ಕನ್ನಡನಾಡಿ ಸುದ್ದಿಜಾಲ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಉದ್ಯೋಗಾವಕಾಶಗಳು ಕೈಬೀಸಿ ಕರೆಯುತ್ತಿದ್ದು, ಪ್ರೊಬೆಷನರಿ ಅಧಿಕಾರಿಗಳ (POs) ಹುದ್ದೆಗೆ ನೇಮಕಾತಿ (೨೦೨೧) ಮಾಡಿಕೊಳ್ಳುವ ಸಲುವಾಗಿ ಭಾರತದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ೨೦೫೬ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ.

ನೇಮಕಾತಿ ಪ್ರಕ್ರಿಯೆಯು ೩ ಹಂತದಲ್ಲಿ ನಡೆಯುತ್ತದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಅಭ್ಯರ್ಥಿಗಳು ಬ್ಯಾಂಕ್ನ ವೆಬ್ಸೈಟ್ಗೆ ಭೇಟಿ ನೀಡಬೇಕು ಮತ್ತು ನೇಮಕಾತಿ ಜಾಹೀರಾತನ್ನು ಒಮ್ಮೆ ಸಂಪೂರ್ಣ ಪರಿಶೀಲಿಸಬೇಕು. ಆ ನಿರ್ದಿಷ್ಟ ದಿನಾಂಕಕ್ಕೆ ಎಲ್ಲ ಅರ್ಹತಾ ಮಾನದಂಡಗಳನ್ನು ಪೂರ್ತಿ ಮಾಡುತ್ತಾರೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳುವುದಕ್ಕೆ ಇದು ಅತ್ಯಗತ್ಯ.

ಅರ್ಜಿ ಸಲ್ಲಿಸುವುದು ಹೇಗೆ?
೧. ಅಕ್ಟೋಬರ್ ೫ನೇ ತಾರೀಕಿನಿಂದ ೨೫ನೇ ತಾರೀಕಿನವರೆಗೆ ಆನ್ಲೈನ್ನಲ್ಲಿ ಮಾತ್ರ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದಕ್ಕೆ ಸಾಧ್ಯ. ಬೇರೆ ಯಾವುದೇ ವಿಧಾನದಲ್ಲಿ ಅರ್ಜಿಯನ್ನು ಸ್ವೀಕರಿಸುವುದಿಲ್ಲ.
೨. ಬ್ಯಾಂಕ್ನ “Career” ವೆಬ್ಸೈಟ್ನ ಮೂಲಕವಾಗಿ – https://bank.sbi/careers ಅಥವಾ https://www.sbi.co.in/careers – ನೋಂದಣಿ ಮಾಡಿಕೊಳ್ಳಬೇಕು.
೩. ನೋಂದಣಿಯ ನಂತರ ಅಗತ್ಯ ಪ್ರಮಾಣದ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕವಾಗಿ ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ಇಂಟರ್ನೆಟ್ ಬ್ಯಾಂಕಿಂಗ್ ಮೂಲಕವಾಗಿ ಪಾವತಿಸಬಹುದು

ಶೈಕ್ಷಣಿಕ ಅರ್ಹತೆ ಏನು?
೧. ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಪದವಿಗೆ ಸಮಾನವಾದ ಶಿಕ್ಷಣ ಪಡೆದಿರಬೇಕು.
೨.  ಪದವಿ ಅಂತಿಮ ವರ್ಷದ/ಸೆಮಿಸ್ಟರ್ನಲ್ಲಿ ಇರುವವರು ಸಹ ಅರ್ಜಿ ಸಲ್ಲಿಸಬಹುದು. ಆದರೆ ಷರತ್ತುಗಳು ಅನ್ವಯಿಸುತ್ತದೆ. ಸಂದರ್ಶನಕ್ಕೆ ಕರೆಯುವ ಸಮಯದಲ್ಲಿ ಪದವಿ ಪರೀಕ್ಷೆ ಪೂರ್ಣಗೊಳಿಸಿದ ಪುರಾವೆಯನ್ನು ಡಿಸೆಂಬರ್ ೩೧, ೨೦೨೧ರಂದು ಅಥವಾ ಅದಕ್ಕೂ ಮುನ್ನ ಸಲ್ಲಿಕೆ ಮಾಡಬೇಕು.
೩. ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ (IDD) ಪದವಿ ಪ್ರಮಾಣಪತ್ರ ಇರುವವರು ಐಡಿಡಿ ಉತ್ತೀರ್ಣ ದಿನಾಂಕವು ಡಿಸೆಂಬರ್ ೩೧, ೨೦೨೧ರಂದು ಅಥವಾ ಅದಕ್ಕಿಂತ ಮುಂಚೆ ಸಲ್ಲಿಕೆ ಮಾಡಬೇಕು.
೪. ಚಾರ್ಟರ್ಡ್ ಅಕೌಂಟೆಂಟ್ ಅಥವಾ ಕಾಸ್ಟ್ ಅಕೌಂಟೆಂಟ್ ಶೈಕ್ಷಣಿಕ ಅರ್ಹತೆ ಇರುವವರು ಸಹ ಅರ್ಜಿ ಸಲ್ಲಿಸಬಹುದು.

ಆನ್ಲೈನ್ ನೋಂದಣಿ: ಅಕ್ಟೋಬರ್ ೫ರಿಂದ ಅಕ್ಟೋಬರ್ ೨೫
ಹಂತ ೧: ಆನ್ಲೈನ್ ಪ್ರಾಥಮಿಕ ಪರೀಕ್ಷೆ- ನವೆಂಬರ್/ಡಿಸೆಂಬರ್ ೨೦೨೧
ಹಂತ ೨: ಆನ್ಲೈನ್ ಮುಖ್ಯ ಪರೀಕ್ಷೆ- ಡಿಸೆಂಬರ್ ೨೦೨೧
ಹಂತ ೩: ಸಂದರ್ಶನ (ಅಥವಾ ಸಂದರ್ಶನ ಮತ್ತು ಗುಂಪು ಪರೀಕ್ಷೆ)- ೨೦೨೨ರ ಫೆಬ್ರವರಿ ಎರಡು/ಮೂರನೇ ವಾರ

ವಯೋಮಿತಿ ಏನು?
೧.೪.೨೦೨೧ಕ್ಕೆ ಅನ್ವಯ ಆಗುವಂತೆ, ೨೧ ವರ್ಷಕ್ಕೆ ಕಡಿಮೆ ಇಲ್ಲದಂತೆ ಮತ್ತು ಅದೇ ದಿನಕ್ಕೆ ೩೦ ವರ್ಷ ಮೇಲಿರಬಾರದು. ಅಭ್ಯರ್ಥಿಗಳು ೦೨.೦೪.೧೯೯೧, ೧ರಿಂದ ೧.೦೪.೨೦೦೦ನೇ ಇಸವಿ ಮಧ್ಯೆ ಹುಟ್ಟಿರಬೇಕು.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ವಯೋಮಿತಿಯಲ್ಲಿ ೫ ವರ್ಷದ ವಿನಾಯಿತಿ ಇದೆ. ಇತರ ಹಿಂದುಳಿದ ವರ್ಗ (ಕೆನೆಪದರ ಹೊರತಾಗಿ) ೩ವರ್ಷ, (PWD)- PWD (SC/ST) ದಿವ್ಯಾಂಗರಿಗೆ ೧೫ ವರ್ಷಗಳ ವಿನಾಯಿತಿ ಇದೆ