ಬೆಂಗಳೂರು: ಕೃಷಿ ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ (ನವೆಂಬರ್ 11- ನವೆಂಬರ್ 14) ಆಯೋಜಿಸಿರುವ ಕೃಷಿ ಮೇಳವನ್ನು ಇದೀಗ ಸಾರ್ವಜನಿಕರು ತಮ್ಮ ಅಂಗೈನಲ್ಲೇ ವೀಕ್ಷಿಸಬಹುದಾಗಿದೆ. ಬೆಂಗಳೂರಿನ ಗಾಂದಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ನಡೆಯುತ್ತಿರುವ ಮೇಳದಲ್ಲಿ 500 ಕ್ಕೂ ಹೆಚ್ಚು ಕೃಷಿ ಸಂಬಂಧಿತ ಮಳಿಗೆಗಳಿಗಾಗಿ ಸಿದ್ಧತೆ ನಡೆಸಲಾಗಿದ್ದು ಇಂದು ಬೆಳಗ್ಗೆ ಉದ್ಘಾಟನಾ ಕಾರ್ಯಕ್ರಮ ನಡೆದಿದೆ.

ರೈತರು ಮತ್ತು ಸಾರ್ವಜನಿಕರು ಕೃಷಿ ಮೇಳ ವೀಕ್ಷಿಸಲು ಯೂಟ್ಯೂಬ್ ಲೈವ್ ಪ್ರಸಾರ ಮಾಡಲಾಗುತ್ತಿದೆ. https://www.youtube.com/watch?v=DmyNdEwZjcE  ಈ ಲಿಂಕ್ ಮೂಲಕ ತಮ್ಮ ಮನೆಯಲ್ಲೇ ಕುಳಿತು ಕೃಷಿ ಮೇಳವನ್ನು ವೀಕ್ಷಿಸಬಹುದಾಗಿದೆ. ಕೃಷಿ ಮೇಳದಲ್ಲಿ ಕೃಷಿ ವಿಶ್ವವಿದ್ಯಾನಿಲಯ , ಬೆಂಗಳೂರು ಹೊರತಂದಿರುವ ನೂತನ 10 ತಳಿಗಳು ಮತ್ತು 28 ಕೃಷಿ ತಂತ್ರಜ್ಞಾನಗಳನ್ನು ಬಿಡುಗಡೆಗೊಳಿಸಲಾಗುತ್ತದೆ . ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ ರಾಜ್ಯ , ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪ್ರಶಸ್ತಿಗಳನ್ನು ನೀಡಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ.

ಕರ್ನಾಟಕ ರಾಜ್ಯದ ಯಾವುದೇ ರೈತರು ಇದರಲ್ಲಿ ಭಾಗವಹಿಸಬಹುದು.  ಕೃಷಿಮೇಳದಲ್ಲಿ ಹಲವು ಕೃಷಿ ವಿಜ್ಞಾನಿಗಳು ಭಾಗವಹಿಸಲಿದ್ದು ರೈತರು ತಮ್ಮ ಸಮಸ್ಯೆಗಳನ್ನು ಅಲ್ಲಿಯ ಪರಿಹಾರ ಮಾಡಿಕೊಳ್ಳಬಹುದು.  ವಿವಿಧ ತಂತ್ರಜ್ಞಾನಗಳು ಅಥವಾ ಉಪಕರಣಗಳ ಬಗ್ಗೆ ರೈತರಿಗೆ ನೇರವಾಗಿ ಮಾಹಿತಿ ತಿಳಿದಿರುವುದಿಲ್ಲ. ಅಂತಹ ಮಾಹಿತಿಯನ್ನು ಸಹ ರೈತರು ಪಡೆಯಬಹುದಾಗಿದೆ.

ಇದನ್ನೂ ಓದಿ: ಮರ ಆಧಾರಿತ ಕೃಷಿಗೆ ಉತ್ತೇಜನ