ರೋಗ ಲಕ್ಷಣಗಳು:

1.ಈ ರೋಗವು ಮುಂಗಾರು ಹಂಗಾಮಿನಲ್ಲಿ ಹೆಚ್ಚಾಗಿ ಬಾಧಿಸುತ್ತದೆ. ಬಳ್ಳಿಗಳ ಎಲ್ಲಾ ಭಾಗಗಳಲ್ಲೂ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

2.ಎಲೆಗಳ ಮೇಲೆ ಕಪ್ಪು ಚುಕ್ಕೆಗಳು ಕಂಡು ಬಂದು ಅಂತಹ ಎಲೆಗಳಲ್ಲಿ ನಾರಿನಂಥ ಬಾಚು ಭಾಗಕಾಣುತ್ತವೆ. ಈ ಚುಕ್ಕೆಗಳು ದೊಡ್ಡವಾಗುತ್ತ ಎಲೆಗಳನ್ನು ವ್ಯಾಪಿಸಿ ಕೊನೆಗೆ ಎಲೆಗಳು ಉದುರುತ್ತವೆ.

3.ಮಣ್ಣಿನ ಮೇಲ್ಭಾಗದ ಹರಿಗಳು, ಮೃದುಕಾಂಡ, ಕುಡಿ ಎಲೆಗಳು ರೋಗದಿಂದಾಗಿ ಕಪ್ಪು ವರ್ಣಕ್ಕೆತಿರುಗುತ್ತವೆ. ಬಳ್ಳಿಗಳಲ್ಲಿ ರೋಗವು ಪೂರ್ತಿ ವ್ಯಾಪಿಸಿ ಪೂರ್ತಿ ಬಳ್ಳಿ ನಾಶವಾಗುತ್ತದೆ.

4.ಮುಖ್ಯಕಾಂಡದ ನೆಲಮಟ್ಟ ಅಥವಾ ಕುತ್ತಿಗೆ ಭಾಗದಲ್ಲಿ ರೋಗ ಬಾಧಿಸಿದಲ್ಲಿ ಪೂರ್ತಿ ಬಳ್ಳಿ ಸೊರಗಿಒಣಗುತ್ತದೆ.
ಎಲೆಗಳು, ಕಾಳುಗೊನೆಗಳು ಉದುರಿ ಹೋಗುತ್ತವೆ. ರೆಂಬೆಗಳು ಗೆಣ್ಣು ಭಾಗದಲ್ಲಿ ಮುರಿಯುತ್ತವೆ ಮತ್ತು ಪೂರ್ತಿ ಬಳ್ಳಿ ಒಂದು ತಿಂಗಳಲ್ಲಿ ಕುಸಿಯುತ್ತದೆ.

5.ಪೋಷಕಾಂಶಗಳನ್ನು ಹೀರಿಕೊಳ್ಳುವ ಬೇರಿನ ಭಾಗಗಳಿಗೆ ರೋಗ ತಗುಲಿದಲ್ಲಿ ಬಾಧೆ ಲಕ್ಷಣಗಳು ನಿಧಾನ ಪ್ರಕಟಗೊಂಡು ಮಳೆಯ ಆರಂಭದೊಂದಿಗೆ ಬಳ್ಳಿಗಳ ಎಲೆಗಳು ಹಳದಿ ವರ್ಣಕ್ಕೆ ತಿರುಗಿ, ಬಾಡಿಉದುರಿ ಹೋಗುತ್ತವೆ. ಅಕ್ಟೋಬರ್-ನವೆಂಬರ್ ತಿಂಗಳಿನ ನಂತರ ಸಾಯುತ್ತವೆ.
ಬಳ್ಳಿಯ ಬುಡದ ಎಲೆಗಳ ಮೇಲೆ ವೃತ್ತಾಕಾರದ ನೀರಿನಿಂದ ತೋಯ್ದಂತಹ ಕಪ್ಪು ಮಚ್ಚೆಗಳು ಕಾಣಿಸಿಕೊಂಡು ಎಲೆಗಳು ಹಳದಿ ಬಣ್ಣಕ್ಕೆತಿರುಗಿ ಕೊಳೆತು ಉದುರಿ ಬೀಳುತ್ತವೆ.

6.ಬುಡದಿಂದ ಸುಮಾರು 30 ರಿಂದ 40 ಸೆಂ. ಮೀ. ವರೆಗೆಕಾಂಡದ ಮೇಲೆ ನೀರಿನಿಂದ ತೋಯ್ದಂತಹಕಪ್ಪು ಮಚ್ಚೆಗಳು ಕಾಣಿಸಿಕೊಂಡು ದೊಡ್ಡದಾಗುತ್ತವೆ.
ಈ ರೋಗವು ತೀವ್ರವಾದಾಗ ಕಾಂಡವು ಕೊಳೆತು ಆ ಭಾಗದತೊಗಟೆ ಸುಲಿದು ಬಿದ್ದು ಬಳ್ಳಿ ಸಂಪೂರ್ಣವಾಗಿ ಹಾಳಾಗುವುದು.

7.ಸಾಮಾನ್ಯವಾಗಿ ನೆಲದಲ್ಲಿ ಹರಡಿ ಬೆಳೆಯುವ ಕವಲು ಬಳ್ಳಿಗಳು ಮೊದಲು ಈ ರೋಗಕ್ಕೆತುತ್ತಾಗುತ್ತವೆ.
ಈ ಮೇಲೆ ತಿಳಿಸಿದ ರೋಗ ಲಕ್ಷಣಗಳು ಕಂಡುಬಂದಲ್ಲಿ ಇಡೀ ಬಳ್ಳಿಯು 30 ದಿನಗಳಲ್ಲಿ ಸಾಯುತ್ತದೆ. ಆದ್ದರಿಂದ ಈ ರೋಗವನ್ನು “ಶೀಘ್ರ ಸೊರಗು ರೋಗ” ಎಂದು ಕರೆಯುತ್ತಾರೆ.

ರೋಗಾಣು ಮತ್ತುರೋಗದ ಪ್ರಸರಣೆ:
1.ಫೈಟೋಪ್ತರ ಕ್ಯಾಪ್ಸಿಸಿ ಎಂಬ ಶಿಲೀಂಧ್ರ ರೋಗಾಣುವಿನಿಂದ ಹರಡುವ ಈ ರೋಗಕ್ಕೆಜೌಗು ಪ್ರದೇಶ ಹಾಗೂ ತೇವಾಂಶದಿಂದ ಕೂಡಿದ ವಾತಾವರಣ ಅನುಕೂಲಕರವಾಗಿರುತ್ತದೆ

2.ಪ್ರತೀ ದಿನ ಸುಮಾರು 22 ಮಿ. ಮೀ. ಗಿಂತ ಹೆಚ್ಚು ಮಳೆ ಸುರಿಯುವುದು, ಶೇ. 83 ರಿಂದ 99 ರಷ್ಟುಆರ್ದ್ರತೆ, 22 ರಿಂದ 29 ಡಿಗ್ರಿ ಸೆ. ಉಷ್ಣಾಂಶ ಮತ್ತು ದಿನಕ್ಕೆ 2 ರಿಂದ 3 ಗಂಟೆಗಳಿಗಿAತ ಕಡಿಮೆ ಸೂರ್ಯನ ಬೆಳಕು ಇದ್ದಾಗ ಬಳ್ಳಿಯು ರೋಗದ ಬಾಧೆಗೆ ತುತ್ತಾಗುತ್ತದೆ.

3.ಮಳೆಗಾಲದಲ್ಲಿ ಕಂಡು ಬರುವ ಈ ರೋಗವು ಹಿಂದಿನ ವರ್ಷಗಳ ರೋಗ ಪೀಡಿತ ಬಳ್ಳಿಯ ಉಳಿಕೆಯಲ್ಲಿ ರೋಗಾಣು ಬದುಕಿ ಉಳಿದು ವಂಶಾಭಿವೃದ್ಧಿಯನ್ನು ಮುಂದುವರೆಸುತ್ತದೆ.

4.ಮುಂಗಾರು ಮಳೆಯ ತೇವಾಂಶದಲ್ಲಿ ರೋಗಾಣು ಅಲ್ಪ ಸಮಯದಲ್ಲಿ ವೃದ್ಧಿಸಿ ಬೀಜಕಣಗಳನ್ನು ಉತ್ಪತ್ತಿ ಮಾಡುತ್ತದೆ. ಈ ಬೀಜಕಣಗಳು ನೀರಿನ ಮೂಲಕ ಬೇರುಗಳನ್ನು ಸೇರಿ, ಬೇರು ಕೊಳೆಯುದಕ್ಕೆ ಕಾರಣವಾಗುತ್ತದೆ.

ರೋಗದ ಸಮಗ್ರ ಹತೋಟಿ ಕ್ರಮಗಳು :
1.ರೋಗ ಬಾಧೆಯಿರುವ ಬಳಲಿ ಸತ್ತು ಹೋದ ಬಳ್ಳಿಗಳನ್ನು ಬೇರುಗಳ ಸಮೇತ ಕಿತ್ತು ತೋಟದಿಂದ ಹೊರಗೊಯ್ದು ನಾಶಪಡಿಸಬೇಕು.

2.ತೋಟಗಳಲ್ಲಿ ನೀರು ನಿಲ್ಲದಂತೆ ಬಸಿಕಾಲುವೆಗಳನ್ನು ನಿರ್ಮಿಸುವುದು ಸೂಕ್ತ.

3.ಬೇಸಾಯ ಕ್ರಮಗಳನ್ನು ಅನುಸರಿಸುವಾಗ ಬಳ್ಳಿ ಬೇರುಗಳಿಗೆ ಗಾಯಗಳಾಗದಂತೆ ನೋಡಿಕೊಳ್ಳಬೇಕು.

4.ರೋಗರಹಿತ ಬಳ್ಳಿ ಮತ್ತು ರೋಗಾಣು ಮುಕ್ತ ಮಣ್ಣನ್ನು ಸಸಿ ಮಾಡಲು ಉಪಯೋಗಿಸಬೇಕು.

5.ನೆಲದ ಮೇಲೆ ಹರಡಿರುವ ಮತ್ತು ಹೆಚ್ಚಾದ ಕವಲು ಬಳ್ಳಿಗಳನ್ನು ಮುಂಗಾರಿನ ಮುನ್ನ ಕತ್ತರಿಸಿ ತೆಗೆಯಬೇಕು. ಉಳಿದ ಬಳ್ಳಿಗಳನ್ನು ಆಶ್ರಯ ಮರಕ್ಕೆಕಟ್ಟಿ ಬೆಳೆಯಲು ಬಿಡಬೇಕು.

6.ಗಿಡದ ಬುಡದಲ್ಲಿ ಹಸಿರೆಲೆಗೊಬ್ಬರ ಹಾಗೂ ದ್ವಿದಳ ಧಾನ್ಯದ ಬೆಳೆಗಳನ್ನು ಬೆಳೆಸುವುದರಿಂದ ರೋಗಾಣುವಿನ ಹರಡುವಿಕೆಕಡಿಮೆ ಮಾಡಬಹುದು.

7.ತೋಟದಲ್ಲಿ ಬಳ್ಳಿಗಳಿಗೆ ಎಲೆಗಳಿಂದ ಹೊದಿಕೆ ಮಾಡತ್ತಿರಬೇಕು ಮತ್ತು ಮಳೆಗಾಲದಲ್ಲಿ ಮಣ್ಣಿನ ಅಗೆತದ ಕೆಲಸ ಮಾಡಬಾರದು.

8.ಪ್ರತಿ ಬಳ್ಳಿಗೆ 50 ರಿಂದ 60 ಗ್ರಾಂ. ಟ್ರೆöÊಕೋಡರ್ಮಾ ವಿರಿಡೆಅಥವಾ ಟ್ರೈಕೋಡರ್ಮಾ ಹಾರ್ಜಿಯಾನಂ ಜೈವಿಕ ಶಿಲೀಂಧ್ರವನ್ನು 1 ಕಿ. ಗ್ರಾಂ. ಬೇವಿನ ಹಿಂಡಿಅಥವಾ 5 ಕಿ. ಗ್ರಾಂ. ಕೊಟ್ಟಿಗೆ ಗೊಬ್ಬರದಲ್ಲಿ ಮಿಶ್ರ ಮಾಡಿ ಮಳೆಗಾಲ ಪ್ರಾರಂಭವಾಗುವುದಕ್ಕಿಂತ ಮುಂಚೆ ಬುಡಕ್ಕೆ ಹಾಕುವುದು ಒಳಿತು.

8.ಮುಂಗಾರಿನ ಮುಂಚೆ ನೆಲದಿಂದ 1 ಮೀ.ಎತ್ತರದವರೆಗೆ ಬಳ್ಳಿಯ ಕಾಂಡಕ್ಕೆ ಶೇ. 10 ರ ಬೋರ್ಡೋ ಪೇಸ್ಟನ್ನು ಲೇಪಿಸಬೇಕು.

9.ಹೊಸದಾಗಿ ನಾಟಿ ಮಾಡಿದ ಚಿಗುರು ಬೆಳೆಯುವ ಹಬ್ಬು ಬಳ್ಳಿಗಳನ್ನು ನೆಲದ ಮೇಲೆ ಹರಡಲು ಬಿಡದಂತೆ ಆಧಾರ ಗಿಡಕ್ಕೆ ಎತ್ತಿ ಕಟ್ಟುತ್ತಿರಬೇಕು.

10.ಆಧಾರಗಿಡದ ರೆಂಬೆಗಳನ್ನು ಮಳೆಗಾಲದ ಪ್ರಾರಂಭದಲ್ಲಿ ಕತ್ತರಿಸುವುದರಿಂದ ವಾತಾವರಣದಲ್ಲಿ ಹೆಚ್ಚಿನ ಆರ್ದ್ರತೆಉಂಟಾಗದಂತೆ ಹಾಗೂ ಸೂರ್ಯರಶ್ಮಿ ನೆಲಮಟ್ಟದವರೆಗೂ ತಲುಪುವಂತೆ ನೋಡಿಕೊಳ್ಳುವುದರಿಂದ ರೋಗದ ತೀವ್ರತೆ ಕಡಿಮೆಗೊಳಿಸಬಹುದು.

11.ಶೇ. 0.25ರ ಮೆಟಲಾಕ್ಸಿಲ್‌ಎಮ್ 8% + ಮ್ಯಾಂಕೊಝೆಬ್ 64% ಡಬ್ಲೂ.ಪಿ ಶಿಲೀಂಧ್ರನಾಶಕವನ್ನು ಪ್ರತಿ ಬಳ್ಳಿಗೆ 2 ರಿಂದ 3 ಲೀಟರ್‌ನಂತೆ ಸಿಂಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-

ಸಂತೋಷ್ ನಿಲುಗುಳಿ
ವಿಜ್ಞಾನಿಗಳು ಮತ್ತು ತೋಟಗಾರಿಕಾ ಸಲಹೆಗಾರರು
ಸಿದ್ಧಾರ್ಥ ಅಗ್ರಿ ಸಲ್ಯೂಷನ್ಸ
9916359007