ಚಿಕ್ಕಮಗಳೂರು: ಇಲ್ಲಿನ ಕಡೂರು ತಾಲೂಕಿನ ಎಮ್ಮೆದೊಡ್ಡಿ ಸಮೀಪ ಮುಸ್ಲಾಪುರ ಗ್ರಾಮದಲ್ಲಿ ಹೊಸ ಬಾರ್ ಒಪನ್ ಮಾಡಿದವರ ಮೇಲೆ ಮಹಿಳೆಯರು ಹರಿಹಾಯ್ದ ಘಟನೆ ನಡೆದಿದೆ.

ಎಮ್ಮೆದೊಡ್ಡಿ ಅಕ್ಕ ಪಕ್ಕಾ ಯಾವುದೇ ಬಾರ್ ಇರಲಿಲ್ಲ, ನಿನ್ನೆ ಬಾರ್ ತೆರೆದು ಕೂಲಿ ಮಾಡುವ ನಮ್ಮಬಾಳಿಗೆಮುಳ್ಳಾನಮ್ಮ ಬಾಳಿಗೆ ಮುಳ್ಳಾಗಬೇಡಿನಮ್ಮಗಂಡಂದಿರು ಕಡೂರಿಗೆ ಸಂತೆಗೆ ಅಂತ ಹೋಗಿ ವಾರಕ್ಕೆ ಒಂದು ದಿನ ಕುಡಿತಾ ಇದ್ದರು, ಈಗ ದಿನಾಕುಡಿದು ಹಾಳಾಗ್ತಾ ಇದ್ದಾರೆ ಎಂದು ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಒಂದು ಬಾರ್ ನಿಂದ ಸುತ್ತಾ ಮುತ್ತ ಬಾರ್ ಇರಲಿಲ್ಲ, ಶಾಲೆ ಕೂಡಾ ಇತ್ತು. ಸುಮಾರು ೨೮ ಹಳ್ಳಿ ಗಳಿಗೆ ಇದರಿಂದ ತೊಂದರೆ ಆಗ್ತಾ ಇದ್ದು, ಮಹಿಳೆಯರು ಮಕ್ಕಳ ಮೇಲೆ ಪ್ರಭಾವ ಭೀರಲಿದೆ.

ಪ್ರತಿಭಟನೆಯಲ್ಲಿ ಹಲವಾರು ಹಳ್ಳಿಗಳ ಗ್ರಾಮಸ್ಥರು ಸೇರಿದಂತೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಿದ್ದರು