ನವದೆಹಲಿ: ಬಿಜೆಪಿಗೆ ಮೈತ್ರಿ ಪಕ್ಷ ಇದೀಗ ಹೊಸ ತಲೆನೋವು ತಂದಿದ್ದು, NDA ಸಮನ್ವಯ ಸಮಿತಿ ರಚಿಸುವಂತೆ ಕೇಳಿದೆ.   ಈ ಮೊದಲು RJD ಜೊತೆಗೆ ಜಾತಿ ಗಣತಿಗೆ ಸಹ ಆಗ್ರಹಿಸಿತ್ತು ನಂತರ PEGAS SPYWARE ಬಗ್ಗೆ ತನಿಖೆ ನಡೆಸಲು ಸಹ ಒತ್ತಾಯಿಸಿತ್ತು.

NDA ಸಮನ್ವಯ ಸಮಿತಿಯನ್ನು, ರಾಜ್ಯ-ಕೇಂದ್ರ ಮಟ್ಟದಲ್ಲಿ ಭಿನ್ನವಾಗಿರುವ ಹಲವು ಸಮಸ್ಯೆಗಳನ್ನು ಚರ್ಚಿಸಲು ಪೂರಕವಾಗುವ ಉದ್ದೇಶಕ್ಕೆ ಎಂದು ಹೇಳಿಕೊಂಡಿದೆ. ಪಕ್ಷವು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಧಾನಿಯ ಗುಣಗಳನ್ನೆಲ್ಲಾ ಹೊಂದಿದ್ದಾರೆ ಎಂಬ ನಿರ್ಣಯವನ್ನು ತನ್ನ ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡಿದೆ.

ಈ ವಿಷಯವನ್ನು ಕೌನ್ಸಿಲ್ ಸಭೆಯ ಬಳಿಕ JDU (U) ಪ್ರಧಾನ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ವಕ್ತಾರ ಕೆ.ಸಿ ತ್ಯಾಗಿ ತಿಳಿಸಿದ್ದಾರೆ. ಎಬಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ NDA ಸಮನ್ವಯ ಸಮಿತಿ ಇದ್ದಂತೆ, ಇದೇ ರೀತಿ ಸಮಿತಿಯನ್ನು ಎದುರುನೋಡುತ್ತಿದ್ದೇವೆ, ನಮ್ಮಲ್ಲಿ ಭಿನ್ನ ಸಮಸ್ಯೆಗಳ ಚರ್ಚೆಗೆ, ಮೈತ್ರಿಯ ಸುಗಮ ನಿರ್ವಹಣೆಗೆ ಇದು ಸರಾಗ ಮಾಡುತ್ತದೆ, NDA ಮೈತ್ರಿಕೂಟದ ಅಗತ್ಯವಿಲ್ಲದ ಟೀಕೆಗಳನ್ನು ತಡೆಯುವುದು ಎಂದು ಅವರು ತಿಳಿಸಿದರು.

ನಿತೀಶ್ ಕುಮಾರ್ ಪ್ರಧಾನಿಯ ಓಟದಲ್ಲಿ ಇರದೇ ಹೋದರೂ, ಪ್ರಧಾನಿಗೆ ಇರಬೇಕಾದ ಎಲ್ಲಾ ಗುಣಗಳನ್ನು ಹೊಂದಿರುವುದಾಗಿ ಪಕ್ಷದ ರಾಷ್ಟ್ರೀಯ ಮಂಡಳಿ ನಿರ್ಣಯ ಅಂಗೀಕರಿಸಿದೆ ಎಂದು ಸಹ ತ್ಯಾಗಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.