ನವದೆಹಲಿ: ಸಮಾಜ ಸೇವಾ ಕಾರ್ಯಕ್ಕಾಗಿ ಸಂಗ್ರಹಿಸಿದ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪಕ್ಕೆ ಸಿಲುಕಿರುವ ಪತ್ರಕರ್ತೆ ರಾಣಾ ಅಯೂಬ್‌ರಿಂದ 1.77 ಕೋಟಿ ರೂಪಾಯಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ.) ವಶಪಡಿಸಿಕೊಂಡಿದೆ. ಈ ಹಣವನ್ನು ರಾಣಾ ಬ್ಯಾಂಕ್‌ಗಳಲ್ಲಿ ತಮ್ಮ ಮತ್ತು ತಮ್ಮ ಕುಟುಂಬದವರ ಹೆಸರಿನಲ್ಲಿ ಉಳಿತಾಯ ಖಾತೆ ಮತ್ತು ನಿಶ್ಚಿತ ಠೇವಣಿಯಾಗಿ ಇರಿಸಿದ್ದರು. ಇದನ್ನು ತಾತ್ಕಾಲಿಕ ಜಪ್ತಿ ಮಾಡಿಕೊಳ್ಳಲು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅನ್ವಯ ಇ.ಡಿ. ಆದೇಶ ಹೊರಡಿಸಿದೆ.

ಬಿಜೆಪಿ ಮತ್ತು ಕೇಂದ್ರ ಸರ್ಕಾರದ  ಕಟು ಟೀಕಾಕಾರಾದ ರಾಣಾ ವಿರುದ್ಧ ಕಳೆದ ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. “ಹಿಂದು ಐಟಿ ಸೆಲ್‌” ಎಂಬ ಸ್ವಯಂ ಸೇವಾ ಸಂಸ್ಥೆ ನಡೆಸುವ ವಿಕಾಸ್‌ ಸಾಂಕೃತ್ಯಾಯನ ಅವರು ರಾಣಾ ಅಯೂಬ್‌ ವಿರುದ್ಧ ದೂರು ನೀಡಿದ್ದರು.

ಚಾರಿಟಿ ಉದ್ದೇಶಕ್ಕಾಗಿ ಕೆಟ್ಟೋ ಎಂಬ ಸಂಸ್ಥೆಯಡಿ ಆನ್‌ಲೈನ್‌ ಕ್ರೌಡ್‌ ಫಂಡಿಗ್‌ ಮೂಲಕ 2020 ಮತ್ತು 2021ರಲ್ಲಿ ರಾಣಾ 2.69 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ . ಇದನ್ನು ಬ್ಯಾಂಕ್‌ನಲ್ಲಿ ಇರಿಸಿದ್ದರು. ಆದರೆ, ರಾಣಾ ಅವರ ತಂದೆ ಮತ್ತು ಸೋದರಿ ಕೆಲ ಮೊತ್ತವನ್ನು ಹಿಂಪಡೆದಿದ್ದಾರೆ. ನಂತರ ಕೆಟ್ಟೋ ಖಾತೆಯಲ್ಲಿದ್ದ ಹಣ ರಾಣಾ ಖಾತೆಗೆ ವರ್ಗಾವಣೆ ಆಗಿದೆ ಎಂದು ಇ.ಡಿ. ಹೇಳಿದೆ.  ಅದರೆ ವಿಚಾರಣೆ ವೇಳೆ, ಈ ಹಣ ದುರ್ಬಳಕೆಯ ಆರೋಪವನ್ನು ತಳ್ಳಿಹಾಕಿರುವ ರಾಣಾ;  ಕೆಟ್ಟೋಗೆ ಸಂಬಂಧಿಸಿದ ಲೆಕ್ಕಪತ್ರ ಶುದ್ಧವಾಗಿದೆ. ಒಂದು ಪೈಸೆಯೂ ಅಕ್ರಮ ಆಗಿಲ್ಲ ಎಂದಿದ್ದಾರೆ. ಇ.ಡಿ.ಗೆ 31 ಲಕ್ಷ ರೂಪಾಯಿಯ ವೆಚ್ಚದ ಲೆಕ್ಕಪತ್ರವನ್ನು ರಾಣಾ ತೋರಿಸಿದ್ದಾರೆ. ಆದರೆ, ವಾಸ್ತವದಲ್ಲಾಗಿರುವ ಖರ್ಚುವೆಚ್ಚ 17.66 ಲಕ್ಷ ಕೋಟಿ ರೂ. ಎಂದು ಇ.ಡಿ. ಹೇಳಿದೆ. ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಖರ್ಚುವೆಚ್ಚವನ್ನು ತೋರಿಸಲಾಗಿದೆ. ಇವೆಲ್ಲವನ್ನು ಗಮನಿಸಿದರೆ ವಂಚನೆ ಉದ್ದೇಶದಿಂದಲೇ ಪೂರ್ವಆಯೋಜಿತವಾಗಿ ಮಾಡಲಾಗಿದೆ. ವೈಯಕ್ತಿಕ ಸಂಚಾರವನ್ನು ಚಾರಿಟಿಗಾಗಿ ನಡೆಸಿದ ಓಡಾಟ ಎಂದು ತೋರಿಸಲಾಗಿದೆ ಎಂದು ಇ.ಡಿ. ಆರೋಪಿಸಿದೆ. ಬ್ಯಾಂಕ್‌ನ ನಿಶ್ಚಿತ ಖಾತೆಯಲ್ಲಿ ಇರಿಸಿರುವ 50 ಲಕ್ಷ ರೂಪಾಯಿಗಳನ್ನು ಚಾರಿಟಿ ಕಾರ್ಯಕ್ಕೆ ಬಳಸೇ ಇಲ್ಲ. ರಾಣಾ ಪಿಎಂ ಕೇರ್ಸ್‌ ಮತ್ತು ಸಿಎಂ ಪರಿಹಾರ ನಿದಿಗೆ 74.50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದೂ ಇ.ಡಿ. ಮಾಹಿತಿ ನೀಡಿದೆ.

₹ 1.77 Crore Of Journalist Rana Ayyub Frozen In Money Laundering Probe

ಇದನ್ನು ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾದ ನಟಿ ಜಾಕ್ವೆಲಿನ್ ಫರ್ನಾಂಡಿಸ್

ಇದನ್ನೂ ಓದಿ: ಅಜಿತ್‌ ಪವಾರ್‌ಗೆ ನಂಟು ಹೊಂದಿರುವ ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ವಶ