ಲಾರ್ಡ್ಸ್: ಇಂಡಿಯಾ v/s ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ೧-೦ ಅಂತರದಿಂದ ಗೆದ್ದು ೧೫೧ ರನ್ ಗಳ ರೋಚಕ ಗೆಲುವು ಸಾಧಿಸಿ ಮುನ್ನಡೆದಿದೆ.

ಲಾರ್ಡ್ಸ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕೆ. ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅಧ್ಬುತ ಪ್ರದರ್ಶನ ನೀಡಿದ್ದ ಕಾರಣ ಒಟ್ಟು ೩೬೪ ರನ್ ಗಳಿಸಿತ್ತು.  ಇಂಗ್ಲೆಂಡ್ ಸಹ ಮೊದಲ ಇನ್ನಿಂಗ್ಸ್ ನಲ್ಲಿ ದಿಟ್ಟತನದಿಂದ ಎದುರಿಸಿತ್ತು.

ಇಂಗ್ಲೆಂಡ್ ಕ್ಯಾಪ್ಟನ್ ಜೋ ರೂಟ್ ಭರ್ಜರಿ ಸೆಂಚುರಿ ಮತ್ತು ಜಾನಿ ಬ್ರೆಸ್ಟೋ ಅರ್ಧ ಸೆಂಚುರಿಯಿಂದಾಗಿ ೩೯೧ ರನ್ ಗೆ ಟಾಂಗ್ ಕೊಟ್ಟು ಮುನ್ನಡೆದಿತ್ತು.

ಎರಡನೇ ಇನ್ನಿಂಗ್ಸ್ ನಲ್ಲಿ ಭರವಸೆಯ ಆಟಗಾರರಾದ ಕೆ.ಎಲ್. ರಾಹುಲ್, ರೋಹಿತ್ ಶರ್ಮಾ ಬಹುಬೇಗನೆ ಔಟ್ ಆಗಿದ್ದರು.  ಎದುರಾಳಿಯ ಎದುರು ಟೀಂ ಇಂಡಿಯಾ ೮ ವಿಕೆಟ್ ಕಳೆದುಕೊಂಡು ೨೯೮ ರನ್ ಗಳಿಸಿ ಡಿಕ್ಲೇರ್ ಆಗಿತ್ತು.

ಎರಡನೇ ಇನ್ನಿಂಗ್ಸ್ ನಲ್ಲಿ ಬೂಮ್ರಾ, ಶರ್ಮಾ ಹಾಗೂ ಸೆಮಿ ಶಾಕ್ ನೀಡಿದ್ರು.  ಒಬ್ಬರ ನಂತರ ಒಬ್ಬರು ಔಟಾದರು, ಜಾನಿ ಬ್ರೆಸ್ಓ ಕೇವಲ ಎರಡು ರನ್ ಗೆ ಔಟ್ ಆದರು.  ಮೊಹಮ್ಮದ್ ಸಿರಾಜ್ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ೧೨೦ ರನ್ ಗಳಿಗೆ ಸರ್ವಪತನ ಹೊಂದಿತ್ತು.   ಇದರಿಂದಾಗಿ ಭಾರತಕ್ಕೆ ೧೫೧ ರನ್ ಗಳ ರೋಚಕ ಗೆಲುವು ಲಭಿಸಿದೆ.

ಸ್ಕೋರ್‌  ಸಂಕ್ಷಿಪ್ತ ವಿವರ: ಮೊದಲ ಇನ್ನಿಂಗ್ಸ್‌ : ಭಾರತ : ಕೆ.ಎಲ್.‌ ರಾಹುಲ್‌ 129 , ರೋಹಿತ್‌ ಶರ್ಮಾ 83, ವಿರಾಟ್‌ ಕೊಯ್ಲಿ42, ರವೀಂದ್ರ ಜಡೇಜಾ 40, ರಿಷಬ್‌ ಪಂತ್‌ 37, ಜಮ್ಮಿ ಅಂಡರ್‌ಸನ್‌ 62/5, ರಾಬಿನ್‌ ಸನ್‌ 73/2, ಮಾರ್ಕ್‌ವುಡ್‌ 91/2, ಮೊಯಿನ್‌ ಆಲಿ 53/1.

ಇಂಗ್ಲೆಂಡ್‌ : ಜೋ ರೂಟ್‌ 180, ಜಾನಿ ಬ್ರೆಸ್ಟೋ 57, ಬರ್ನ್ಸ್‌ 49, ಮೊಯಿನ್‌ ಆಲಿ 27, ಜೋಸ್‌ ಬಟ್ಲರ್‌ 23, ಮೊಹಮ್ಮದ್‌ ಸಿರಾಜ್‌ 94/4, ಇಶಾಂತ್‌ ಶರ್ಮಾ 69/3, ಮೊಹಮ್ಮದ್‌ ಸೆಮಿ 95/2

ಎರಡನೇ ಇನ್ನಿಂಗ್ಸ್‌ : ಭಾರತ : ಅಜಿಂಕ್ಯಾ ರಹಾನೆ 61, ಮೊಹಮ್ಮದ್‌ ಸೆಮಿ 56, ಚೇತೇಶ್ವರ ಪೂಜಾರ 45, ಜಸ್ಪ್ರಿತ್‌ ಬೂಮ್ರಾ 34, ರೋಹಿತ್‌ ಶರ್ಮಾ 21, ವಿರಾಟ್‌ ಕೊಯ್ಲಿ20, ಮಾರ್ಕ್‌ವುಡ್‌ 51/3, ರಾಬಿನ್‌ಸನ್‌ 45/2, ಮೊಯಿನ್‌ ಆಲಿ 84/2, ಸ್ಯಾಮ್‌ ಕರನ್‌ 42/1

ಇಂಗ್ಲೆಂಡ್‌ : ಜೋರೂಟ್‌ 33, ಜೋಸ್‌ ಬಟ್ಲರ್‌ 25, ಮೊಯಿನ್‌ ಆಲಿ 13, ಮೊಹಮ್ಮದ್‌ ಸಿರಾಜ್‌ 32/4, ಜಸ್ಪ್ರಿತ್‌ ಬೂಮ್ರಾ 33/3, ಇಶಾಂತ್‌ ಶರ್ಮಾ 13/2, ಮೊಹಮ್ಮದ್‌ ಸೆಮಿ 13/1