ಪಠಾಣ್‌ಕೋಟ್‌: ಕಾಂಗ್ರೆಸ್‌, ಆಮ್‌ ಆದ್ಮಿ ಪಕ್ಷಗಳ (ಆಪ್‌) ವಿರುದ್ಧ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಮೂಲ ಪ್ರತಿಯಾದೆ, ಅಪ್‌ ಅದರ ನೆರಳಚ್ಚು. ಇವೆರಡೂ ಅಪರಾಧ ಕೃತ್ಯ ನಡೆಸುವ ಜೊತೆಗಾರರು ಇದ್ದಂತೆ ಎಂದು ಜರಿದರು.

ಫೆಬ್ರವರಿ 20ಕ್ಕೆ ಚುನಾವಣೆ ಎದುರಾಗುವ ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಬುಧವಾರ ಚುನಾವಣಾ ಪ್ರಚಾರ ಕಾರ್ಯ ನಡೆಸಿದ ಅವರು, ಒಂದು ಪಕ್ಷ ಪಂಜಾಬ್‌ನನ್ನು ಲೂಟಿ ಮಾಡಿದ್ದೆ, ಇನ್ನೊಂದು ದೆಹಲಿಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು. ಅಯೋಧ್ಯೆಯ ರಾಮಮಂದಿರ ಮತ್ತು ಸೇನೆಯ ಯಾವುದೇ ಕಾರ್ಯದ ಬಗ್ಗೆ ಅವೆರಡು ಪಕ್ಷಕ್ಕೂ ಒಂದು ರೀತಿಯ ಹತಾಶೆ ಇದ್ದು, ಸಹಿಸಿಕೊಳ್ಳುವುದಕ್ಕೆ ಅವುಗಳಿಂದ ಆಗುತ್ತಿಲ್ಲ. ಪಠಾಣ್‌ಕೋಟ್‌ ವಾಯಸೇನಾ ನೆಲೆಯ ಮೇಲೆ 2016ರಲ್ಲಿ ನಡೆದ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಅವಮಾನ ಮಾಡುವ ಕಾರ್ಯವನ್ನು ಕಾಂಗ್ರೆಸ್‌ ಮಾಡಿದೆ. ಈ ದಾಳಿಯನ್ನು ಖಂಡಿಸಿ ಇದಕ್ಕೆ ಪ್ರತ್ಯುತ್ತರ ನೀಡುವ ವಿಚಾರದಲ್ಲಿ ಇಡೀ ದೇಶ ಒಮ್ಮತದಿಂದ ಇದ್ದರೆ, ಕಾಂಗ್ರೆಸ್‌ ಮಾತ್ರ ಭಿನ್ನವಾಗಿತ್ತು. ಸರ್ಕಾರ, ಪಂಜಾಬ್‌ನ ಜನರು ಮತ್ತು ಸೇನೆಯನ್ನೂ ಅದು ಸಂಶಯದಿಂದ ನೋಡಿತು ಎಂದು ಮೂದಲಿಸಿದರು.

ಪುಲ್ವಾಮಾ ದಾಳಿಯ ಕರಾಳ ವರ್ಷಾಚರಣೆಯ ವೇಳೆಯಲ್ಲೂ ಕಾಂಗ್ರೆಸ್‌ನ ನಡೆ ಇದೇ ರೀತಿ ಇತ್ತು ಎಂದು ಟೀಕಿಸಿದರು. ಪಠಾಣ್ ಕೋಟ್‌ ಮತ್ತು ಉರಿ ಸೇನಾ ನೆಲೆಗಳ ಮೇಲೆ ನಡೆದ ದಾಳಿಗೆ ಪ್ರತಿಯಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ಶಿಬಿರಗಳನ್ನು ಭಾರತೀಯ ಸೇನೆ ನಾಶ ಮಾಡಿತ್ತು. ಪುಲ್ವಾಮಾದಲ್ಲಿ ನಡೆದ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಏರ್‌ ಸ್ಟೈಕ್‌ ನಡೆಸಲಾಯಿತು. ಇದಕ್ಕೆ ಸಾಕ್ಷಿಯೇನು ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದರು.

Congress Is Original, AAP Is Photocopy”: PM Twin Attack

ಇದನ್ನು ಓದಿ: ಐದೂ ರಾಜ್ಯಗಳಲ್ಲಿ ಬಿಜೆಪಿಯದ್ದೇ ಗೆಲುವು: ಪ್ರಧಾನಿ ಮೋದಿ ವಿಶ್ವಾಸ

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಕುಟುಂಬದಲ್ಲೊಬ್ಬರು ಸುಷ್ಮಾ!