ಚಿಕ್ಕಮಗಳೂರು : ೨೦೧೯ರಲ್ಲಿ ಮಳೆಯ ಆರ್ಭಟಕ್ಕೆ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರ ಮತ್ತು ಅಧಿಕಾರಿಗಳು ಡೋಂಕೇರ್ ಅಂದಿರೋದೆ ಈ ಪ್ರತಿಭಟನೆಗೆ  ಕಾರಣವಾಗಿದೆ.

ಕಳೆ ವರ್ಷ ಇದೇ ತಿಂಗಳ ೯ರಂದು ಮಲೆನಾಡಿನ ಭಾಗದಲ್ಲಿ ೨೨ ಇಂಚು ಮಳೆ ಸುರಿದಿತ್ತು. ಇದೇ ಸಮಯದಲ್ಲಿ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದಲ್ಲಿ ಆ ಮನೆ ಸಂಪೂರ್ಣ ನೆಲಸಮವಾಗಿದ್ದಿತು.  ಈ ಅವಘಡ ಸಂಭವಿಸಿದ ಸ್ಥಳಕ್ಕೆ ಬಿಎಸ್ ವೈ. ಅಶೋಕ್, ಮಾದುಸ್ವಾಮಿ, ಸಿ.ಟಿ. ರವಿ,ಶೋಬಾ ಕರಂದ್ಲಾಜೆ ಸೇರಿದಂತೆ ಸರ್ಕಾರಿ ಅಧಿಕಾರಿಗಳು ಸಹ ಬೇಟ ನೀಡಿದ್ದರೂ ಸಹ ಇಲ್ಲಿಯವರೆಗೆ ಫಲಿತಾಂಶ ಮಾತ್ರ ಶೂನ್ಯ ಎಂದು ನಿರಾಶ್ರಿತರು ದೂರಿದ್ದಾರೆ.

ಮನೆ-ಮಠ ಕಳೆದುಕೊಂಡ ನಿರಾಶ್ರಿತರು ನಿರಂತರಹೋರಾಟ ಮಾಡ್ತಾನೇ ಇದ್ದಾರೆ, ಪುನರ್ವಸತಿಯ ಆಶೆ ಈಡೇರದ ಕಾರಣ ಮೂಡಿಗೆರೆ ತಾಲೂಕಿನ ಜಾವಳ ನಾಡ ಕಛೇರಿ ಮುಂಭಾಗದಲ್ಲಿ ಸರ್ಕಾರದ ಅಸಡ್ಡೆಯ ವಿರುದ್ಧ ಕಪ್ಪುಪಟ್ಟಿ ಧರಿಸಿ ಮೌನಪ್ರತಿಭಟನೆ ನಡೆಸಿದ್ದಾರೆ.  ಇನ್ನಾದರೂ ಇವರ ಅಳಲು ನೀಗಿಸಲು ನೂತನ ಸರ್ಕಾರ ಸ್ಪಂಧಿಸುವುದೇ  ಕಾದು ನೋಡಬೇಕು.