ಬೀಜಿಂಗ್​: ಚೀನಾದ ಅತ್ಯಂತ ವಯೋವೃದ್ಧೆಯಾದ ಅಲಿಮಿಹನ್​ ಸೆಯಿತಿ  135ನೇ ವಯಸ್ಸಿನಲ್ಲಿ ಶನಿವಾರ ನಿಧನರಾಗಿದ್ದಾರೆ. ಕ್ಸಿನ್ಜಿಯಾಂಗ್​ ಉಯ್ಘಿರ್​ ಸ್ವಾಯತ್ತ ಪ್ರದೇಶದ ಕೊಮುಕ್ಸೆರಿಕ್​ ಪಟ್ಟಣದ ನಿವಾಸಿಯಾಗಿದ್ದ ಅವರು, ಸರಳ  ಜೀವನಶೈಲಿ. ಮಿತ ಆಹಾರ ಕ್ರಮವನ್ನು ಅನುಸರಿಸುತ್ತಿದ್ದರು. ಇದೇ ಅವರ ದೀರ್ಘಾಯುಷ್ಯದ ಗುಟ್ಟು ಎಂದು  ಸ್ಥಳಿಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈಕೆಯ ಹೆಸರು ಗಿನ್ನೆಸ್​ ಬುಕ್​ ಆ್​ ವರ್ಲ್ಡ್​ ರೆಕಾರ್ಡ್​ಗೆ ಸೇರಿಲ್ಲ. 118 ವರ್ಷದ ಜಪಾನ್​ನ ಕೇನ್​ ತನಕಾ  ಅತ್ಯಂತ ವೃದ್ಧ ಮಹಿಳೆ ಎನ್ನಿಸಿದ್ದಾರೆ. ಪುರುಷರಲ್ಲಿ ಸ್ಪೇನ್​ನ 113 ವರ್ಷದ ಸ್ಯಾಟಿನಿರ್ನೊ ಡೆ ಲಾ ಫ್ಯೂಯೆಂಟೆ ಗಾಸಿರ್ಯಾ ಅತಿ ಹಿರಿಯ ವ್ಯಕ್ತಿಯಾಗಿದ್ದಾರೆ. ಶತಾಯಿಷಿಗಳಲ್ಲಿ ಪುರಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಿದೆ.

1886ರ ಜೂನ್​ 25ರಂದು ಜನಿಸಿದ್ದ ಅಲಿಮಿಹನ್​ ಸೆಯಿತಿ, 2013ರಲ್ಲಿ ಚೀನಾ ಅಸೋಸಿಯೇನ್​ ಆಫ್‌ ಜೆರಂಟಾಲಜಿ ಆ್ಯಂಡ್​ ಜೆರಿಯಾಟ್ರಿಕ್ಸ್​ ಪ್ರಕಟಿಸಿದ್ದ ಅತ್ಯಂತ ಹಿರಿಯ ನಾಗರಿಕರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದರು.  ಕೋಮುಕ್ಸೆರಿಕ್ಸ್​ ವೃದ್ಧರ ಪಟ್ಟಣವಾಗಿದ್ದು, 90 ದಾಟಿದ ವೃದ್ಧರು ಅಧಿಕ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಇದನ್ನು ದೀರ್ಘಾಯುಷ್ಯದ ಪಟ್ಟಣ’ ಎಂದು ಕರೆಯಲಾಗುತ್ತದೆ.

ಸೆಯಿತಿ ಆಹಾರ ವಿಷಯದಲ್ಲಿ ಶಿಸ್ತಿನಿಂದ ಇದ್ದರು. ಮನೆಯಂಗಳದಲ್ಲಿ ಕುಳಿತು ಬಿಸಿಲು ಕಾಯಿಸಿಕೊಳ್ಳುವುದನ್ನು ಇಷ್ಟಪಡುತ್ತಿದ್ದರು. ಕೆಲವೊಮ್ಮೆ ತಮ್ಮ ಮರಿಮಕ್ಕಳ ಆರೈಕೆಯಲ್ಲಿ ಸಹಾಯ ಮಾಡುತ್ತಿದ್ದರು ಎಂದು ವರದಿ ತಿಳಿಸಿದೆ.

Oldest person in China dies at 135

ಇದನ್ನು ಓದಿ: Meta: ಮಹಿಳೆಯರನ್ನು ರಕ್ಷಿಸಲು ಭಾರತಕ್ಕಾಗಿ ಸುರಕ್ಷತಾ ಯೋಜನೆಗಳನ್ನು ಘೋಷಿಸಿದ ಮೆಟಾ

ಇದನ್ನೂ ಓದಿ: Old woman who gave birth to a baby: 70ರ ಹರೆಯದಲ್ಲಿ ಮೊದಲ ಮಗುವಿಗೆ ಜನ್ಮನೀಡಿದ ವೃದ್ಧೆ