ಅಹಮದಾಬಾದ್​: ವಿದೇಶಿ ಕಂಪನಿಗಳು ಬೆಳೆಗಳ ಪೇಟೆಂಟ್‌ ಪಡೆದು ಅವುಗಳನ್ನು ಏಕಸ್ವಾಮ್ಯ ಮಾಡಿಕೊಂಡು ರೈತರನ್ನು ವಂಚಿಸುತ್ತಿವೆ. ಇಂಥ ರೈತ ವಿರೋಧಿ ಚುಟುವಟಿಕೆ ವಿರುದ್ಧ ಹೋರಾಟಗಳು ನಡೆಯುತ್ತಿರುತ್ತವೆ. ಇಂಥದ್ದೇ ಒಂದು ಕಾನೂನು ಹೋರಾಟದಲ್ಲಿ ರೈತ ಮಹಿಳೆಯೊಬ್ಬರು ಬಹುರಾಷ್ಟ್ರೀಯ ದೈತ್ಯ ಕಂಪನಿ ಪೆಪ್ಸಿಕೋ ವಿರುದ್ಧ ಜಯಗಳಿಸಿದ ಪ್ರಕರಣ ಇದಾಗಿದೆ.

ಆಲೂಗಡ್ಡೆಯ “ಎಫ್ಎಲ್​ 2027′ ತಳಿಯನ್ನು ತಾನು ಮಾತ್ರವೇ ಬೆಳೆಯಬೇಕು  ಅಥವಾ ತನ್ನಿಂದ ಪರವಾನಗಿ ಪಡೆದವರು ಮಾತ್ರ ಬೆಳೆಯಬೇಕು ಎಂದು ಹಕ್ಕುಸ್ವಾಮ್ಯ ಸ್ಥಾಪಿಸಿದ್ದ ಪೆಪ್ಸಿಕೋ ಕಂಪನಿ, ಈ ಕುರಿತ ಮಾಡಿಸಿದ್ದ ನೋಂದಣಿಯನ್ನು ಬೆಳೆಗಳ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕು ಪ್ರಾಧಿಕಾರವು ರದ್ದು ಮಾಡಿದೆ. ಇದರಿಂದ ಗುಜರಾತ್‌ ಮೂಲದ ಕವಿತಾ ಕುರುಗುಂಟಿ ಕಾನೂನು ಹೋರಾಟದಲ್ಲಿ ಯಶಸ್ವಿಯಾಗಿದ್ದಾರೆ. ಜತೆಗೆ “ಎಫ್‌ಎಲ್‌ 2027” ತಳಿಯ ಪೆಪ್ಟಿ ಕಂಪನಿಯ ಕಪಿಮುಷ್ಟಿಯಿಂದ ಮುಕ್ತಗೊಳಿಸಿದ್ದಾರೆ. ಈ ತಳಿಯ ಆಲೂಗಡ್ಡೆಯನ್ನು ಪೆಪ್ಸಿ ಲೇಸ್​ ಬ್ರಾಂಡ್​ನ ಚಿಪ್ಸ್​ ತಯಾರಿಸಲು ಬಳಕೆ ಮಾಡುತ್ತಿತ್ತು.

“ಎಫ್‌ಎಲ್​ 2027′ ತಳಿ ಆಲೂಗಡ್ಡೆಯನ್ನು ಉತ್ತರ ಗುಜರಾತ್‌ನ ರೈತರು ಅನುಮತಿ ಇಲ್ಲದೆ ಬೆಳೆಯುತ್ತಿದ್ದಾರೆ. ಇದರಿಂದ ಹಾನಿಯಾಗಿರುವ ಕಾರಣ ಪರಿಹಾರ ಕೊಡಿಸಬೇಕು ಎಂದು ಪೆಪ್ಸಿಕೋ ಇಂಡಿಯಾ 2019ರಲ್ಲಿ ದಾವೆ ಹೂಡಿತ್ತು. ಆಲೂಗಡ್ಡೆ ತಳಿಯನ್ನು  ಕಾರ್ಪೊರೇಟ್​ ಕಂಪನಿಯೊಂದಕ್ಕೆ ನೋಂದಣಿ ಮಾಡಿಕೊಟ್ಟಿರುವುದೇ ತಪ್ಪು ಎಂದು ರೈತರು ಹೋರಾಟ ನಡೆಸಿದರು.ಆಗ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಸಂಧಾನವಾಗಿ ಪೆಪ್ಸಿ ಇಂಡಿಯಾ ಮೊಕದ್ದಮೆ ಹಿಂಪಡೆದಿತ್ತು. ಆದರೆ, ಕವಿತಾ ಕುರುಗಂಟಿ ಇಷ್ಟಕ್ಕೆ ಸುಮ್ಮನಿರದೆ ಕಂಪನಿಯನ್ನು ಕೋರ್ಟ್​ಗೆ ಎಳೆದುತಂದರು. “ಎಫ್‌​ಎಲ್​ 2027′ ತಳಿ ನೋಂದಣಿಯನ್ನೇ ರದ್ದು ಮಾಡಬೇಕು ಎಂದು ಕೃಷಿ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆ 2001ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಿದ್ದರು.

Pesico Loses Rights to Special Lays Variety Pptato in India

ಇದನ್ನು ಓದಿ: Coffee growers: ಕಾಫಿ ಉದ್ಯಮ ನಷ್ಟ: ಪ್ರಧಾನಿ ಭೇಟಿ ಅವಕಾಶಕ್ಕೆ ಬೆಳೆಗಾರರ ನಿಯೋಗ ಒತ್ತಾಯ

ಇದನ್ನೂ ಓದಿ: To protect the interests of the farmers: ರೈತರ ಹಿತರಕ್ಷಣೆಗೆ ಕಾಯ್ದೆ ರೂಪಿಸಲು ರಾಜ್ಯ ಸರಕಾರಗಳಿಗೆ ಸ್ವಾತಂತ್ರ್ಯವಿದೆ