ಪಶ್ಚಿಮ ಬಂಗಾಳ: ತೃಣಮೂಲ ಕಾಂಗ್ರೆಸ್ ಪಕ್ಷ ತೊರೆದು ಚುನಾವಣಾ ಸಂದರ್ಭದಲ್ಲಿ ಬಿಜೆಪಿಗೆ ವಲಸೆ ಬಂದಿದ್ದ ಹಲವಾರು ನಾಯಕರು ಈಗ ಮತ್ತೆ TMC ಪಕ್ಷಕ್ಕೆ ಮರಳಿದ್ದಾರೆ.   ಅದರಲ್ಲಿ ಬಿಜೆಪಿಯಲ್ಲಿದ್ದು ಗೆಲುವು ಸಾಧಿಸಿದ ಶಾಸಕನೂ ಸಹ ಮರಳಿ TMC ಪಕ್ಷಕ್ಕೆ ವಾಪಾಸ್ ಆಗಿರೋದು ಬಿಜೆಪಿಗರಿಗೆ ಅಚ್ಚರಿ ಮೂಡಿಸಿದೆ. ಪಶ್ಚಿಮ ಬಂಗಾಳದ ವಿಷ್ಣುಪುರದ ಬಿಜೆಪಿ ಶಾಸಕ ತನ್ಮಯ್ ಘೋಷ್ ಅವರು TMC ಪಕ್ಷಕ್ಕೆ ಮರಳಿ ಸೇರಿಕೊಂಡಿದ್ದಾರೆ.  ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ತನ್ಮಯ್, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಪ್ರತಿಕಾರಕ್ಕಾಗಿ ರಾಜಕೀಯ ಮಾಡುತ್ತಾ ಇದೆ.  ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ರಾಜ್ಯದ ಜನರ ಹಕ್ಕುಗಳನ್ನು ಕಸಿಯಲು ಯತ್ನಿಸುತ್ತಿದೆ ಎಂದು ಅಪಾಧಿಸಿದ್ದಾರೆ.  ಸಾರ್ವಜನಿಕರ ಹಿತದೃಷ್ಠಿಯಿಮ್ದ ಮಮತಾ ಬ್ಯಾನರ್ಜಿ ಅವರನ್ನು ಎಲ್ಲರೂ ಬೆಂಬಲಿಸಿ ಎಂದು ಅವರು ಕರೆ ನೀಡಿದ್ದಾರೆ.

ಇದಕ್ಕೆ ಮೊದಲು ಬಂಗಾಳ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೌಮನ್ ಮಿತ್ರಾ ಅವರ ಪತ್ನಿ ಶಿಖಾ ಮಿತ್ರಾ, ಮಾಜಿ ರಾಷ್ಟ್ರಪತಿ ದಿವಂಗತ ಪ್ರಣವ್ ಮುಖರ್ಜಿ ಅವರ ಸೊಸೆ ಶುಭ್ರಾ ಘೋಷ್ ಭಾನುವಾರವಷ್ಟೇ ಬಿಜೆಪಿ ತ್ಯಜಿಸಿ TMC ಸೇರ್ಪಡೆಯಾಗಿದ್ದರು.   ಇದಾದ ಮಾರನೇ ದಿನವೇ ಬಿಜೆಪಿ ಶಾಸಕನೊಬ್ಬ ಕಮಲಕ್ಕೆ ಕೈಕೊಟ್ಟಿರುವುದು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.