ಬೆಂಗಳೂರು:  ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ. ಆದಾಯ ತೆರಿಗೆ ಇಲಾಖೆ , ಪೋಲಿಸ್ ಇಲಾಖೆ, ವಿಚಕ್ಷಣ ದಳ, ಸ್ಥಿರ ಕಣ್ಗಾವಲು ಸೇರಿದಂತೆ ವಿವಿಧ ತಂಡಗಳಿಂದ ಜಪ್ತಿ ಮಾಡಿದ ವಿವರ ಕೇಳಿದ್ರೆ ಶಾಕ್ ಆಗ್ತೀರಾ! ಚುನಾವಣೆ ಘೋಷಣೆಯಾದ ದಿನದಿಂದ ಇಲ್ಲಿಯ ತನಕ ಅಂದರೆ 12 ದಿನಗಳಲ್ಲಿ ಲೆಕ್ಕವಿಲ್ಲದಷ್ಟು ಹಣ, ಚಿನ್ನ ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಸಂಪೂರ್ಣ ವಿವರ ಇಲ್ಲಿದೆ. ಎಲ್ಲಾ ತಂಡಗಳಿಂದ ಒಟ್ಟು 47,43,85,902 ಮೌಲ್ಯದ  ನಗದು ಸೇರಿದಂತೆ ಮಧ್ಯ, ಮಾದಕ ದ್ರವ್ಯ ಇತ್ಯಾದಿ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.

ಮಾರ್ಚ್ 23, 2023 ರಿಂದ ಇಲ್ಲಿಯ ತನಕ ಜಪ್ತಿ ಮಾಡಿದ ವಿವರ ಇಂತಿದೆ:

ರಾಜ್ಯದಲ್ಲಿ ಒಟ್ಟು 12,82,94,736/- ನಗದು ವಶಪಡಿಸಿಕೊಳ್ಳಲಾಗಿದೆ.
16,02,76,775/- ಮೌಲ್ಯದ 2,78,798 ಲೀಟರ್ ಮಧ್ಯ ವಶಪಡಿಸಿಕೊಳ್ಳಲಾಗಿದೆ.
41,26,155 ಮೌಲ್ಯದ 79.44 ಕೆ.ಜಿ ಮಾದಕ ದ್ರವ್ಯ ವಶಕ್ಕೆ ಪಡೆಯಲಾಗಿದೆ.
ಅಬಕಾರಿ ಇಲಾಖೆ 450 ಗಂಭೀರ ಪ್ರಕರಣ ಹಾಗೂ ಮಧ್ಯದ ಪರವಾನಗಿ ಉಲ್ಲಂಘಿಸಿದ 305 ಪ್ರಕರಣಗಳು ಸೇರಿ ಒಟ್ಟು 1,238 ಪ್ರಕರಣ ದಾಖಲಿಸಿದೆ ಮತ್ತು 270 ವಿವಿಧ ಮಾದರಿಯ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ.
6,72,96,733  ಮೌಲ್ಯದ  13.575 ಕೆ.ಜಿ ಬಂಗಾರ ವಶಕ್ಕೆ ಪಡೆಯಲಾಗಿದೆ.
63,98,560 ಮೌಲ್ಯದ 88.763 ಕೆ.ಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ.
10,79,92,943 ಮೌಲ್ಯದ ಉಚಿತ ಕೊಡುಗೆ, ಉಡುಗೊರೆಗಳನ್ನ ವಶಕ್ಕೆ ಪಡೆಯಲಾಗಿದೆ.
ನಗದು, ಮಧ್ಯ, ಮಾದಕ ದ್ರವ್ಯ, ಉಡುಗೊರೆ, ಅಮೂಲ್ಯ ಲೋಹಗಳನ್ನ ವಶಪಡಿಸಿಕೊಂಡಿರುವ ಬಗ್ಗೆ ಪೊಲೀಸ್  ಇಲಾಖೆ  ಒಟ್ಟು 316 FIR ದಾಖಲಿಸಿದೆ.
ರಾಜಕೀಯ ಸೇರ್ತಾರಾ ನಟ RISHABH SHETTY? ಗೆಳೆಯ ನಟ ರಕ್ಷಿತ್ ಏನಂದ್ರು?

ಶಸ್ತ್ರಾಸ್ತ್ರಕ್ಕೆ ಸಂಬಂಧಿಸಿದ ವಿವರ:

ಒಟ್ಟು 31,486 ಶಸ್ತ್ರಾಸ್ತ್ರಗಳನ್ನ ಜಮೆ ಮಾಡಿಸಿಕೊಳ್ಳಲಾಗಿದೆ..
10 ಶಸ್ತ್ರಾಸ್ತ್ರಗಳನ್ನ ವಶಕ್ಕೆ ಪಡೆಯಲಾಗಿದೆ.
7 ಶಸ್ತ್ರಾಸ್ತ್ರ ಪರವಾನಗಿ ರದ್ದು.
CRPC ಕಾಯ್ದೆಯಡಿ‌ 1,416 ಪ್ರಕರಣಗಳು ದಾಖಲು.
1,869 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ.
3554 ಜಾಮೀನು ರಹಿತ ವಾರೆಂಟ್ ಜಾರಿ.
ನಗದು, ಮಧ್ಯ, ಮಾದಕ ದ್ರವ್ಯ, ಉಡುಗೊರೆ, ಅಮೂಲ್ಯ ಲೋಹಗಳನ್ನ ವಶಪಡಿಸಿಕೊಂಡಿರುವ ಬಗ್ಗೆ ಪೊಲೀಸ್  ಇಲಾಖೆ  ಒಟ್ಟು 316 FIR ದಾಖಲಿಸಿದೆ.

12 crores in cash 16 crores worth of liquor 6 crores worth of gold were seized