ಬಯಲುಸೀಮೆಯಲ್ಲಿ ಅಲ್ಲಲ್ಲಿ ಕಂಡುಬರುವ ಬೇಲದ ಹಣ್ಣುಗಳು ಪಶುಪಾಲಕರಿಗೆ ಅಚ್ಚುಮೆಚ್ಚು. ಬೇಲವನ್ನು ವಾಣಿಜ್ಯ ಬೆಳೆಯಾಗಿ ಬೆಳೆಸುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿದ್ದರೂ ಪೂರ್ಣಪ್ರಮಾನದಲ್ಲಿ ಬೇಲವನ್ನೇ ಪ್ರಧಾನ ಬೆಳೆಯಾಗಿ ಬೆಳೆದವರು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಹೀಗಾಗಿಯೇ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಹುಲಿಕೆರೆ ಗ್ರಾಮದ ರೈತ ವಿಶ್ವೇಶ್ವರ ಸಜ್ಜನ ಅವರ ಪ್ರಯೋಗ ಗಮನ ಸೆಳೆಯುತ್ತದೆ. ಇವರ ಸಂದರ್ಶನ ಆಧರಿತ ವಿಡಿಯೊವನ್ನು ರೈತಾಪಿ ಜಗತ್ತು ಯುಟ್ಯೂಬ್ ಚಾನೆಲ್ ಪಬ್ಲಿಷ್ ಮಾಡಿದೆ.

ಅಪಾರ ಔಷಧೀಯ ಗುಣದ ಬೇಲದ ಮರ ಮಳೆಯಾಶ್ರಿತ ಸವುಳು ಭೂಮಿಗೆ ಹೇಳಿ ಮಾಡಿಸಿದ ಬೆಳೆ. ಇದಕ್ಕೆ ಅತಿ ಕಡಿಮೆ ನೀರು ಸಾಕು. ಕಾಳಜಿ ಮತ್ತು ಖರ್ಚುಗಳೂ ಅಷ್ಟಕ್ಕಷ್ಟೇ. ಔಷಧಿ, ಗೊಬ್ಬರ, ಉಳುಮೆ ಏನೂ ಬೇಕಾಗಿಲ್ಲ ಎಂದು ವಿಡಿಯೊದ ಒಕ್ಕಣೆಯಲ್ಲಿ ಹೇಳಲಾಗಿದೆ.

ಮರಗಳು ಒಂದು ಹಂತಕ್ಕೆ ಹೋದ ಮೇಲೆ ನೀರು ಕೂಡ ಬೇಡ. ಮಳೆ ನೀರೇ ಸಾಕಾಗುತ್ತದೆ. ಅಷ್ಟರ ಮಟ್ಟಿಗೆ ಬೇಲ ಒಣಭೂಮಿಯ ಬೆಳೆ. ನಾಟಿ ಮಾಡಿದ ಆರೇಳು ವರ್ಷಕ್ಕೆ ಫಲ ಪಡೆಯಬಹುದು. ಸರಿಯಾಗಿ ವಿನ್ಯಾಸ ಮಾಡಿಕೊಂಡು ಹಾಕಿದರೆ ಒಂದು ಎಕರೆಗೆ ಬರೀ ಹಣ್ಣನ್ನು ಸಗಟು ಮಾರಾಟ ಮಾಡಿ 2ರಿಂದ 3ಲಕ್ಷ ಆದಾಯ ಪಡೆಯಬಹುದು.

ಪ್ರಗತಿಪರ ರೈತ ವಿಶ್ವೇಶ್ವರ ಸಜ್ಜನ್ ಅವರು ಮಳೆಯಾಶ್ರಿತ ಬೇಲದ ಬೇಸಾಯ ಮತ್ತು ಮೌಲ್ಯವರ್ಧನೆಯಲ್ಲಿ ಸಾಕಷ್ಟು ಪ್ರಖ್ಯಾತರಾಗಿದ್ದಾರೆ. ಬೇಲದ ಬೇಸಾಯ ಮತ್ತು ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ವಿಚಾರವಾಗಿ ಅವರು ವಿಡಿಯೊದಲ್ಲಿ ಹಲವು ಮಾಹಿತಿ ಹಂಚಿಕೊಂಡಿದ್ದಾರೆ.

ಬೇಲದ ಹಣ್ಣಿನ ಬೇಸಾಯದ ಮಾಹಿತಿಗಾಗಿ ವಿಡಿಯೊ ನೋಡಿ. ವಿಶ್ವೇಶ್ವರ ಸಜ್ಜನ್‌ರ ಸಂಪರ್ಕ ಸಂಖ್ಯೆ: 9902661597, 9845666570

Elephant Apple Wood apple Belada Hannu Cultivation Processing Ideas Progressive Farmer

ಇದನ್ನೂ ಓದಿ: ಅಧಿಕ ಇಳುವರಿಗೆ ನೆಲಗಡಲೆ ಬೆಳೆಯಲ್ಲಿ ಲಘು ಪೋಷಕಾಂಶಗಳ ಬಳಕೆ
ಇದನ್ನೂ ಓದಿ: ಮರ ಆಧಾರಿತ ಕೃಷಿಗೆ ಉತ್ತೇಜನ