಳನ್ನು ಹೊಲಿಕೆ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

ಹಿಜಾಬ್ ಕುರಿತು ತನ್ನ ನಿಲುವು ಏನೆಂಬುದನ್ನು ಕಾಂಗ್ರೆಸ್ ಇದುವರೆಗೆ ಸ್ಪಷ್ಟಪಡಿಸಿಲ್ಲ. ಬರಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಅವರು ಬಹಳಷ್ಟು ಗೊಂದಲದಲ್ಲಿದ್ದಾರೆ. ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣ ನೀತಿಯನ್ನು ಕೈ ಬಿಡಬೇಕು ಎಂದರು.

unconditional-apology

ಇದನ್ನೂ ಓದಿ: New Military School : ದೇಶಾದ್ಯಂತ 21 ಹೊಸ ಸೈನಿಕ ಶಾಲೆ ತೆರೆಯಲು ರಕ್ಷಣಾ ಸಚಿವಾಲಯ ಅನುಮೋದನೆ

ಇದನ್ನೂ ಓದಿ: Workout at the gym : ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವಾಗಲೇ ಮಹಿಳೆ ಸಾವು