ನಿಮ್ಮ ಮನೆ ಮಕ್ಕಳಿಗೂ ಮೊಬೈಲ್ ಹಿಡಿದುಕೊಂಡಿರೋ ಸಮಸ್ಯೆ ಉಂಟಾಗಿದ್ಯಾ?  ಹಾಗಾದ್ರೆ ನೀವು ಎಷ್ಟು ತಲೆಕೆಡಿಸಿಕೊಂಡ್ರೂ ಅಷ್ಟೇ.. ಅಂತ ಸುಮ್ಮನಾಗಿ ಬಿಡಬಾರದು. ಮಕ್ಕಳಿಗೆ ಮೊಬೈಲ್ ಹಿಡಿದುಕೊಳ್ಳೊ ಸಮಸ್ಯೆ ಮನೋರೋಗದಷ್ಟೇ ಕೆಟ್ಟ ಪರಿಣಾಮ ಭೀರತ್ತೆ.   ಹೀಗಾಗಿ ಹಲವಾರು ಮಕ್ಕಳ ನರಮಂಡಲ ವ್ಯವಸ್ಥೆ ಮೇಲೆ ಈಗಾಗಲೇ ಬಹಳ ಕೆಟ್ಟ ಭೀರಿದ್ದು, ವೈದ್ಯರೊಂದಿಗೆ ಚಿಕಿತ್ಸೆ ನಿರಂತರ ತೆಗೆದುಕೊಳ್ಳುವಂತಾಗಿದೆ.

ಸಾಮಾಜಿಕ ಜಾಲತಾಣಗಳಲ್ಲೂ ಮಕ್ಕಳು ಮೊಬೈಲ್ ನೋಡಿ ಉಂಟಾದ ಅಡ್ಡಪರಿಣಾಮಗಳ ವಿಡಿಯೋ ನೀವು ಸಹ ನೋಡಿರ್ತೀರಿ.

ಮೊಟ್ಟಮೊದಲನೆಯದಾಗಿ ನೀವು ಮಾಡಬೇಕಾದ್ದೇನು ಗೊತ್ತೇ?

ಮಕ್ಕಳ ಎದುರು ಪಾಲಕರು ಮೊಬೈಲ್ ಮುಟ್ಟಬೇಡ್ರಿ.. ಹೀಗೆ ಮಾಡಿದ್ರೆ, ಅರ್ಧದಷ್ಟು ಸಮಸ್ಯೆ ಕಡಿಮೆ ಆದಂಗೆ.

ಹೀಗೆ ಮಾಡಲು ಸಾಕಷ್ಟು ಸವಾಲು ಇದ್ದೇ ಇರತ್ತೆ.  ಮೊದಲಿನಂತೆ ಲ್ಯಾಂಡ್ ಲೈನ್ ಗೆ ಮರಳುವ ಯತ್ನ ಮಾಡುವುದು ಒಳ್ಳೇಯದು.

ಕಂಪ್ಯೂಟರ್ ನಲ್ಲಿ ಹೆಚ್ಚು ಅಪರೇಟ್ ಮಾಡುವ ಅಭ್ಯಾಸ ಮಾಡ್ಕೋಬೇಕು.  ಅಂದರೆ ವಾಟ್ಸಪ್, ಟ್ವಿಟ್ಟರ್, ಕ್ಲಬ್ ಹೌಸ್, ಫೇಸ್ ಭುಕ್ ಇವೆಲ್ಲಾ ಕಂಪ್ಯೂಟರ್ ನಲ್ಲೇ ನೋಡಬಹುದು.

ಇನ್ನ ಕೆಲವು ಸಲಹೆಗಳು ಇಂತಿವೆ.

ಬೋರು, ಹೊಸ ಹೊಸ ವಿಡಿಯೋ ಗೇಮ್ಸ್ ಆಡುವುದು ಥ್ರಿಲ್. ರೈಮ್ಸ್ ಇಲ್ಲದೆ ನಿದ್ದೆ ಕೂಡ ಬರೋದಿಲ್ಲ. ಎಳೆ ವಯಸ್ಸಿನಲ್ಲಿಯೇ ಈ ರೀತಿ ಮೊಬೈಲ್ ಅಡಿಕ್ಟ್ ಆದರೆ ಮುಂದೆ ಮೊಬೈಲ್ ಹುಚ್ಚು ಬಿಡಿಸುವುದು ಕಷ್ಟ ಆಗಬಹುದು. ಈಗಲೇ ಈ ಕೆಲಸಗಳನ್ನು ಮಾಡಿ..

ಮೊಬೈಲ್ ಕೊಡಲು ಸಮಯ ನಿಗದಿ ಮಾಡಿ.

ಹೊರಗಡೆ ಆಟ ಆಡಲು ಹೆಚ್ಚು ಪ್ರೋತ್ಸಾಹ ನೀಡಿ.

ಅಕ್ಕಪಕ್ಕದ ಮನೆಯ ಮಕ್ಕಳನ್ನು ಪರಿಚಯ ಮಾಡಿಕೊಳ್ಳಿ.

ಮಕ್ಕಳ ಜೊತೆಗೆ ನೀವು ಆಟವಾಡಿ.

ಒಂಟಿಯಾಗಿ ಮೊಬೈಲ್ ಬಳಸದಂತೆ ನೋಡಿಕೊಳ್ಳಿ.
ಅವರಿಗೆ ಮೊಬೈಲ್ ಬಿಟ್ಟು ಯಾವ ವಿಷಯ ಇಷ್ಟ ಅನ್ನೋದನ್ನು ಅರಿತು ಅಲ್ಲಿ ಹೆಚ್ಚು ಸಮಯ ವ್ಯಯಿಸಿ.
ಜೊತೆಯಲ್ಲೇ ಕುಳಿತು ಹೋಂ ವರ್ಕ್ ಮಾಡಿಸಿ. ಮೊಬೈಲ್ ಕೊಟ್ಟು ಎದ್ದು ಹೋಗಬೇಡಿ.
ಫೋನ್‌ನಲ್ಲಿರುವ ವೈಲೆಂಟ್ ಗೇಮ್‌ಗಳನ್ನು ಡಿಲೀಟ್ ಮಾಡಿ.
ಫ್ಯಾಮಿಲಿ ಕೂಡ ಕಾರ್ಟೂನ್ ಸಿನಿಮಾಗಳನ್ನು ಒಟ್ಟಿಗೇ ನೋಡಿ.

ರಂಗೋಲಿ ಹಾಕೋದು, ಪೇಂಟಿಂಗ್ ಮಾಡೋದು ಇವೆಲ್ಲಾ ಮಕ್ಕಳಿಗೆ ಇಷ್ಟ.  ಜೊತೆಗೆ ಅಳಿಗುಳಿ ಮನೆ ಆಟ, ಕೇರಂ, ಚೆಸ್ ಮೊದಲಾದವನ್ನ ಮನೇಲೆ ಆಡಬಹುದು.  ಪಾಲಕರು ಮಕ್ಕಳ ಜೊತೆಗೆ ಆಡಿ, ಅಕ್ಕ ತಂಗಿ, ಅಣ್ಣ ತಮ್ಮ ಎಲ್ಲರ ಜೊತೆಗೆ ಪರಸ್ಪರ ಆಟವಾಡಲು ಅವಕಾಶ ಮಾಡಿಕೊಡಿ