ಕನ್ನಡನಾಡಿ ಸುದ್ದಿ ಜಾಲ: ಇಂಡಿಯನ್ ಡ್ರಗ್ ರೆಗ್ಯುಲೇಟರ್, ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾ (ಡಿಸಿಸಿಐ)  ಇದೇ ಶುಕ್ರವಾರ ಜೈಡಸ್ ಕ್ಯಾಡಿಲಾಸ್ ಮೂರು ಡೋಸ್ ಉಳ್ಳ ಕೋವಿಡ್-೧೯ ವ್ಯಾಕ್ಸಿನ್ ಅನ್ನು ವಯಸ್ಕರು ಮತ್ತು ೧೨ ವರ್ಷ ಮೇಲ್ಪಟ್ಟ  ಮಕ್ಕಳ ತುರ್ತು ಉಪಯೋಗಕ್ಕಾಗಿ ಬಿಡುಗಡೆ ಮಾಡಿದ್ದಾರೆ.

ಭಾರತೀಯ ಕಂಪನಿಯಿಂದ ತಯಾರಾದ ವ್ಯಾಕ್ಸಿನ್ ಇದಾಗಿದೆ.  ಬಯೋಟೆಕ್ ಜತೆಗೆ ಸೇರಿ ಭಾರತ ಸರ್ಕಾರ ‘ಮಿಷನ್ ಕೋವಿಡ್ ಸುರಕ್ಷಾ’ ಯೋನೆಯಡಿ BIRAC ಅಳವಡಿಸಿತ್ತು.  ಭಾರತೀಯ ಕಂಪನಿಯಿಂದ ತಯಾರಿಸಲ್ಪಟ್ಟ ಮೊಟ್ಟಮೊದಲ ಪ್ಲಾಸ್ಮಿಡ್ ಡಿಎನ್ ಎ ಆದಾರಿತ ಜೈಕೋವಿ-ಡಿ ವ್ಯಾಕ್ಸಿನ್  ಇದಾಗಿದೆ.

ವಿಜ್ಞಾನ ತಂತ್ರಜ್ಞಾನ ಇಲಾಖೆ ಪ್ರೆಸ್ ವರದಿ ಬಿಡುಗಡೆ ಮಾಡಿದ್ದು, ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಗಳಲ್ಲಿ ೨೮,೦೦೦ ಸ್ವಯಂಸೇವಕರು ಮುಂದೆ ಬಂದರು, ಅವರಲ್ಲಿಕೋವಿಡ್ ಸಮಸ್ಯೆಗಳಿಗೆ ೬೬.೬ ರಷ್ಟು ಪ್ರತಿರೋಧ ಕಂಡು ಬಂದಿದೆ ಎಂದು ಹೇಳಿದೆ. ಕೋವಿಡ್ -೧೯ ಗಾಗಿ ಇದೊಂದು ಬೃಹತ್ ವ್ಯಾಕ್ಸಿನ್ ಟ್ರಯಲ್ ಆಗಿತ್ತು.

ಒಂದು,ಎರಡು, ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಅನ್ನು ಡೆಟಾ ಸೇಫ್ಟಿ ಮಾನಿಟರಿಂಗ್ ಬೋರ್ಡ್ (DSMB) ಸ್ವತಂತ್ರವಾಗಿ ಮೇಲ್ವಿಚಾರಣೆ ನಡೆಸಿತ್ತು ಎಂದು ಮಾಧ್ಯಮ ಗಳಿಗೆ ತಿಳಿಸಿದೆ.