ವಾಟ್ಸ್ ಆಪ್ ತನ್ನ ವೇದಿಕೆಯನ್ನು ದುರುಪಯೋಗಪಡಿಸಿಕೊಂಡು, ಹಾನಿಕಾರಕ ಸಂದೇಶಗಳನ್ನು ಕಳುಹಿಸುತ್ತಿದ್ದ 20.7 ಲಕ್ಷ ಭಾರತೀಯರ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸ್ ಆಪ್ ತಿಳಿಸಿದೆ.

ಭಾರತದ ಕಾನೂನುಗಳು ಹಾಗೂ ವಾಟ್ಸಾಪ್‌ ನ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ನಾವು ಇ-ಮೇಲ್ ಗಳ ಮೂಲಕ ಪಡೆದ 420 ದೂರುಗಳನ್ನು ವಾಟ್ಸ್ ಆಪ್ ಸ್ವೀಕರಿಸಿದ್ದು, ಆಗಸ್ಟ್ 1ರಿಂದ ಆಗಸ್ಟ್ 31ರ ನಡುವೆ ವಾಟ್ಸ್ ಆಪ್ 20.7 ಲಕ್ಷ ಖಾತೆಗಳ ಮೇಲೆ ನಿಷೇಧ ಹೇರಿದೆ.

ಬಳಕೆದಾರರ ದೂರುಗಳ ಅನ್ವಯ ವಾಟ್ಸ್ ಆಪ್ ಈ ಕ್ರಮ ಕೈಗೊಂಡಿದ್ದು, ವಾಟ್ಸ್ಆಪ್ ವೇದಿಯಕೆಯನ್ನು ಅಗತ್ಯ ಹಾಗೂ ಸುರುಪಯೋಗಕ್ಕಾಗಿ ಬಳಸುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಹೊಸ ಐಟಿ ನಿಯಮಗಳ ಅನುಸಾರ ಜುಲೈ ನಲ್ಲಿ ಕೂಡ 30.2 ಲಕ್ಷ ಖಾತೆಗಳನ್ನು ವಾಟ್ಸ್ ಆಪ್ ನಿಷೇಧಿಸಿತ್ತು.