ನವದೆಹಲಿ: ಹೊಸ ಆಟೋ ಡಿಬಿಟ್ ವ್ಯವಸ್ಥೆ, ಪಿಂಚಣಿ ನಿಯಮ ಮತ್ತು ಷೇರುಪೇಟೆಯ ಟ್ರೇಡಿಂಗ್ ನಿಯಮಗಳಲ್ಲಿ ಅಕ್ಟೋಬರ್ 1ರಿಂದ ಕೆಲವು ಬದಲಾವಣೆಗಳು ಆಗಿವೆ. ಇವುಗಳ ಸ್ಥೂಲ ಪರಿಚಯ ಇಂತಿದೆ

ಹೊಸ ಆಟೋ ಡೆಬಿಟ್ ವ್ಯವಸ್ಥೆಯಲ್ಲಿ ಬ್ಯಾಂಕ್, ಪೇಟಿಎಂ, ಫೋನ್‌ ಪೇ, ಗೂಗಲ್ ಪೇ ಇನ್ನಿತರ ವಿದ್ಯುನ್ಮಾನ ಪಾವತಿ ವೇದಿಕೆಗಳು ಸ್ವಯಂ ಚಾಲಿತವಾಗಿ ಹಣ ಪಾವತಿ ಮಾಡುವುದಿಲ್ಲ. ಬದಲಿಗೆ ಯಾವುದೇ ಪಾವತಿಗೂ ಮುನ್ನ ಗ್ರಾಹಕರ ಅನುಮತಿಯನ್ನು ಕೇಳಲಿವೆ. ಗ್ರಾಹಕರು ಈಗಾಗಲೇ ನೀಡಿರುವ ಸ್ಟಾ$ಂಡರ್ಡ್ ಇನ್ಸ್ಟ್ರಕ್ಷನ್ (ನಿಗದಿತ ಸಮಯಕ್ಕೆ ಪಾವತಿ ಮಾಡುವ ಪೂರ್ವಭಾವಿ ಸೂಚನೆ) ಮಾಡುವುಕ್ಕೂ ಮುನ್ನ ಅವರ ಅನುಮತಿಯನ್ನು ಖಾತ್ರಿ ಪಡಿಸಿಕೊಳ್ಳಲಿವೆ. ಅಂದರೆ, ದೂರವಾಣಿ, ವಿದ್ಯುತ್, ಡಿಟಿಎಚ್, ಒಒಟಿ ಬಿಲ್‌ ಪಾವತಿಗಳು ಸ್ವಯಂ ಚಾಲಿತವಾಗಿ ಆಗುವುದಿಲ್ಲ.

ಇದಕ್ಕೆ ಗ್ರಾಹಕರು ಹೆಚ್ಚುವರಿಯಾಗಿ ಅನುಮತಿಯನ್ನು ನೀಡಬೇಕಿರುವುದು ಕಡ್ಡಾಯ. ಪಾವತಿ ವ್ಯವಸ್ಥೆಯಲ್ಲಿ ವಂಚನೆ ತಡೆಯಲು, ಪಾರದರ್ಶಕತೆ ಕಾಯ್ದುಕೊಳ್ಳಲು ಆರ್‌ಬಿಐ ಈ ನಿಯಮವನ್ನು ಜಾರಿ ಮಾಡುವುದಾಗಿ ಕಳೆದ ವರ್ಷವೇ ಹೇಳಿತ್ತು. ಇದಕ್ಕೆ 2021ರ ಮಾರ್ಚ್ 31ರ ಗಡುವನ್ನು ನಿಗದಿ ಮಾಡಿತ್ತು. ಆದರೆ, ಕೆಲವು ಡಿಜಿಟಲ್ ವೇದಿಕೆ ಮತ್ತು ಬ್ಯಾಂಕ್ಗಳು ಇದಕ್ಕೆ ಸಿದ್ಧವಾಗಿರಲಿಲ್ಲವಾದ ಕಾರಣ ಗಡುವನ್ನು ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಿ ಅಕ್ಟೋಬರ್ 1ರಿಂದ ಜಾರಿ ಮಾಡಿದೆ. ಐದು ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತದ ಪಾವತಿಗೆ ಬ್ಯಾಂಕ್‌ಗಳು ಒಮ್ಮೆ ನಮೂದಿಸುವಂತಹ ಪಾಸ್ವಾರ್ಡ್ (ಒಟಿಪಿ)ಯನ್ನು ಗ್ರಾಹಕರಿಗೆ ಕಳಿಹಿಸುತ್ತದೆ.

ಹೊಸ ಪಿಂಚಣಿ ನಿಯಮ: ಪಿಂಚಣಿದಾರರು ವರ್ಷಕ್ಕೊಂದಾವರ್ತಿ ತಾವು ಜೀವಿತವಾಗಿರುವುದನ್ನು ಬ್ಯಾಂಕ್ ಅಥವಾ ಅಂಚೆ ಕಚೇರಿಗಳಿಗೆ ಪ್ರಮಾಣ ಪತ್ರದ ಮೂಲಕ ಸಲ್ಲಿಸುವುದು ಕಡ್ಡಾಯ. ಇದು ಸಾಮಾನ್ಯವಾಗಿ ಅಕ್ಟೋಬರ್ ಮತ್ತು ನವೆಂಬರ್ ಮಾಹೆಯಲ್ಲಿ ನಡೆಯುವ ಪ್ರಕ್ರಿಯೆ. ಈ ಪ್ರಮಾಣ ಪತ್ರವನ್ನು ಬ್ಯಾಂಕ್/ಪೋಸ್ಟ್ ಆಫೀಸ್‌ಗೆ ಹೋಗಿ ಖುದ್ದಾಗಿ ಸಲ್ಲಿಸಬೇಕು ಎಂದೇನೂ ಇಲ್ಲ. ಡಿಜಿಟಲ್ ಲೈ್ ಸಟಿರ್ಫಿಕೇಟ್ ಮೂಲಕವೂ ಈ ಪ್ರಕ್ರಿಯೆಯನ್ನು ಮಾಡಬಹುದು. ಈ ನಿಯಮ ಅಕ್ಟೋಬರ್ 1ರಿಂದ ತುಸು ಬದಲಾವಣೆ ಆಗುತ್ತಿದ್ದು, 80 ವರ್ಷ ಮೇಲ್ಪಟ್ಟ ಪಿಂಚಣಿದಾರರು ಅಂಚೆ ಕಚೇರಿಯ ಜೀವನ್ ಪ್ರಮಾಣ್ ಕೇಂದ್ರಗಳಿಂದ ಈ ಪ್ರಮಾಣ ಪತ್ರವನ್ನು ಪಡೆದುಕೊಂಡು ನವೆಂಬರ್ ಅಂತ್ಯದೊಳಗೆ ಸಲ್ಲಿಸಬಹುದು. ಆಧಾರ್ ಸಂಖ್ಯೆಯನ್ನು ಆಧರಿಸಿ ಈ ಪ್ರಕ್ರಿಯೆ ನಡೆಯಲಿದೆ.

ಟ್ರೇಡಿಂಗ್ ನಿಯಮದಲ್ಲಿ ಬದಲಾವಣೆ: ಷೇರುಪೇಟೆಯಲ್ಲಿ ವ್ಯವಹಾರ ನಡೆಸಲು ಅಗತ್ಯವಾದ ಡಿಮ್ಯಾಟ್ ಖಾತೆಯನ್ನು ತೆರೆಯುವವರು ನಾಮನಿರ್ದೇಶನ (ನಾಮಿನಿ) ಮಾಡಬೇಕಾಗುತ್ತದೆ. ಈಗಾಗಲೇ ಖಾತೆ ಹೊಂದಿರುವವರು 2022ರ ಮಾರ್ಚ್ 31ರೊಳಗೆ ಈ ಪ್ರಕ್ರಿಯೆ ನಡೆಸಬೇಕು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸೂಚಿಸಿದೆ. ಇದಕ್ಕಾಗಿ ಅಜಿರ್ ನಮೂನೆಯನ್ನು ಬಿಡುಗಡೆ ಮಾಡಿದೆ.

Business New Auto Debit Rules Pension Norms from October 1

ಇದನ್ನೂ ಓದಿ: ಬ್ಯಾಂಕ್ ಎಡವಟ್ಟು ವ್ಯಕ್ತಿಯ ಖಾತೆಗೆ 5.5 ಲಕ್ಷ ರೂ. ಜಮೆ
ಇದನ್ನೂ ಓದಿ: ವಿಶ್ವ ಬ್ಯಾಂಕ್ ಹಣದ ನೆರವು ಬಂದ್: ತಾಲಿಬಾನಿಗಳ ಹಣದ ಹರಿವಿಗೆ ಕೋಕ್