ಚನ್ನೈ: ಸೆಪ್ಟೆಂಬರ್ ೧೯ರಿಂದ ಮತ್ತೆ ಶುರುವಾಗಲಿರುವ ಐಪಿಲ್ ಲೀಗ್ ಗಾಗಿ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಸುರೇಶ್ ರೈನಾ, ರಾಬಿನ್ ಉತ್ತಪ್ಪ, ಋತುರಾಜ್ ಗಾಯಕ್ ವಾಡ್ ಮೊದಲಾದ ಆಟಗಾರರು ದುಬೈ ವಿಮಾನ ಏರಿದ್ದಾರೆ.  ಇತರೆ ಆಟಗಾರರು ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಐಪಿಲ್ ಇದೀಗ ಮರಳಿ ಶುರುವಾಗುತ್ತಿದ್ದು, ಚನ್ನೈ ಸೂಪರ್ ಕಿಂಗ್ಸ್ ತಂಡ ಸಿದ್ದತೆಗಾಗಿ ಅಡಿಇಟ್ಟಿದೆ. ಶುಕ್ರವಾರ ಆಗಸ್ಟ್ ೧೩ರಂದು ಚನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಧೋನಿ ತಂಡ ಹೊರಟಿದೆ.  ದುಬೈನಲ್ಲಿ ಎಳು  ದಿನಗಳ ಕಾಲ ವ್ಯವಸ್ಥಿತ ಕ್ವಾರಂಟೈನ್ ನಿಯಮ ಪಾಲಿಸಬೇಕಿದ್ದು ನಂತರ ತಂಡ ತನ್ನ ತಾಲೀಮು ನಡೆಸಬಹುದಾಗಿದೆ.

ದೋನಿ ತಂಡ ಎರಡನೆಯ ಸ್ಥಾನದಲ್ಲಿದ್ದು, ಬೆಂಗಳೂರು ರಾಯಲ್ ಛಾಲೆಂಜರ್ಸ್ ಮೂರನೆ ಸ್ಥಾನದಲ್ಲಿ ಮುಂದುವರೆದಿತ್ತು, ಡೆಲ್ಲಿ ಕ್ಯಾಪಿಟಲ್ಸ್ ೧೨ ಅಂಕದೊಂದಿಗೆ ಮೊದಲ ಸ್ಥಾನದಲ್ಲಿತ್ತು. ದುಬೈ, ಶಾರ್ಜಾ, ಅಬುಧಾಬಿಯಲ್ಲಿ ಪಂದ್ಯಗಳು ನಡೆಯಲಿವೆ. ಆಟಗಾರರಲ್ಲಿ ಕೊರೊನಾ ಸೊಂಕು ಹೆಚ್ಚುತ್ತಿದ್ದ ಕಾರಣ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಸ್ಥಗಿತಗೊಳಿಸಿತ್ತು.