ನವದೆಹಲಿ: ಫೋರ್ಬ್ಸ್ ಮ್ಯಾಗಜೀನ್‌ ಭಾರತದ ನೂರು ಮಂದಿ ಸಿರವಂತರ ಪಟ್ಟಿ ಬಿಡುಗಡೆ ಮಾಡಿದ್ದು, ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ 14ನೇ ವರ್ಷವೂ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. 92.70 ಬಿಲಿಯನ್‌ ಡಾಲರ್‌ (6.95 ಲಕ್ಷ ಕೋಟಿ ರೂಪಾಯಿ) ಸಂಪತ್ತನ್ನು ಮುಕೇಶ್‌ ಹೊಂದಿದ್ದಾರೆ. ಕೋವಿಡ್‌-19 ಸಾಂಕ್ರಾಮಿಕದಿಂದ ಆರ್ಥಿಕ ಹಿನ್ನಡೆಯ ಮಧ್ಯೆಯೂ ಕಳೆದ ವರ್ಷದಲ್ಲಿ ಈ ನೂರು ಮಂದಿಯ ಸಂಪತ್ತು ಶೇ. 50ರಷ್ಟು ವೃದ್ಧಿಸಿದೆ ಎಂದು ಫೋಬ್ಸ್‌ ನಿಯತಕಾಲಿಕೆ ಹೇಳಿದೆ.

ಈ ನೂರು ಮಂದಿಯ ಸಂಪತ್ತು 257 ಬಿಲಿಯನ್‌ ಡಾಲರ್‌ನಿಂದ (19.27 ಲಕ್ಷ ಕೋಟಿ ರೂಪಾಯಿ) 775 ಬಿಲಿಯನ್‌ ಡಾಲರ್‌ಗೆ (58 ಲಕ್ಷ ಕೋಟಿ ರೂಪಾಯಿ) ಏರಿಕೆ ಕಂಡಿದೆ. 61 ಮಂದಿಯ ಸಂಪತ್ತು 1 ಬಿಲಿಯನ್‌ ಡಾಲರ್‌ನಷ್ಟು (7,495 ಕೋಟಿ ರೂಪಾಯಿ) ಏರಿಕೆ ಕಂಡಿದೆ.

ಪಟ್ಟಿಗೆ ಹೊಸದಾಗಿ ನಾಲ್ವರು ಸೇರ್ಪಡೆಯಾಗಿದ್ದು, ಅರವಿಂದ ಲಾಲ್‌ 2.55 ಬಿಲಿಯನ್ ಡಾಲರ್‌ (19,121 ರೂಪಾಯಿ) ಮೂಲಕ 87ನೇ ಸ್ಥಾನ, ಅಶೋಕ್‌ ಬೂಬ್‌ 2.3 ಬಿಲಿಯನ್‌ ಡಾಲರ್‌ (17,231 ರೂಪಾಯಿ) ಮೂಲಕ 93ನೇ ಸ್ಥಾನ, ದೀಪಕ್‌ ಮೆಹ್ತಾ 2.05 ಬಿಲಿಯನ್‌ ಡಾಲರ್‌ (15,360 ರೂಪಾಯಿ) ಮೂಲಕ 97ನೇ ಸ್ಥಾನ ಹಾಗೂ ಯೋಗೇಶ್‌ ಕೋಠಾರಿ 1.94 ಬಿಲಿಯನ್‌ ಡಾಲರ್‌ (14,544 ರೂಪಾಯಿ) ಮೂಲಕ 100ನೇ ಸ್ಥಾನದಲ್ಲಿ ಇದ್ದಾರೆ.

ಮೊದಲು ಐವರು ಇವರು:

ಮೊದಲ ಐದು ಸ್ಥಾನದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ (92.70 ಬಿಲಿಯನ್‌ ಡಾಲರ್‌-6.95 ಲಕ್ಷ ಕೋಟಿ ರೂಪಾಯಿ), ಅಂದಾನಿ ಸಮೂಹದ ಒಡೆಯ ಗೌತಮ್‌ ಅದಾನಿ (74.80 ಬಿಲಿಯನ್‌ ಡಾಲರ್‌- 5.60 ಲಕ್ಷ ಕೋಟಿ ರೂಪಾಯಿ), ಎಚ್‌ಸಿಎಲ್‌ ಟೆಕ್ನಾಲಜಿ ಮುಖ್ಯಸ್ಥ ಶಿವ ನಾಡರ್‌ (31 ಬಿಲಿಯನ್‌ ಡಾಲರ್‌- 2.32 ಲಕ್ಷ ಕೋಟಿ ರೂಪಾಯಿ),  ಅವೆನ್ಯೂ ಸೂಪರ್‌ ಮಾರ್ಟ್ಸ್ನ ರಾಧಾಕೃಷ್ಣನ್‌ ದಮಾನಿ (29.40 ಬಿಲಿಯನ್‌ ಡಾಲರ್‌- 2.20 ಲಕ್ಷ ಕೋಟಿ ರೂಪಾಯಿ), ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಸೈರಸ್‌ ಪೂನಾವಾಲಾ (19 ಬಿಲಿಯನ್‌ ಡಾಲರ್‌- 1.42 ಲಕ್ಷ ಕೋಟಿ ರೂಪಾಯಿ) ಇದ್ದಾರೆ. ಈ ಪಟ್ಟಿಯಲ್ಲಿ ಇರುವ ಏಕೈಕ ಮಹಿಳೆ ಸಾವಿತ್ರಿ ಜಿಂದಾಲ್‌. ಇವರ ಸಂಪತ್ತು 18 ಬಿಲಿಯನ್‌ ಡಾಲರ್‌ (1.34 ಲಕ್ಷ ಕೋಟಿ ರೂಪಾಯಿ) ಇದ್ದು, ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿ ಇದ್ದಾರೆ.

Mukesh Ambani Most Wealthiest Indian

ಇದನ್ನು ಓದಿರಪ್ತು ಉತ್ತೇಜನ ಕ್ರೀಯಾಶೀಲಾ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಿ

ಇದನ್ನು ಓದಿ: ಕಾಫಿ ಕೃಷಿಗೆ ಸಂಬಂಧಿಸಿದ ಸಾಲ ಸರ್ಫೇಸಿ ಕಾಯ್ದೆಯಿಂದ ಹೊರಗಿಡುವಂತೆ ಒತ್ತಾಯಿಸಿ ಕೇಂದ್ರದ ವಿತ್ತ ಸಚಿವೆಗೆ ಮನವಿ