ವಾಷಿಂಗ್ಟನ್‌: ವೃತ್ತಿಪರರ ವಲಸಿಗರಿಗೆ ನೀಡುವ ಎಚ್-1ಬಿ ವೀಸಾದಾರರ ಸಂಗಾತಿ (ಪತಿ/ಪತ್ನಿ) ಉದ್ಯೋಗಿಯಾಗಿದ್ದ ಪಕ್ಷದಲ್ಲಿ ಈ ಪರವಾನಗಿ ಸ್ವಯಂಚಾಲಿತವಾಗಿ ನವೀಕರಣಗೊಳ್ಳುವುದನ್ನು ಪ್ರತಿಬಂಧಿಸಿದ್ದ ನಿಯಮವನ್ನು ಜೋ ಬೈಡೆನ್ ಆಡಳಿತ ರದ್ದು ಮಾಡಿದೆ. ಇದರಿಂದ ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿರುವ ಮಾಹಿತಿ ತಂತ್ರಜ್ಞಾನ (ಐಟಿ)ದ ಸಾವಿರಾರು ಉದ್ಯೋಗಿಗಳ ಕುಟುಂಬಕ್ಕೆ ಅನುಕೂಲ ಆಗಲಿದೆ. ವಿಶೇಷವಾಗಿ ಪತಿ ಜತೆಗೆ ತೆರಳಿರುವ ಪತ್ನಿಯರಿಗೆ ನಿರಾಳ ಆಗಿದೆ.

ಎಚ್‌-1ಬಿ ವೀಸಾದಾರರ ಸಂಗಾತಿಯ ಉದ್ಯೋಗದ ಪರವಾನಗಿಯು ಸ್ವಯಂಚಾಲಿತವಾಗಿ ನವೀಕರಣಗೊಳ್ಳುವುದನ್ನು ನಿರ್ಬಂಧಿಸಲಾಗಿದ್ದ ನಿಯಮವನ್ನು ಪ್ರಶ್ನಿಸಿ ಅಮೆರಿಕದ ವಲಸಿಗರ ವಕೀಲ ಅಸೋಸಿಯೇಷನ್‌ (ಎಐಎಲ್‌ಎ) ಸಲ್ಲಿಸಿದ್ದ ಅರ್ಜಿ ಇತ್ಯರ್ಥ ಸಂಬಂಧ ಆಂತರಿಕ ಭದ್ರತಾ ಇಲಾಖೆ ನಿಯಮ ಸಡಿಲ ಮಾಡಿದೆ.

‘ಎಚ್‌-1 ವೀಸಾದಾರರ ಸಂಗಾತಿಗಳಿಗೆ ಉದ್ಯೋಗದ ಪರವಾನಗಿ ಸ್ವಯಂಚಾಲಿತವಾಗಿ ನವೀಕರಣ ಕೈಗೊಳ್ಳಲು ನಿಯಮ ಅಡಚಣೆ ಆಗಿತ್ತು. ಇದರಿಂದ ಅವರು ಹೆಚ್ಚು ಸಂಬಳದ ಉದ್ಯೋಗದವನ್ನು ಕಳೆದುಕೊಳ್ಳಬೇಕಿತ್ತು. ಹೀಗಾಗಿ ಅವರು ನ್ಯಾಯಕ್ಕಾಗಿ ಹೋರಾಟ ನಡೆಸಿದರು ಎಂದು ಎಐಎಲ್‌ಎ ಹೇಳಿದೆ.

ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷರಾಗಿದ್ದ ಕಾಲದಲ್ಲಿ ‘ಅಮೆರಿಕ ಮೊದಲು’ ನೀತಿಗೆ ಪ್ರಾಮುಖ್ಯತೆ ನೀಡಿದ್ದರಿಂದ ಎಚ್‌- 1ಬಿ ವೀಸಾದ ನಿಯಮಗಳನ್ನು ಬಿಗಿ ಗೊಳಿಸಿದ್ದರು. ಈ ವೀಸಾದಾರರ ಸಂಗಾತಿಗಳಿಗೆ ಉದ್ಯೋಗದ ಅನುಮತಿಯನ್ನು ಸ್ವಯಂಚಾಲಿತವಾಗಿ ನವೀಕರಿಸುವುದನ್ನು ಪ್ರತಿಬಂಧಿಸಿತ್ತು. ಅಮರಿಕನ್ನರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗಬೇಕೆಂದು ಡೊನಾಲ್ಡ್‌ ಟ್ರಂಪ್‌ ಸರ್ಕಾರ ಮಾಡಿದ್ದ ಇಂಥ ಅನೇಕ ನಿರ್ಬಂಧಗಳನ್ನು ಜೋ ಬೈಡೆನ್ ಅಧಿಕಾರಕ್ಕೆ ಬಂದ ಮೇಲೆ ತೆಗೆದು ಹಾಕಿದ್ದಾರೆ.

US End Work Gaps For Spouses Of H-1B Visa Holders

ಇದನ್ನು ಓದಿ:  ಭಾರತ ಪ್ರಯಾಣಿಕರ ಮೇಲೆ ಕೋವಿಡ್ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಿದ ಅಮೆರಿಕ

ಇದನ್ನು ಓದಿ: ಸಿಬ್ಬಂದಿ ಕೊರತೆ ಕಾರಣ ಅಮೆರಿಕದಲ್ಲಿ 800 ವಿಮಾನ ಸಂಚಾರ ರದ್ದು