ನವದೆಹಲಿ: ಸ್ವಾತಂತ್ರೋತ್ಸವದ ಬೆನ್ನಲ್ಲೇ ದೇಶೀಯ ಗ್ರಾಹಕರಿಗೆ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ೨೫ ರೂಪಾಯಿ ಹೆಚ್ಚಿಸಿ ಬಿಸಿ ಮುಟ್ಟಿಸಿದೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಸ್ತ್ರೀ ಸಾಮಾನ್ಯನಿಗೆ ನುಂಗಲಾರದ ತುತ್ತಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ರಿಟೇಲರ್ ಗಳು ಅಡುಗೆ ಅನಿಲ ಸಿಲಿಂಡರ್ ಬೆಲೆ ಮತ್ತೆ ಏರಿಸಿವೆ. ಜುಲೈ ೧ರಿಂದ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ೨೫.೫೦ ಹೆಚ್ಚಿಸಿತ್ತು.  ಈಗ ಮತ್ತೆ ರೂ. ೨೫ ರೂ ಹೆಚ್ಚಿಸಿದ್ದು ಗ್ರಾಹಕರಿಗೆ ಷಾಕ್ ಕೊಟ್ಟಿದೆ.

ಬೆಂಗಳೂರಿನಲ್ಲಿ ಅನಿಲ ಸಿಲಿಂಡರ್ ದರ ೮೬೨.೫ ರೂಪಾಯಿ, ದೆಹಲಿಯಲ್ಲಿ ೮೫೯.೫ ರೂಪಾಯಿ, ಮುಂಬೈನಲ್ಲಿ ೮೫೯.೫ ರೂಪಾಯಿ, ಕೋಲ್ಕತ್ತಾದಲ್ಲಿ ೮೮೬ ರೂಪಾಯಿ, ಚೆನ್ನೈ ನಲ್ಲಿ ೮೭೫.೫ ರೂಪಾಯಿ.

ಆಗಸ್ಟ್‌ ೧೭(ರಿಂದ)ರಿಂದ ಎಲ್ ಪಿ ಜಿ ಸಿಲಿಂಡರ್ ದರ ೨೫ ರೂ ಹೆಚ್ಚಾಗಿದೆ.  ತೈಲ ಮಾರ್ಕೆಟಿಂಗ್ ಕಂಪನಿಗಳು ಪ್ರತಿ ತಿಂಗಳ ಮೊದಲ ದಿವಸ ಬೆಲೆ ಏರಿಕೆ ಮಾಡುತ್ತವೆ. ದೇಶದ ರಾಜಧಾನಿ ನವದೆಹಲಿಯಲ್ಲಿ ಇದೇ ವರ್ಷದ ಆರಂಭ ಸಿಲಿಂಡರ್ ಒಂದಕ್ಕೆ ೬೯೪ ರೂಪಾಯಿಗಳಿತ್ತು.  ಈಗ ಬರೀ ಎಂಟು ತಿಂಗಳಲ್ಲೇ ಬರೊಬ್ಬರಿ ೧೬೫ ರೂ. ಹೆಚ್ಚಳ ಮಾಡಲಾಗಿದೆ.