ಮುಂಬೈ: ದಾಂಪತ್ಯ ಜೀವನದಲ್ಲಿ ಒತ್ತಾಯದ ಲೈಂಗಿಕ ಸಂಪರ್ಕ ಬಯಸಿದರೂ ಸಹ ಅದನ್ನು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಬಿಲಾಸ್ ಪುರ್ (ಛತ್ತಿಸ್ ಘಡ್ ) ಹೈಕೋರ್ಟು ತೀರ್ಪು ನೀಡಿತ್ತು.

ಪತ್ನಿಯೇ ತನ್ನ ಗಂಡನ ಮೇಲೆ ಆತ ನನ್ನ ಒಪ್ಪಿಗೆ ಇಲ್ಲದೆ ಸೆಕ್ಸ್ ನಡೆಸಿದ್ದು, ರೇಪ್ ಮಾಡಿದ್ದಾನೆ ಎಂದು ದೂರು ದಾಖಲಿದ್ದಳು. ಇದರ ಬಗ್ಗೆ ಎಲ್ಲೆಡೆ ಬಿಸಿ ಬಿಸಿ ಚರ್ಚೆ ನಡೆದಿದ್ದು, ಬಾಲಿವುಡ್ ನಾಯಕ ನಟಿ ತಾಪ್ಸಿ ಪನ್ನು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ಅವರು ’ಇದೊಂದು ಕೇಳೋದು ಬಾಕಿ ಇತ್ತು’ ಅಂತ ಗರಂ ಆಗೇ ಹೇಳಿಕೊಂಡಿದ್ದಾರೆ.