ಕರ್ನಾಟಕದಲ್ಲಿ ಮತ್ತೊಮ್ಮೆ ಕುಲಾಂತರಿ ಹುನ್ನಾರ ನಡೆಯುತ್ತಿದೆ ಎಂದು ಕೃಷಿ ಕ್ಷೇತ್ರದಲ್ಲಿ ಸಕ್ರಿಯರಾಗಿರುವವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಹಕ ಮತ್ತು ರೈತರ ಒತ್ತಾಯಕ್ಕೆ ಮಣಿದು ಬಿಟಿ ಬದನೆಯನ್ನು ಸರ್ಕಾರ ನಿಷೇದಿಸಿದ ಹನ್ನೆರೆಡು ವರ್ಷಗಳ ನಂತರ ಬಿಟಿ ಮುಸುಕಿನ ಜೋಳದ ಮೂಲಕ ಆಹಾರ ಬೆಳೆಗಳನ್ನು ಕುಲಾಂತರಿ ಮೂಲಕ ಕುಲಗೆಡಿಸಲು ಕಂಪನಿಗಳು ಮುಂದಾಗಿವೆ ಎಂದು ಸಹಜ ಸಮೃದ್ಧ ಸಂಸ್ಥೆಯ ಮೂಲಕ ನಾಟಿ ತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆ ಕಾರ್ಯಗಳಲ್ಲಿ ಸಕ್ರಿಯರಾಗಿರುವ ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕುಲಾಂತರಿ ತಳಿಗಳ ಸೀಮಿತ ಕ್ಷೇತ್ರ ಪ್ರಯೋಗಗಳನ್ನು ನಡೆಸಲು ರಾಲಿಸ್ ಇಂಡಿಯಾ ಲಿಮಿಟೆಡ್ ಸರ್ಕಾರಕ್ಕೆ ಅರ್ಜಿಯನ್ನು ಸಲ್ಲಿಸಿದೆ. ಬಿಳಿಗಿರಿರಂಗನ ಬೆಟ್ಟದ ಸೋಲಿಗರು ಮತ್ತು ಬೆಳಗಾವಿಯ ರೈತರು ದೇಸಿಯ ಬಣ್ಣದ ಮುಸುಕಿನ ಜೋಳವನ್ನು ಇವತ್ತಿಗೂ ಬೆಳೆಯುತ್ತಿದ್ದಾರೆ. ಕುಲಾಂತರಿ ಮುಸುಕಿನ ಜೋಳ ಕೃಷಿಗೆ ಬಂದರೆ ದೇಸಿ ಮುಸುಕಿನ ಜೋಳದ ವೈವಿಧ್ಯ ನಾಶವಾಗುವುದರಲ್ಲಿ ಸಂಶಯವಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಮುಸುಕಿನ ಜೋಳದ ನೆಪದಲ್ಲಿ ಬದನೆ, ಭತ್ತ ಮೊದಲಾದ ಕುಲಾಂತರಿ ತಳಿಗಳ ತರಲು ಕಂಪನಿಗಳು ಹುನ್ನಾರ ನಡೆಸಿವೆ. ‘ಕರ್ನಾಟಕಕ್ಕೆ ಕುಲಾಂತರಿ ಬೇಡ’ ಎಂದು ಕರ್ನಾಟಕ ಸರ್ಕಾರವನ್ನು ನಾವೆಲ್ಲ ಒತ್ತಾಯಿಸಬೇಕಿದೆ. ಕರ್ನಾಟಕ ಸರ್ಕಾರವು ಈ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ/ಆಕ್ಷೇಪಣೆಗಳನ್ನು ಸಲ್ಲಿಸಲು ಅಕ್ಟೋಬರ್ ಕೊನೆಯವರೆಗೆ ಅವಕಾಶ ನೀಡಿದೆ. ಸರ್ಕಾರದ ಪ್ರಧಾನ ಕಾರ್ಯದರ್ಶಿ (ಜೀವ ಪರಿಸ್ಥಿತಿ ಮತ್ತು ಪರಿಸರ), ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಇವರಿಗೆ ಬಿಟಿ ಹತ್ತಿ ಮತ್ತು ಮುಸುಕಿನ ಜೋಳದ ಕ್ಷೇತ್ರ ಪ್ರಯೋಗ ನಡೆಸಲು ಅನುಮತಿ ನೀಡಬಾರದಾಗಿ ಪತ್ರ ಬರೆಯಿರಿ. ಸಂಘ- ಸಂಸ್ಥೆ, ರೈತ ಗುಂಪುಗಳಿಗೂ ಮಾಹಿತಿ ನೀಡಿ ಎಂದು ಅವರು ಮನವಿ ಮಾಡಿದ್ದಾರೆ. ಈ ಕುರಿತು ಸಾರ್ವಜನಿಕರು [email protected] ವಿಳಾಸಕ್ಕೆ ಇಮೇಲ್ ಮಾಡಬೇಕು ಎಂದು ವಿನಂತಿಸಿದ್ದಾರೆ.

BT Maize Threat in Karnataka Again Krishnaprasad Requests Farmers to write govt

ಇದನ್ನೂ ಓದಿ: ನೈಸರ್ಗಿಕ ಕೃಷಿಯಲ್ಲಿ ಎರೆಹುಳುವಿನ ಮಹತ್ವ
ಇದನ್ನೂ ಓದಿ: ಮರ ಆಧಾರಿತ ಕೃಷಿಗೆ ಉತ್ತೇಜನ