ಚಿಕ್ಕಮಗಳೂರು: ಬಾಳೆಹೊನ್ನೂರು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಹುಯಿಗೆರೆ ಗ್ರಾಮದ ಬರುವ ಹುಯಿಗೆರೆ ಗ್ರಾಮದ ಮಾವಿನ ಕಟ್ಟೆ ಸರ್ವೆ ನಂ. ೮೮, ಕಾಲೊನಿಯಲ್ಲಿ ಅಕ್ರಮ ಶ್ರೀಗಂಧ ಕೆತ್ತುತ್ತಿದ್ದಾರೆ ಎಂಬಮಾಹಿತಾಧಾರದ ಮೇಲೆ ಧಾಳಿ ನಡೆಸಿದಾಗ, ಅರಣ್ಯ ಅಧಿಕಾರಿಗಳಿಗೆ ಅಕ್ರಮ ಶ್ರೀಗಂಧ ದಾಸ್ತಾನು ಲಭಿಸಿದೆ.

ಬಾಳೆಹಿನ್ನೂರು ಅರಣ್ಯಾಧಿಕಾರಿ ನಿರಂಜನ್ ನೇತೃತ್ವದಲ್ಲಿ ಧಾಳಿ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬಂದಿಸಲಾಗಿದೆ.

ಆಗಸ್ಟ್‌ ೨೧ ರಂದು ಬೆಳಿಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಸ್ಪಷ್ಟಪಡಿಸಿದ್ದಾರೆ. ಮಾವಿನ ಕಟ್ಟೆ ಗ್ರಾಮದ ಗಣೇಶ, ಮೇಗುಂದ ಹೋಬಳಿ ಹೆಗ್ಗಾರು ಕುಡಿಗೆ ಗ್ರಾಮದ ಉಮೇಶ ಬಂಧಿತರಾಗಿದ್ದು ಮತ್ತೊಬ್ಬ ಆರೋಪಿ ಸಂದೀಪ್ ತಪ್ಪಿಸಿಕೊಂಡಿದ್ದಾರೆ.

ಕಾರ್ಯಾಚರಣೆ ವೇಳೆ ೩೧ (ಮೂವತ್ತೊಂದು) ಕೆಜಿ ಗಂಧದ ತುಂಡು, ಕೃತ್ಯಕ್ಕೆ ಬಳಸಿದ ಹತಾರಗಳಾದ ಕೊಡಲಿ, ಕತ್ತಿ ವಶಪಡಿಸಿಕೊಂಡಿದ್ದಾರೆ.  ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಡಿಸಲಾಗಿದೆ.

ಕಾರ್ಯಾಚರಣೆಯ ರುವಾರಿ ಉಪವಲಯ ಅರಣ್ಯಾಧಿಕಾರಿಗಳಾದ ಪರಶುರಾಮ್, ಅರಣ್ಯ ರಕ್ಷಕ ಅಭಿಲಾಶ್,ಶಿವಶಂಕರ್ ಪ್ರಭು, ಅರಣ್ಯ ವೀಕ್ಷಕ ಜಯರಾಮ್ ವಾಹನ ಚಾಲಕ ಪ್ರಕಾಶ್ ಕ್ರಿಯಾಶೀಲರಾಗಿ ಭಾಗವಹಿಸಿದ್ದು ಖಚಿತ ಮಾಹಿತಿ ಮೇರೆಗೆ ದಾಳಿ  ನಡೆಸಿದ್ದರು.