ಅಥ್ಲೆಟಿಕ್ ನಲ್ಲಿ ಭಾರತದ ನೀರಜ್ ಚೋಪ್ರಾಗೆ ಚಿನ್ನದ ಪದಕ ಗೆದ್ದಿದ್ದಾರೆ. ಅಥ್ಲೆಟಿಕ್ಸ್ ನ ನೂರು ವರ್ಷದಲ್ಲೇ ಲಭಿಸಿದ ಮೊದಲ ಚಿನ್ನ. ಸತತ 13 ವರ್ಷಗಳ ನಂತರ ಒಲಿದ ಮೊದಲ ಚಿನ್ನದ ಪದಕ ಇದಾಗಿದೆ.

ಫೈನಲ್‌ ನಲ್ಲಿ ೮೭.೫೮ ಮೀ ದೂರ ಎಸೆದು ಸಾಧನೆ ತೋರಿದ್ದ ನೀರಜ್. ನೀರಜ್ ಹರಿಯಾಣ ಮೂಲದವರಾಗಿದ್ದಾರೆ. ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಭಾರತ ಗೆದ್ದ ಏಳನೇ ಪದಕ ಇದಾಗಿದ್ದು, ಕ್ರೀಡಾಬಿಮಾನಿಗಳು ಪುಳಕಗೊಂಡಿದ್ದಾರೆ. ಭಾರತೀಯರು ಒಲಂಪಿಕ್ಸ್ ನಿಂದ ಇನ್ನಷ್ಟು ಚಿನ್ನ ನಿರೀಕ್ಷಿಸುತ್ತಿದ್ದಾರೆ.

ಸದ್ಯ ಒಲಂಪಿಕ್ಸ್ ಕ್ರೀಡೆಗಳಲ್ಲಿ ಭಾಗವಹಿಸಿದ ಚಿನ್ನ ಗೆದ್ದ ಚೋಪ್ರಾಗೆ ಪ್ರಧಾನಿ ಮಂತ್ರಿ ಮೋದಿಯವರು ಖುದ್ದಾಗಿ ಶುಭಾಷಯ ಕೋರಿದ್ದಾರೆ.