ನವದೆಹಲಿ:  ಮುಂಬೈ ಸೈಬರ್‌ ಅಪರಾಧ ವಿಭಾಗದ ಪೋಲೀಸರು ಬುಧವಾರ ಹೈದರಾಬಾದ್‌ನ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು ಭಾರತೀಯ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿಯವರ ಮಗಳಿಗೆ ಆನ್‌ಲೈನ್‌ ಮೂಲಕ ಅತ್ಯಾಚಾರದ ಬೆದರಿಕೆ ಹಾಕಿರುವ ಆರೋಪವನ್ನು ಹೊರಿಸಲಾಗಿದೆ.

ಸದ್ಯ ದುಬೈನಲ್ಲಿ ನಡೆಯುತ್ತಿರುವ T20 ವಿಶ್ವಕಪ್‌ ಪಂದ್ಯಾವಳಿಯ ಆರಂಭಿಕ ಸುತ್ತಿನಲ್ಲೇ ಭಾರತೀಯ ತಂಡ ಪಾಕೀಸ್ತಾನದ ವಿರುದ್ಧ ಸೋತ ನಂತರ ಅನೇಕ ಕ್ರಿಕೆಟ್‌ ಅಭಿಮಾನಿಗಳು ಭಾರತ ತಂಡದ ವೇಗಿ ಮೊಹಮ್ಮದ್ ಶಮಿಯವರ ಮೇಲೆ ಧರ್ಮಾಧರಿತ ಟೀಕಾಪ್ರಹಾರವನ್ನೇ ನಡೆಸಿದ್ದರು.  ಇದನ್ನು ಕೊಹ್ಲಿ ತೀವ್ರವಾಗಿ ಖಂಡಿಸಿದ್ದರಲ್ಲದೇ ಮೊಹಮ್ಮದ್‌ ಶಮಿಯವರ ಬೆಂಬಲಕ್ಕೆ ನಿಂತಿದ್ದರು.  ಸಾಮಾಜಿಕ ಜಾಲತಾಣಗಳಲ್ಲಿ ಉತ್ತರಿಸಿದ್ದ ಕೊಹ್ಲಿ ಯಾರನ್ನಾದರೂ ಅವರ ಧರ್ಮದ ಆಧಾರದ ಮೇಲೆ ನಿಂದಿಸುವುದು ಅತ್ಯಂತ ನಿರಾಶಾದಾಯಕ.  ಒಬ್ಬರ ಧಾರ್ಮಿಕ ನಂಬಿಕೆಗಳು ವೈಯಕ್ತಿಕ ಹಾಗೂ ಪವಿತ್ರವಾಗಿದ್ದು ಧರ್ಮದ ಕಾರಣಕ್ಕಾಗಿ ಯಾರೊಬ್ಬರನ್ನೂ ಭೇದಭಾವದ ದೃಷ್ಟಿಯಿಂದ ನೋಡುವುದನ್ನು ನಾನು ಊಹಿಸಲೂ ಸಾಧ್ಯವಿಲ್ಲವೆಂದು ಉತ್ತರಿಸಿದ್ದರು.

ಇದರಿಂದ ಕ್ರೋಧಿತನಾದ 23 ವರ್ಷದ ವಯಸ್ಸಿನ ಸಾಫ್ಟ್‌ವೇರ್ ಇಂಜಿನಿಯರ್ ರಾಮ್‌ನಾಗೇಶ್ ಅಲಿಬಾತಿನಿ ಎನ್ನುವ ಹೈದರಾಬಾದ್ ಮೂಲದ ವ್ಯಕ್ತಿಯು ವಿರಾಟ್‌ ಕೊಹ್ಲಿಯವರ ಪುತ್ರಿ ವಾಮಿಕಾ ಕೊಹ್ಲಿ ಮೇಲೆ ಆನ್‌ಲೈನ್ ಮುಖಾಂತರ ಅತ್ಯಾಚಾರದ ಬೆದರಿಕೆಗಳನ್ನು ಹಾಕಿದ್ದಾನೆ ಎನ್ನಲಾಗಿದೆ.

ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದ್ದ ದೆಹಲಿ ಮಹಿಳಾ ಆಯೋಗವು ದೆಹಲಿಯ ಪೋಲೀಸ್ ಉಪ-ಆಯುಕ್ತರಿಗೆ ತಕ್ಷಣವೇ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿ ಅದರ ಪ್ರತಿಯನ್ನು ಸಲ್ಲಿಸಬೇಕೆಂದು ಆದೇಶಿಸಿತ್ತಲ್ಲದೇ ಶೀಘ್ರವಾಗಿ ಆರೋಪಿಯನ್ನು ಗುರುತಿಸಿ ಬಂಧಿಸುವುದಲ್ಲದೇ ಕ್ರಮ ಕೈಗೊಂಡ ವರದಿಯನ್ನು ನವೆಂಬರ್ 8ನೇ ದಿನಾಂಕದೊಳಗೆ ಸಲ್ಲಿಸಬೇಕೆಂದು ನೋಟೀಸ್ ನೀಡಿ ಆದೇಶಿಸಿತ್ತು.  ಇದೊಂದು ಅತ್ಯಂತ ಗಂಭೀರ ವಿಷಯವಾಗಿದೆ ಎಂದು ಪರಿಗಣಿಸಿದ್ದ ಆಯೋಗವು ತ್ವರಿತ ಕಾರ್ಯಾಚರಣೆಗೆ ಆದೇಶಿಸಿತ್ತು.

Mumbai Cyber Crime Branch Arrests a man from Hyderabad for allegedly sending online rape threats to Virat Kohli’s 9-month-old daughter

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್​ಗೆ ಮೊದಲು ಚಿಕಿತ್ಸೆ ನೀಡಿದ್ದ ವೈದ್ ಡಾ ರಮಣ್​ರಾವ್​ಗೆ ಪೊಲೀಸ್ ಭದ್ರತೆ

ಇದನ್ನೂ ಓದಿ: Naxal leader B G Krishnamurthy: ಕೇರಳದಲ್ಲಿ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ- ಸಾವಿತ್ರಿ‌ ಬಂಧನ