ಕನ್ನಡನಾಡಿ ಸುದ್ದಿ ಜಾಲ: ಸೊಳ್ಳೆಯ ದಿನ ಅಂದರೆ ನಂಬಲೇ ಬೇಕು ಕಣ್ರಿ.  ಹೀಗೆ ಸುಮಾರು ನೂರಾ ಇಪ್ಪತ್ನಾಲ್ಕು ವರ್ಷಗಳ ಹಿಂದೆ ಅನಾಫಿಲಿಸ್ ಹೆಣ್ಣು ಸೊಳ್ಳೆಯಿಂದನೇ ಮಲೇರಿಯಾ ಹಬ್ತಾ ಇದೆ ಎನ್ನೋದನ್ನ ಬರಿಟಿಷ್ ವೈದ್ಯ ಸರ್ ರೊನಾಲ್ಡ್‌ ರೋಸ್ ಪತ್ತೆ ಹಚ್ಚಿದ ಕಾರಣ ಇದು ಸಾದ್ಯವಾಯ್ತು ನೋಡಿ.

ಸೊಳ್ಳೆ ಮತ್ತು ಮಲೇರಿಯಾ ಎರಡಕ್ಕೂ ಗಳಸ್ಥ ಕಂಠಸ್ಥ ಅಂದವನೇ ಈ ವೈದ್ಯ ಸಂಶೋದಕ, ಇದರಿಂದಲೇ ಮಲೇರಿಯಾ ಪತ್ತೆ ಹಚ್ಚುವಿಕೆ, ನಿಯಂತ್ರಣ- ಪತ್ತೆಹಚ್ಚುವಿಕೆ ಅಂಶಗಳು, ಬೆಳಕಿಗೆ ಬರಲು ಕಾರಣವಾಯಿತು ಎಂದರೆ ಅಚ್ಚರಿ ಪಡಬೇಕಿಲ್ಲ. ಅದೇ ಸಂಶೋದನೆಯ ಕಾರಣಕ್ಕೆ ಆತನಿಗೆ ಔಷದಿ ಕ್ಷೇತ್ರದ ನೊಬೆಲ್ ಬಂದಿದ್ದು ಸಹ ನಿಜಾನೇ.  ಅದೇ ನೆನಪಿಗೇನೆ ಈ ದಿವಸ ಆಚರಣೆ.  ಸೊಳ್ಳೆಯ ದಿನ ಸಾರೋದು ಈ ಔಷದಿಯ ಮಹತ್ವವನ್ನೇ.

ಮಲೇರಿಯಾ ಅಂದ್ರೆ mal -ಕೆಟ್ಟ area – ಪ್ರದೇಶ ಅಂತಂತ. ಇಟಾಲಿಯನ್  ಭಾಷೆಯಲ್ಲಿ ಹೀಗೆ ಸೂಚಿಸತ್ತೆ. ಕೆಲವು ಕಡೆ ಮಲೇರಿಯಾ ಅನ್ನೋದನ್ನ ಘಟ್ಟದ ಜ್ವರ ಅಂತ ಕರಿತಾ ಇದ್ರು.  ಚೋಮನ ದುಡಿ ಕಾದಂಬರಿಯಲ್ಲಿ ಚೋಮ ಸಹ ಘಟ್ಟದ ಜ್ವರದ ಬಗ್ಗೆ ಮಾತಾಡಿದ್ದಾನೆ. ಮಲೇರಿಯಾ ಅಂದ್ರೆ ಕಾಡುಜ್ವರ, ಕೆಟ್ಟ ಗಾಳಿ ಜ್ವರ ಅಂತೆಲ್ಲಾ ಇದೆಯಪ್ಪ.

೨೦೨೧ರ ಸೊಳ್ಳೆ ದಿವಸದ ಧ್ಯೇಯ ವಾಕ್ಯ ಏನೆಂದರೆ  ಮಲೇರಿಯಾ ಇಲ್ಲವಾಗಿಸೋದು, ಹಾಗೆ ಮಲೇರಿಯಾ ಇಲ್ಲವಾಗಿಸೋ ನಿಟ್ಡಿನಲ್ಲಿ ಕೆಲಸ ಮಾಡುವವರನ್ನ ಷಹಬ್ಬಾಷ್ ಸಹ ಹೇಳೋ ದಿವಸ ಕೂಡಾ. ಹೆಣ್ಣು ಸೊಳ್ಳೆ ಒಂದು ತಿಂಗಳ ಬದುಕಿದ್ರೆ, ಗಂಡು ಒಂದು ವಾರ ಬದುಕತ್ತೆ.  ಆದ್ರೂ ಎಷ್ಟೋಂದು ಶಬ್ಧ ಮಾಡಿ ಹೋಗ್ತವಲ್ವಾ?

ಸೊಳ್ಳೆ ತರ ಸವುಂಡ್ ಮಾಡದೆ ಇದ್ರು, ಸೊಳ್ಳೆ ಬಾರದ ಹಾಗೆ ಪರಿಸರ ಸ್ವಚ್ಛತೆ ಕಾಪಾಡ್ತಾ ಇರೋದು ಎಲ್ಲರಿಗೂ ಸೇಫ್ ಅಲ್ವೆನ್ರಿ.