ಬಳ್ಳಾರಿ: ಅತೀವ ನಿರ್ಲಕ್ಷತೆ, ಬೇಜವಾಬ್ದಾರಿತನ ಹಾಗೂ ಕರ್ತವ್ಯ ಲೋಪ ಕಂಡು ಬಂದ ತಕ್ಷಣ ಅಂಥವರ ವಿರುದ್ಧ ಇಲಾಖೆ ಶಿಸ್ತು ಕ್ರಮ ಜರುಗಿಸಿ ಸಾರ್ವಜನಿಕರಿಗೆ ನ್ಯಾಯಪಾಲನೆಯಲ್ಲಿ ವಿಶ್ವಾಸ ಮೂಡಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ಕಛೆರಿ ಪ್ರಕಟಿಸಿದೆ.

೦೧/೦೧/೨೦೨೧ ರಿಮ್ದ ೩೧/೦೮/೨೦೨೧ರವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿರುವ ಪೊಲೀಸ್ ಅಧಿಕಾರಿ, ಸಿಬ್ಬಂದಿ ವರ್ಗ, ಲಿಪಿಕ ಸಿಬ್ಬಂದಿಗಳ ಕರ್ತವ್ಯದಲ್ಲಿ ಅತೀವ ನಿರ್ಲಕ್ಷತೆ ಬೇಜಾವಾಬ್ದಾರಿತನ ಹಾಗೂ ಕರ್ತವ್ಯ ಲೋಪದ ಕುರಿತು ಇಲಾಖೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ನಿಯಮ ೭ ಮತ್ತು ನಿಯಮ ೧೨ರ ಅಡಿಯಲ್ಲಿ ೧೦೩ ಪಿಎಸ್ ಐ, ೨೯ ಸಿಪಿಐ, ೧೦ ಪಿಸಿ, ಹೆಚ್ ಹಾಗೂ ಎ ಎಸ್ ಐ ಒಳಗೊಂಡಂತೆ ಒಟ್ಟು ೨೩೩ ಅಧಿಕಾರಿ ಮತ್ತು ಸಿಬ್ಬಂಧಿಗಳಿಗೆ ಆರೋಪ ಜ್ಞಾಪನ, ದೋಷಾರೋಪಣ ಪತ್ರವನ್ನು ಹೊರಡಿಸಿ ಇಲಾಖೆ ಶಿಸ್ತು ಕ್ರಮವನ್ನು ನಿಯಮ -೫ರಡಿಯಲ್ಲಿ ಗುರುತರ ಆರೋಪಗಳು ಕಂಡು ಬಂದ ತಕ್ಷಣ ಮತ್ತು ಸಾರ್ವಜನಿಕರ ದೂರು ಪಡೆದ ತಕ್ಷಣ ೨ PSI, ೨೧ PC, HC, ASI ಅವರುಗಳನ್ನು ಒಳಗೊಂಡಂತೆ ಒಟ್ಟು ೨೩ ಜನ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ಅಮಾನತ್ತಿನಲ್ಲಿ ಇರಿಸಲಾಗಿದೆ.

ನಿಯಮ -೬ ಹಾಗೂ ೬ ಮತ್ತು ೮ರಡಿಯಲ್ಲಿ ೧೧ ಜನ ಪೊಲೀಸ್ ಅಧಿಕಾರಿ ಮತು ಸಿಬ್ಬಂದಿ ಅವರುಗಳ ವಿರುದ್ಧ ಇಲಾಖಾ ವಿಚಾರಣೆ ಹಾಗೂ ಜಂಟಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿರುತ್ತದೆ. ೨೦೧೯ರ ಸಾಲಿನಲ್ಲಿ ನಿಯಮ -೭ರಲ್ಲಿ ೧೧೮, ನಿಯಮ -೫ರಡಿಯಲ್ಲಿ ೨೪, ನಿಯಮ -೬ರಡಿಯಲ್ಲಿ ೩ ಜನ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸಲಾಗಿರುತ್ತದೆ. ೨೦೨೦ ಸಾಲಿನಲ್ಲಿ ನಿಯಮ-೭ರಡಿಯಲ್ಲಿ ೧೮೬ ನಿಯಮ-೫ರಡಿಯಲ್ಲಿ ೧೯ ಮತ್ತು ನಿಯಮ-೬ರಡಿಯಲ್ಲಿ ೫ ಜನ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿರುತ್ತದೆ ಎಂದು ಪ್ರಕಟಣೆ ಅಧಿಕೃತವಾಗಿ ತಿಳಿಸಿದೆ.

SP Office Notification