ನವದೆಹಲಿ: ದೇಶದಲ್ಲಿ 100 ಕೋಟಿ ಕೊರೋನಾ ಲಸಿಕೆಗಳನ್ನು ನೀಡಿದ ಗಣನೀಯ ಸಾಧನೆಯ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಚೀನಾದ ನಂತರ ಈ ಗುರಿ ಸಾಧಿಸಿದ ಏಕೈಕ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದ್ದು ಇಡೀ ವಿಶ್ವವೇ ಭಾರತವನ್ನು ಬೆರಗುಗಣ್ಣುಗಳಿಂದ ನೋಡುವಂತೆ ಮಾಡಿದೆ.

ಈ ಅತಿದೊಡ್ಡ ಅಭಿಯಾನದಲ್ಲಿ ಭಾಗಿಯಾದ ಆರೋಗ್ಯ ಕಾರ್ಯಕರ್ತರು ಹಾಗೂ ವೈದ್ಯರುಗಳನ್ನು ಮುಕ್ತಕಂಠದಿಂದ ಹೊಗಳಿದ ಮೋದಿ ಇದು ದೇಶದ ಸಾಮರ್ಥ್ಯದ ಸೂಚಕವಲ್ಲದೇ ಹೊಸ ಅಧ್ಯಾಯದ ಪ್ರಾರಂಭವಾಗಿದೆಯೆಂದರು. ಈ ಸಾಧನೆ ಅನಗತ್ಯ ಟೀಕೆಗಳನ್ನು ಮಾಡುತ್ತಿದ್ದವರ ಬಾಯಿಗಳನ್ನು ಮುಚ್ಚಿಸಿದೆಯೆಂದು ಅವರು ಹೇಳಿದರು. ಅವರ ಭಾಷಣದ ಮುಖ್ಯಾಂಶಗಳೆಂದರೆ:

1. ಈ ಮಹತ್ಸಾಧನೆಯು ದೇಶದ ಎಲ್ಲಾ ನಾಗರಿಕರಿಗೂ ಸೇರಿದ್ದು ಇದಕ್ಕಾಗಿ ಎಲ್ಲರನ್ನೂ ಅಭಿನಂದಿಸುತ್ತೇನೆ.
2. ಈ ಕಷ್ಟಸಾಧ್ಯವಾದ ಸಾಧನೆಯು ದೇಶದ ಎಲ್ಲಾ 130 ಕೋಟಿ ಪ್ರಜೆಗಳೂ ತಮ್ಮ-ತಮ್ಮ ಜವಾಬ್ದಾರಿಗಳನ್ನು ಅರಿತು ಇದರಲ್ಲಿ ಭಾಗವಹಿಸಿದ್ದರಿಂದ ಮಾತ್ರ ಸಾಧ್ಯವಾಗಿದೆ.
3. ಇಂತಹ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡಾಗ ಮೊದಮೊದಲು ಅನೇಕ ಅಡ್ಡಿ-ಆತಂಕಗಳಿದ್ದು ಇದಕ್ಕೆ ಬೇಕಾದ ಶಿಸ್ತು ಜನಸಾಮಾನ್ಯರಿಲ್ಲಿ ಇದೆಯೇ ಎಂಬ ಅನುಮಾನಗಳೂ ಇದ್ದವು.
4. ಈ ಬಹತ್ ಕಾರ್ಯಕ್ರಮವು ಸಂಪೂರ್ಣವಾಗಿ ವೈಜ್ಞಾನಿಕವಾಗಿ ನಡೆದಿದ್ದು ಹೆಮ್ಮೆ ಪಡುವಂಥ ವಿಷಯವಾಗಿದೆ.
5. ಯಾರನ್ನೂ ವಿಶೇಷವಾಗಿ ಪರಿಗಣಿಸದೆ ಎಲ್ಲಾ ನಾಗರಿಕರನ್ನೂ ಸಮಾನವಾಗಿ ಪರಿಗಣಿಸುವಂತೆ ನೋಡಿಕೊಂಡದ್ದರಿಂದ ಇದು ಅತ್ಯಂತ ಯಶಸ್ವಿಯಾಗಿದೆ.
6. ಈ ಯಶಸ್ವಿ ಕಾರ್ಯಕ್ರಮವು ಎಲ್ಲರ ಜೊತೆ, ಎಲ್ಲರ ಅಭಿವೃದ್ಧಿ, ಎಲ್ಲರ ವಿಶ್ವಾಸ, ಹಾಗೂ ಎಲ್ಲರ ಪ್ರಯತ್ನ ಸಿದ್ಧಾಂತಕ್ಕೆ ಜೀವಂತ ಉದಾಹರಣೆಯಾಗಿದೆ.
7. ಈ ಸಾಧನೆಯಿಂದ ದೇಶದಲ್ಲಿ ಹೆಚ್ಚಿನ ಆಶಾಭಾವನೆಯಿದ್ದು ಮೊದಲು ಎಲ್ಲದಕ್ಕೂ ವಿದೇಶಗಳನ್ನು ಅವಲಂಬಿಸಿದ್ದ ನಾವು ಈಗ ಹೆಚ್ಚು-ಹೆಚ್ಚು ಸ್ವಾವಲಂಬನೆಯ ಸಾಧನೆಯನ್ನು ಮಾಡುತ್ತಿದ್ದೇವೆ.
8. ದೇಶದ ಹಾಗೂ ಹೊರರಾಷ್ಟ್ರಗಳ ಪರಿಣತರು ನಮ್ಮ ಆರ್ಥಿಕತೆಯ ಬಗ್ಗೆ ಸಕಾರಾತ್ಮಕವಾಗಿ ಮಾತನಾಡುತ್ತಿದ್ದು ಹೊರದೇಶಗಳಿಂದ ದಾಖಲೆ ಪ್ರಮಾಣದ ಬಂಡವಾಳ ಹರಿದು ಬರುತ್ತಿದ್ದು ದೇಶದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡುತ್ತಿವೆ.

Modi addresses the nation on completing 100 crore vaccinations

ಇದನ್ನೂ ಓದಿ: ಕೊರೊನಾ ಆಯ್ತು, ಅಮೆರಿಕದಲ್ಲೀಗ ಸ್ಯಾಲ್ಮೊನೆಲ್ಲಾ ಸೋಂಕು ಹಾವಳಿ: ಏನಿದು?
ಇದನ್ನೂ ಓದಿ: Narendra Modi: ಕುಶಿನಗರ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ