ತಿರುವನಂತಪುರ:  ಧಾರ್ಮಿಕ ಮೂಲಭೂತವಾದಿಗಳು ಪ್ರಾಬಲ್ಯ ಹೊಂದುವ ರಾಷ್ಟ್ರಗಳಿಗೆ ಉಳಿಗಾಲವಿಲ್ಲ ಎಂಬುದಕ್ಕೆ ಅಫ್ಘಾನಿಸ್ತಾನ ಸ್ಪಷ್ಟ ನಿದರ್ಶನವಾಗಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ತಿರುವನಂತಪುರದಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ನಾರಾಯಣಗುರು ಅವರ ೧೬೭ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜಗತ್ತಿನ ಎಲ್ಲೆಡೆ ಮತಾಂಧತೆ, ಭಯೋತ್ಪಾದನೆ, ರಕ್ತಪಾತ ಹೆಚ್ಚುತ್ತಿದೆ.  ಭಾರತದಲ್ಲೂ ಕೋಮು ವೈಷಮ್ಯದ ಘಟನಾವಳಿಗಳು ಹೆಚ್ಚುತ್ತಿರುವ ಹಿನ್ನೇಲೆಯಲ್ಲಿ ಆತಂಕ ವ್ಯಕ್ತಪಡಿಸಿದರು.

ನಾರಾಯಣ ಗುರುಗಳಂತಹ ಮಹನೀಯರುಗಳ ಆದರ್ಶವನ್ನು ಪ್ರತಿಯೊಬ್ಬರು ಸಹ ತಮ್ಮ ಬಾಳಿನಲ್ಲಿ ಅನುಸರಿಸಬೇಕು.  ವಿಭಜಕ ಧಾರ್ಮಿಕ ಮೂಲಭೂತವಾದ ಮೊದಲು ನಿಲ್ಲಿಸಬೇಕು ಎಂದು ಅವರು ತಿಳಿಸಿದ್ದರು. ಜಾತಿ, ಮತ, ಪಂಥ, ಧರ್ಮದ ಹೆಸರಿನಲ್ಲಿ ಜನಾಂಗೀಯ ಧ್ವೇಷ ರಕ್ತಪಾತಗಳಿಗೆ ಮನುಕುಲ ಅಂತ್ಯ ಹಾಡಬೇಕೆಂದು ಎಚ್ಚರಿಸಿದ್ದಾರೆ.