ಚಿಕ್ಕಮಗಳೂರು: ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಜೆವಿಎಸ್ ಕಾಲೇಜಿಗೆ ಶೇಕಡ ೧೦೦ ರ? ಫಲಿತಾಂಶ ಬಂದಿರುವುದು ಶಾಲೆಗೆ ಹಾಗೂ ಪೋ?ಕರಿಗೆ ಮತ್ತು ಶಿಕ್ಷಕ ವೃಂದಕ್ಕೆ ಅತೀವ ಸಂತಸ ತಂದಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಹ? ವ್ಯಕ್ತಪಡಿಸಿದ್ದಾರೆ.

ಬುಧವಾರ ಜೆವಿಎಸ್ ಕಾಲೇಜಿನ ಆವರಣದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಮಾತನಾಡಿ ನಮ್ಮ ಸಂಘದಿಂದ ನೆಡೆಸುತ್ತಿರುವ ಕಾಲೇಜಿನಲ್ಲಿ ನುರಿತ ಶಿಕ್ಷಕರಿಂದ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ನಮ್ಮ ಕಾಲೇಜಿನಲ್ಲಿ ಯಾವುದೇ ಡೋನೇಷನ್ ಪಡೆಯದೆ ಬಡ ಮಕ್ಕಳಿಗೆ ಅನುಕೂಲವಾಗುವಂತೆ ಶಿಕ್ಷಣ ನೀಡಲಾಗುತ್ತಿದೆ ಎಂದರು.

ವಿಜ್ಞಾನ ವಿಭಾಗದಲ್ಲಿ ೩೩ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು ಈ ಪೈಕಿ ಅತ್ಯುತ್ತಮ ಶ್ರೇಣಿಯಲ್ಲಿ ೬, ಪ್ರಥಮ ಶ್ರೇಣಿಯಲ್ಲಿ ೨೫ ಹಾಗೂ ದ್ವಿತೀಯ ಶ್ರೇಣಿಯಲ್ಲಿ ಇಬ್ಬರು ತೇರ್ಗಡೆ ಹೊಂದಿದ್ದು ಶೇಕಡ ೧೦೦ ಫಲಿತಾಂಶ ಬಂದಿದೆ ಎಂದು ಶ್ಲಾಘಿಸಿದರು.

ವಾಣಿಜ್ಯ ವಿಭಾಗದಲ್ಲಿ ೫೯ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು ಅತ್ಯುತ್ತಮ ೮, ಪ್ರಥಮ ದರ್ಜೆಯಲ್ಲಿ ೩೪, ದ್ವಿತೀಯ ದರ್ಜೆಯಲ್ಲಿ ೧೨, ಓರ್ವ ವಿದ್ಯಾರ್ಥಿ ಉತ್ತೀರ್ಣರಾಗಿದ್ದು, ೪ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಎಂದರು.

ಪ್ರಾಂಶುಪಾಲರಾದ ತೇಜಸ್ವಿನಿ ಮಾತನಾಡಿ, ವಿಜ್ಞಾನ ವಿಭಾಗದಲ್ಲಿ ಶೇಕಡ ೧೦೦ ಫಲಿತಾಂಶ ಬಂದಿದ್ದು ಇದಕ್ಕೆ ಶ್ರಮಿಸಿದ ಶಿಕ್ಷಕರು ಹಾಗೂ ಪೋ?ಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಲಕ್ಷ್ಮಣ್‌ಗೌಡ, ನಿರ್ದೇಶಕರಾದ ಕೆ.ಕೆ.ಮನುಕುಮಾರ್, ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರುಗಳಾದ ಅನ್ನಪೂರ್ಣ, ನಫೀಸ ಮಿಶ್ರಿಯ, ತಸ್ಮಯ ಭಾನು ಹಾಗೂ ವಾಣಿಜ್ಯ ವಿಭಾಗದಲ್ಲಿ ಮದೀಯ ಕೌಸರ್, ನಜಿಫ ಅಪ್ಸರ್, ಸಭಾ ಸಾಧಿಯ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

100 percent result for JVS College