ಚಿಕ್ಕಮಗಳೂರು:ಚಿಕ್ಕಮಗಳೂರು ವಲಯದ ಅರಣ್ಯ ವಿಭಾಗದ ಸಿಂದಿಗೆರೆ ಮೀಸಲು ಅರಣ್ಯದಲ್ಲಿ ಶ್ರೀಗಂಧದ ಮರ ಕಡಿಯುತ್ತಿದ್ದ ವ್ಯಕ್ತಿಯನ್ನು ಇಲಾಖೆ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಪ್ರದೀಪ್, ಅರಣ್ಯ ರಕ್ಷಕ ಆದರ್ಶ್, ಅರಣ್ಯ ವೀಕ್ಷಕ ಗಿರೀಶ್ ಒಳಗೊಂಡ ತಂಡ ಭಾಗವಹಿಸಿತ್ತು.
ಸಿಂದಿಗೆರೆ ಮೀಸಲು ಅರಣ್ಯದಲ್ಲಿ ಶ್ರೀಗಂದ ಕಡಿಯುತ್ತಿದ್ದ ರಾಜಯ್ಯನನ್ನು ಬಂಧಿಸಲಾಗಿದೆ.  ಈತ ಎಸ್. ಬಿದರೆ ನಿವಾಸಿಯಾಗಿದ್ದ.  ಈತನ ವಿರುದ್ಧ ಅರಣ್ಯ ತಕ್ಷೀರು ಸಂಖ್ಯೆ ೨೫/೨೦೨೧/-೨೨, ದಿನಾಂಕ ೨೩/೮/೨೦೨೧ರಂದು ದಾಖಲಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಚಿಕ್ಕಮಗಳೂರು ವಲಯದ ಡಿಎಫ್ ಒ, ಡಿಸಿಎಫ್, ವಲಯ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯಚರಣೆ ನಡೆಸಲಾಗಿದೆ.