ಮುಂಬೈ: ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಸೇರಿದಂತೆ ನೂರಾರು ಕ್ರಿಕೆಟಿಗರಿಗೆ ತರಭೇತಿಯನ್ನು ನೀಡುತ್ತಿದ್ದ ತರಬೇತುದಾರ ವಾಸು ಪರಾಂಜಪೆ (೮೨)ನಿಧನರಾಗಿದ್ದಾರೆ. ಮಾಟುಂಗಾದಲ್ಲಿನ ತಮ್ಮ ನಿವಾಸದಲ್ಲಿಯೇ ಅಂತಿಮ ಯಾತ್ರೆ ಮುಗಿಸಿದ್ದು, ಪತ್ನಿ ಮತ್ತು ಮಗ ಜತಿನ್ ನನ್ನು ಅಗಲಿದ್ದಾರೆ.  ಇವರ ನಿಧನಕ್ಕೆ ಕ್ರಿಕೆಟ್ ಪಟುಗಳು ಸೇರಿದಂತೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಸಂತಾಪ ಸೂಚಿಸಿದೆ.
ರವಿಶಾಸ್ತ್ರಿ ಟ್ವಿಟ್ಟರ್ ನಲ್ಲಿ ಸಹ ವಾಸು ಅವರ ಕಾರ್ಯವೈಖರಿಯನ್ನು ಶ್ಲಾಘಿಸಿ ಸಂತಾಪ ಸೂಚಿಸಿದ್ದಾರೆ.
ಇವರ ಸಾಧನೆಯ ಕೆಲ ಝಲಕ್: ಮುಂಬೈ ಹಾಗೂ ಬರೋಡಾ ತಂಡದ ಪರವಾಗಿ 1956 ಮತ್ತು 1970 ರ ನಡುವೆ ಪರಾಂಜಪೆ 29 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದರು. 1
2 ಬಾರಿ ರಣಜಿ ಟ್ರೋಫಿ ಗೆದ್ದ ಮುಂಬೈ ತಂಡದ ಭಾಗವಾಗಿದ್ದರು.
1964 ರಣಜಿ ಟ್ರೋಫಿಯಲ್ಲಿ ಬರೋಡಾ ವಿರುದ್ಧ ಅತ್ಯುತ್ತಮ ಸ್ಕೋರ್ 127 ರೊಂದಿಗೆ 785 ರನ್ ಗಳೊಂದಿಗೆ ತಮ್ಮ ಪ್ರಥಮ ದರ್ಜೆ ವೃತ್ತಿ ಜೀವನವನ್ನು ಕೊನೆಗೊಳಿಸಿದರು.
ಕ್ರಿಕೆಟ್ ನಿಂದ ನಿವೃತ್ತಿಯಾದ ನಂತರ, ಮಾರ್ಗದರ್ಶರಾಗಿ, ತರಬೇತುದಾರಾಗಿ ಸೇವೆ ಸಲ್ಲಿಸಿದ್ದಾರೆ.
ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್‌ಸರ್ಕರ್, ಸಂಜಯ್ ಮಂಜ್ರೇಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಯುವರಾಜ್ ಸಿಂಗ್ ಮತ್ತು ರೋಹಿತ್ ಶರ್ಮಾ ಸೇರಿದಂತೆ ಹಲವು ಖ್ಯಾತನಾಮ ಕ್ರಿಕೆಟಿಗರಿಗೆ ತರಬೇತುದಾರರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದರು.