ಲಖನೌ: ಉತ್ತರ ಪ್ರದೇಶದಲ್ಲಿ ಮುಂಗಾರು ಹಂಗಾಮು ಮುಗಿದು ಹಿಂಗಾರು ಹಂಗಾಮಿನ ಬಿತ್ತನ ಕಾರ್ಯ ಶರುವಾಗಿದೆ. ರಸಗೊಬ್ಬರದ ಕೊರತೆ ಎದುರಾಗುವ ಆತಂಕದಿಂದ ರೈತರು ಸರ್ಕಾರಿ ಗೊಬ್ಬರ ಮಾರಾಟ ಕೇಂದ್ರಗಳ ಮುಂದೆ ಉದುದ್ದ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ, ಕೇಂದ್ರ ಸರ್ಕಾರ ರಸಗೊಬ್ಬರದ ಕೊರತೆ ಆಗಿಲ್ಲ ಎಂದು ಸ್ಪಷ್ಟ ಪಡಿಸಿದೆ. ಉತ್ತರ ಪ್ರದೇಶದಲ್ಲಿ ಬುಧವಾರ ಬೆಳಗ್ಗೆಯ ಲೆಕ್ಕಾಚಾರದಂತೆ 1,818 ಲಕ್ಷ ಟನ್‌ ರಸಗೊಬ್ಬರ ದಾಸ್ತಾನು ಇದೆ. ಈ ತಿಂಗಳ ಬೇಡಿಕೆಗಿಂತ ಶೇ. 10ರಷ್ಟು ಹೆಚ್ಚೇ ಇದೆ.

ಹರ್ದೋಯಿ, ಅಲಿಗಢಗಳ ಸರ್ಕಾರಿ ಮಾರಾಟ ಮಳಿಗೆಗಳ ಮುಂದೆ ದೊಡ್ಡ ಸರತಿ ಸಾಲುಗಳು ಇವೆ. ಗೊಬ್ಬರಕ್ಕಾಗಿ ಚಳಿಯನ್ನು ಲೆಕ್ಕಿಸದೆ ನಸುಕಿನ 4 ಗಂಟೆಯಿಂದಲೇ ನಿಂತಿರುವುದಾಗಿ ಅನೇಕ ರೈತರು ಹೇಳಿದ್ದಾರೆ. ಸರತಿಯಲ್ಲಿರುವ ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಗೊಬ್ಬರ ಸಿಗುತ್ತದೆ ಎಂದು ಭರವಸೆ ನೀಡಿ, ಟೋಕನ್‌ಗಳನ್ನು ಹಂಚಿದ್ದಾರೆ.

ಸರ್ಕಾರಿ ಮಳಿಗೆಗಲ್ಲಿ 360ರಿಂದ 400 ಚೀಲ ಗೊಬ್ಬರ ಇರಬಹುದು. ಆದರೆ, ಹೊರಗೆ ಸಾವಿರಾರು ರೈತರು ನಿಂತಿದ್ದಾರೆ. ಎಲ್ಲರಿಗೂ ಎಲ್ಲಿಂದ ಕೊಡುತ್ತಾರೆ? ಎಂದು ರೈತ ಸೋಹಾನ್‌ ಪಾಲ್‌ ಸಿಂಗ್‌ ಪ್ರಶ್ನಿಸಿದ್ದಾರೆ.

ಕೆಲವು ಕೇಂದ್ರಗಳಲ್ಲಿ ದಾಸ್ತಾನು ಕಡಿಮೆ ಇದೆ. ಆದರೆ ಪೂರ್ಣವಾಗಿ ಕೊರತೆ ಆಗಿಲ್ಲ. ಈ ಕೇಂದ್ರಗಳಿಗೆ ಗೋದಾಮಿನಿಂದ ಸರಬರಾಜನ್ನು ಚುರುಕುಗೊಳಿಸಲಾಗಿದೆ. ಪಾಯಿಂಟ್‌ ಆಫ್‌ ಸೇಲ್‌ ಮಿಷನ್‌ಗಳಲ್ಲಿ ದೋಷ ಕಾಣಿಸಿಕೊಂಡಿದೆ. ಹೀಗಾಗಿ ಟೋಕನ್‌ಗಳನ್ನು ವಿತರಣೆ ಮಾಡಿದ್ದೇವೆ ಎಂದು ಅಲಿಗಢ ಜಿಲ್ಲಾಡಳಿತ ಹೇಳಿದೆ. ಎಲ್ಲರಿಗೂ ಗೊಬ್ಬರ ಸಿಗುತ್ತದೆ. ಆತಂಕದಿಂದ ಮಳಿಗೆಗೆಗಳ ಮುಂದೆ ಜಮಾಯಿಸುವುದು ಬೇಡ. ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ಆಗುತ್ತಿದೆ ಎಂಬ ಪುಕಾರು ಸುಳ್ಳು ಎಂದು ಅಧಿಕಾರಿ ವಂದನಾ ತ್ರಿವೇದಿ ತಿಳಿಸಿದ್ದಾರೆ.

Shortage Fears Long Queues Outside UP Fertilizer Centres

ಇದನ್ನು ಓದಿ: ನೈಸರ್ಗಿಕ ಕೃಷಿಯಲ್ಲಿ ಎರೆಹುಳುವಿನ ಮಹತ್ವ

ಇದನ್ನು ಓದಿ: ಮರ ಆಧಾರಿತ ಕೃಷಿಗೆ ಉತ್ತೇಜನ