ಅಹಮದಾಬಾದ್: ಸ್ಥಳೀಯ ಔಷಧ ಸಂಸ್ಥೆ ಜೈಡಸ್ ಕ್ಯಾಡಿಲಾ ಕಂಪನಿ ‘ಝೈಕೋವ್-ಡಿ’ (ZyCoV-D) ಲಸಿಕೆಯನ್ನು ತುರ್ತು ಔಷಧಗಳ ಎಸ್ ಇಸಿ ಸಮಿತಿ ಸಮ್ಮತಿ ನೀಡಿದೆ.

ಔಷಧಗಳ ಗುಣಮಟ್ಟ ನಿಯಂತ್ರಣ ಪ್ರಾದಿಕಾರ (SEC) ಈ ಲಸಿಕೆಯನ್ನು ಅಂಗೀಕರಿಸಿದೆ, ದೇಶೀಯವಾದಿ ತಯಾರಿಸಲಾದ ಎರಡನೇ ಲಸಿಕೆ ಇದಾಗಿದೆ.  ೧೨-೧೮ ವಯೋಮಾನದ ಮಕ್ಕಳಿಗೆ ಲಸಿಕೆ ನೀಡಬಹುದಾಗಿದೆ.

ಇದು ಮೂರು ಡೋಸ್ ಗಳಲ್ಲಿ ತೆಗೆದುಕೊಳ್ಳಬೇಕು, ಎರಡು ಡೋಸ್ ಗಳ ನಡುವೆ ೨೮ ದಿನಗಳ ಅಂತರ ಇರಬೇಕು. ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ್ದಾರೆ.

ಸೂಜಿ ರಹಿತ ಇಂಜೆಕ್ಷನ್ ಇದಾಗಿದ್ದು, ವಿಶೇಷ ಉಪಕರಣ ಬಳಸಲಾಗುವುದು.

ಕೊರೊನಾ ವೈರಸ್ ವಿರುಧ್ಧ ತಯಾರಿಸಲಾದ ವಿಶ್ವದ ಮೊದಲ ಡಿಎನ್ ಎ ಆಧಾರಿತ ಲಸಿಕೆ.  ಈ ಚುಚ್ಚುಮದ್ದು ನೀಡಿದಾಗ SARS CoV-2 virus spike protein ಉತ್ಪಾದನೆಯಾಗಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.

DNA ಪ್ಲಾಟ್ ಫಾರಂ ಬಳಸಿ ‘ಫ್ಲಗ್ ಅಂಡ್ ಪ್ಲೇ ತಂತ್ರಜ್ಞಾನ ವೈರಸ್ ರೂಪಾಂತರ ಎದುರಿಸುವಲ್ಲಿ ಸಹಕಾರಿ. ೬೭%ಜನರು ಲಸಿಕೆ ತೆಗೆದುಕೊಂಡ ನಂತರ ಪಾಸಿಟಿವ್ ಬಂದಿಲ್ಲ.  ೧೨-೧೮ ವಯೋಮಾನದವರಿಗೆ ಲಸಿಕೆ ಸುರಕ್ಷಿತ ಎಂದಿದೆ ಕಂಪನಿ.

ದೇಶದಲ್ಲಿ ತುರ್ತು ಬಳಕೆಗೆ ಅನುಮತಿ ಪಡೆದ ಆರನೇ ಲಸಿಕೆ ಇದು.  ಕೋವಿಶೀಲ್ಡ್,  ಕೋವ್ಯಾಕ್ಸಿನ್, ಸ್ಪುಟ್ನಿಕ್ ವಿ ಈಗಾಗಲೇ ಬಳಕೆಯಲ್ಲಿ ಇವೆ. ಆಗಸ್ಟ್ ನಿಂದ ಡಿಸೆಂಬರ್ ತನಕ ೨೧೬ ಕೋಟಿ ವ್ಯಾಕ್ಸಿನ್ ಡೋಸ್ ಲಭ್ಯ, ವಾರ್ಷಿಕವಾಗಿ ಹತ್ತು-ಹನ್ನೆರಡು ಕೋಟಿ ಡೋಸ್ ZyCoV-D ತಯಾರಿಸಲು ಯೋಜನೆ ನಡೆಸಿದೆ.